ನ್ಯಾಯಾ... ಎಲ್ಲಿದೆ ?

Update: 2017-01-23 10:52 GMT

ಹೊಸದಿಲ್ಲಿ, ಜ.23: ದೇಶದಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ವಕೀಲರಲ್ಲಿ ಕೇವಲ 55%ದಿಂದ 60%ದಷ್ಟು ವಕೀಲರು ಮಾತ್ರ ನೈಜ ವಕೀಲರಾಗಿದ್ದಾರೆಂಬ ಆಘಾತಕಾರಿ ಮಾಹಿತಿಯನ್ನು ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಜೆ.ಎಸ್.ಖೇಹರ್ ಅವರಿಗೆ ನೀಡಿದ್ದಾರೆ. ಎರಡು ವರ್ಷಗಳ ತನಕ ನಡೆಸಲಾದ ದಾಖಲೆಯ ಪರಿಶೀಲನೆ ನಂತರ ಈ ಮಾಹಿತಿ ನೀಡಲಾಗಿದೆ.

ಖೇಹರ್ ಅವರಿಗಾಗಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಿಶ್ರಾ, ಕೌನ್ಸಿಲಿಗೆ ದಾಖಲೆಗಳ ಪರಿಶೀಲನೆ ಸಂದರ್ಭ ಕೇವಲ 6.5 ಲಕ್ಷ ಅರ್ಜಿಗಳು ಬಂದಿದ್ದರೆ, 2012ರ ಚುನಾವಣಾ ಸಂಬಂಧಿತ ಅಂಕಿಅಂಶಗಳಲ್ಲಿ ದೇಶದ 14 ಲಕ್ಷ ಮತದಾರರು ವಕೀಲರು ಎಂಬ ಮಾಹಿತಿಯಿತ್ತು ಎಂದಿದ್ದಾರೆ.

ಅಕ್ರಮವಾಗಿ ವಕೀಲ ವೃತ್ತಿಯನ್ನು ನಿರ್ವಹಿಸುವವರನ್ನು ವೃತ್ತಿಯಿಂದ ಹೊರಹೋಗುವಂತೆ ಮಾಡಲಾಗುವುದು ಹಾಗೂ ಇದರಿಂದ ವಕೀಲ ವೃತ್ತಿಯಲ್ಲಿರುವವರ ಗುಣಮಟ್ಟವೂ ವೃದ್ಧಿಯಾಗುವುದು’’ ಎಂದು ಮಿಶ್ರಾ ಹೇಳಿದ್ದಾರೆ.

ನಕಲಿ ವಕೀಲರಿಗೆ ಸಂಬಂಧಿಸಿದಂತೆ ಕೌನ್ಸಿಲ್ ತನಿಖೆಯೊಂದನ್ನು ನಡೆಸಬೇಕೆಂದು ಜಸ್ಟಿಸ್ ಖೇಹರ್ ಸಲಹೆ ನೀಡಿದ್ದಾರೆನ್ನಲಾಗಿದೆ. ‘‘ನಕಲಿ ಪದವಿಗಳನ್ನು ಹೊಂದಿದವರ ವಿಚಾರ ಮಾತ್ರವಲ್ಲ, ಪದವಿಯನ್ನೇ ಪಡೆಯದವರ ವಿಚಾರ ಇದಾಗಿದೆ’’ ಎಂದು ಜಸ್ಟಿಸ್ ಖೇಹರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News