ಈಳವರು ಹಾಗೂ ಕ್ರೈಸ್ತರ ಆಕ್ರೋಶಕ್ಕೆ ತುತ್ತಾದ ಕೇರಳದ ಸಾಹಿತ್ಯ ನಿಯತಕಾಲಿಕ

Update: 2016-12-14 04:20 GMT

ಕೊಚ್ಚಿನ್, ಡಿ.14: ಮಲೆಯಾಳ ಮನೋರಮಾ ಪತ್ರಿಕಾ ಸಮೂಹ ಹೊರತರುವ 125 ವರ್ಷ ಹಳೆಯ ಭಾಷಾಪೋಷಿಣಿ ನಿಯತಕಾಲಿಕ ಇದೀಗ ಈಳವರು ಹಾಗೂ ಕ್ರೈಸ್ತರ ಆಕ್ರೋಶಕ್ಕೆ ತುತ್ತಾಗಿದೆ.

ಇದರಿಂದ ಎಚ್ಚೆತ್ತುಕೊಂಡ ಮಲೆಯಾಳ ಮನೋರಮಾ ದೈನಿಕ ಮುಖಪುಟಲ್ಲಿ ಕ್ಷಮೆ ಯಾಚನೆ ಮಾಡಿದ್ದು, ಡಿಸೆಂಬರ್ 6ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದ ನಿಯತಕಾಲಿಕದ ಎಲ್ಲ ಸಂಚಿಕೆಗಳನ್ನು ವಾಪಸ್ ಪಡೆದುಕೊಂಡಿದೆ. ಶ್ರೀ ನಾರಾಯಣಗುರು ಅವರ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿರುವುದು ಈಳವರನ್ನು ಕೆರಳಿಸಿದೆ. ಅಂತೆಯೇ ಒಳಪುಟದಲ್ಲಿ ಟಾಮ್ ವೆಟ್ಟಕುಳಿ ಅವರು ರಚಿಸಿದ ಚಿತ್ರವನ್ನು ಬಳಸಿಕೊಂಡಿರುವುದು ಕ್ರೈಸ್ತ ಸಮುದಾಯವನ್ನು ಕೆರಳಿಸಿದೆ.

ಮಲೆಯಾಳ ಮನೋರಮಾ ಮುಖಪುಟದಲ್ಲಿ ಈ ಬಗ್ಗೆ ಸಂಪಾದಕರು ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಭಾಷಾ ಪೋಷಿಣಿಯ ಡಿಸೆಂಬರ್ ಸಂಚಿಕೆಯ ಮುಖಪುಟ ಹಾಗೂ ಒಳಪುಟದಲ್ಲಿ ಓದುಗರ ಮನಸ್ಸಿಗೆ ನೋವಾಗುವ ಚಿತ್ರವನ್ನು ಪ್ರಕಟಿಸಿದ್ದಕ್ಕಾಗಿ ಬೇಷರತ್ ಕ್ಷಮೆ ಯಾಚಿಸುವುದಾಗಿ ಹೇಳಿದ್ದಾರೆ. ಇದು ಮುಗಿದ ಅಧ್ಯಾಯ ಎಂದು ಸಂಪಾದಕ ಥಾಮಸ್ ಜಾಕೋಬ್ ಹೇಳಿದ್ದಾರೆ.

ಈ ಸಂಚಿಕೆಯಲ್ಲಿ ಟಾಮ್ ವೆಟ್ಟಿಕುಳಿ ಅವರ ಚಿತ್ರವನ್ನು ಸಿ.ಗೋಪನ್ ಅವರ ನಾಟಕ "ಮೃದ್ವಂಗುದೇಹ್ ರ್ದುಮೃತ್ಯು" (ದುರ್ಬಲನ ಅಸಹಜ ಸಾವು) ಜತೆಗೆ ಬಳಸಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News