ಇಸ್ಲಾಮಿಕ್ ಮೂಲಭೂತವಾದವನ್ನು ಸಂಪೂರ್ಣ ನಿರ್ಮೂಲನೆ ಮಾಡುತ್ತೇವೆ: ಟ್ರಂಪ್

Update: 2017-01-21 04:46 GMT

ವಾಷಿಂಗ್ಟನ್, ಜ.21: ಅಮೆರಿಕದಲ್ಲಿ ಟ್ರಂಪ್ ಶಕೆ ಆರಂಭವಾಗಿದೆ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಬರಾಕ್ ಒಬಾಮ ಅವರ ಉತ್ತರಾಧಿಕಾರಿಯಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ವರ್ಣರಂಜಿತ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರು ಅಮೆರಿಕದ 45ನೆ ಅಧ್ಯಕ್ಷ.

ಅಬ್ರಹಾಂ ಲಿಂಕನ್ ಪ್ರಮಾಣವಚನ ಸ್ವೀಕರಿಸಿದ್ದ ಪವಿತ್ರ ಬೈಬಲ್ ಮೇಲೆ ಕೈ ಇಟ್ಟು, ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಬೋಧಿಸಿದ 35 ಶಬ್ದಗಳ ಪ್ರತಿಜ್ಞಾವಿಧಿಯನ್ನು ಟ್ರಂಪ್ ಪುನರುಚ್ಚರಿಸುವ ಮೂಲಕ ಪ್ರಮಾಣವಚನ ಸ್ವೀಕರಿಸಿದರು.

ಅಮೆರಿಕ ಅಧ್ಯಕ್ಷರು ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ಘೋಷಿಸಿದ ಪ್ರಮುಖ ಅಂಶಗಳು ಇವು.

* ನಾವು ಅಧಿಕಾರವನ್ನು ವಾಷಿಂಗ್ಟನ್‌ನಿಂದ ವರ್ಗಾಯಿಸಿ ನಿಮ್ಮ ಕೈಗೆ ನೀಡುತ್ತೇವೆ.

* ಈ ಕ್ಷಣ, ಇದು ನಿಮ್ಮದು. ಇಲ್ಲಿ ಸೇರಿರುವ ಪ್ರತಿಯೊಬ್ಬರಿಗಾಗಿ ಇರುವ ಕ್ಷಣ ಮತ್ತು ಇದನ್ನು ಕುತೂಹಲದಿಂದ ನೋಡುತ್ತಿರುವ ಎಲ್ಲ ಅಮೆರಿಕನ್ನರ ಕ್ಷಣ.

* ಕಾರ್ಯಸಾಧನೆಗಾಗಿ ನಾವು ಸವಾಲು ಎದುರಿಸುತ್ತೇವೆ.

* ಮುಂದಿನ ಹಲವು ವರ್ಷಗಳವರೆಗೆ ಅಮೆರಿಕದ ಹಾಗೂ ವಿಶ್ವದ ಭವಿಷ್ಯವನ್ನು ನಾವು ಒಟ್ಟಾಗಿ ನಿರ್ಧರಿಸೋಣ. ಅಮೆರಿಕ ಸದಾ ಅಗ್ರಗಣ್ಯವಾಗಿರುತ್ತದೆ.

* ಇಸ್ಲಾಮಿಕ್ ಮೂಲಭೂತವಾದವನ್ನು ಭೂಮಿಯಿಂದ ಸಂಪೂರ್ಣ ನಿರ್ಮೂಲನೆ ಮಾಡೋಣ.

* ದೇಶ ಇರುವುದು ಜನರ ರಕ್ಷಣೆಗೆ. ಇಂದು ಜನ ಆಡಳಿತಗಾರರಾಗಿದ್ದಾರೆ.

* ಜನರ ಕಗ್ಗೊಲೆ ಇಲ್ಲಿಗೆ ಅಂತ್ಯ.

* ಇಂದಿನಿಂದ ಅಮೆರಿಕವೇ ಅಗ್ರಗಣ್ಯ. ನಮ್ಮ ಗಡಿಯನ್ನು ನಾವು ಕಾಪಾಡಿಕೊಳ್ಳಬೇಕು.

* ನಾವು ರಾಷ್ಟ್ರಪ್ರೇಮಕ್ಕಾಗಿ ತೆರೆದುಕೊಂಡಾಗ, ಪಕ್ಷಪಾತಕ್ಕೆ ಅವಕಾಶವೇ ಇಲ್ಲ.

* ಕೇವಲ ಮಾತನಾಡಿ, ಕಾರ್ಯಸಾಧನೆ ಮಾಡದ ರಾಜಕಾರಣಿಗಳನ್ನು ಒಪ್ಪಿಕೊಳ್ಳಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News