ವಾಟ್ಸ್ಆ್ಯಪ್ ಬಳಕೆದಾರರಿಗೆ ಶುಭ ಸುದ್ದಿ!

Update: 2016-12-08 07:58 GMT

ನ್ಯೂಯಾರ್ಕ್,ಡಿ.8 : ಆಂಡ್ರಾಯ್ಡ್ ಫೋನ್ ಬಳಕೆದಾರರಿಗಾಗಿ ವಾಟ್ಸ್ ಆ್ಯಪ್ ಎರಡು ಹೊಸ ಫೀಚರ್ ಗಳನ್ನು ಹೊರತಂದಿದೆ. ಈ ಹಿಂದಿನ ಆ್ಯಪ್ ನಲ್ಲಿ ಈ ಫೀಚರುಗಳು ಬೇಟಾದಲ್ಲಿ ಲಭ್ಯವಿದ್ದರೂ ಇದೀಗ ಸಾಮಾನ್ಯ ಆಂಡ್ರಾಯ್ಡ್ ಬಳಕೆದಾರರಿಗೂ ಅದು ಲಭ್ಯವಾಗಲಿದೆ.

ವೀಡಿಯೋ ಒಂದು ಡೌನ್ ಲೋಡ್ ಆಗುತ್ತಿರುವಂತೆಯೇ ಅದನ್ನು ವೀಕ್ಷಿಸುವ ಅವಕಾಶವನ್ನು ಮೊದಲ ಫೀಚರ್ ಒದಗಿಸಲಿದೆ. ಇದರರ್ಥ ಬಳಕೆದಾರರಿಗೆ ವೀಡಿಯೋ ಡೌನ್ ಲೋಡ್ ಮಾಡಲಾಗದು ಎಂದಲ್ಲ. ಪ್ಲೇ ಬಟನ್ ಕ್ಲಿಕ್ ಮಾಡಿದ ಕೂಡಲೇ ಬಳಕೆದಾರರು ವೀಡಿಯೋ ನೋಡಬಹುದಾಗಿದೆ.

ಆರು ಸೆಕೆಂಡುಗಳ ತನಕದ ಸಣ್ಣ ವೀಡಿಯೋಗಳನ್ನು ಜಿಐಎಫ್ ಇಮೇಜ್ ಆಗಿ ಪರಿವರ್ತಿಸಿ ಅದನ್ನು ಅವರ ವಾಟ್ಸ್ ಅಪ್ ಕಾಂಟಾಕ್ಟ್ ಗಳೊಂದಿಗೆ ನೇರವಾಗಿ ಶೇರ್ ಮಾಡಲು ಎರಡನೇ ಫೀಚರ್ ಅನುವು ಮಾಡಿಕೊಡುತ್ತದೆ.

ಕಳೆದ ತಿಂಗಳು ವಾಟ್ಸ್ ಆ್ಯಪ್ ಹೊಸ ವೀಡಿಯೋ ಕಾಲಿಂಗ್ ಫೀಚರ್ ಸಾದರಪಡಿಸಿದ್ದು ಈ ಫೀಚರ್ ಹಲವಾರು ಅಪ್ ಡೇಟ್ ಗಳಿಗೆ ಪ್ರಸ್ತುತ ಒಳಗಾಗುತ್ತಿದೆ.

ಈ ವರ್ಷದ ಅಂತ್ಯಕ್ಕೆ ವಾಟ್ಸ್ ಆ್ಯಪ್ ಕೆಲವು ನಿರ್ದಿಷ್ಟ ಮೊಬೈಲ್ ಫೋನುಗಳಲ್ಲಿ ಲಭ್ಯವಾಗುವುದಿಲ್ಲ. ಈ ಫೋನುಗಳಲ್ಲಿ ವಾಟ್ಸ್ ಆ್ಯಪ್ ಫೀಚರುಗಳು ಪೂರ್ಣಪ್ರಮಾಣದಲ್ಲಿ ಲಭ್ಯವಾಗಲು ಸಾಧ್ಯವಾಗುವುದಿಲ್ಲವಾದ ಕಾರಣ ಈ ಕ್ರಮ ಕೈಗೊಳ್ಳಲಾಗುತ್ತಿದೆಯೆಂಬ ಕಾರಣ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News