ಬೆಂಗಳೂರಿನಿಂದ ಕಾರವಾರಕ್ಕೆ ಕಾಮುಕ ಪ್ರಿನ್ಸಿಪಾಲ್ ವರ್ಗ!

Update: 2017-02-13 04:57 GMT

 ಬೆಂಗಳೂರು, ಫೆ.13: ಶಾಲಾ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ನಗರದ ಪ್ರತಿಷ್ಠಿತ ಕಾಲೇಜಿನ ಪ್ರಿನ್ಸಿಪಾಲ್‌ರನ್ನು ಏಕಾಏಕಿಯಾಗಿ ಬೆಂಗಳೂರಿನಿಂದ ಕಾರವಾರಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ಕಾಮುಕ ಪ್ರಿನ್ಸಿಪಾಲ್ ಕುಮಾರ್ ಠಾಕೂರ್ ವಿರುದ್ಧ ಮಕ್ಕಳಿಗೆ ಲೈಂಗಿಕ ಕಿರುಕುಳ, ಕೃತ್ಯ ಖಂಡಿಸಿದ್ದ ಶಿಕ್ಷಕರಿಗೆ ಕಿರುಕುಳ ನೀಡಿದ್ದಲ್ಲದೆ, ಅಶ್ಲೀಲ ಸಂದೇಶ ಕಳುಹಿಸಿದ್ದ ಆರೋಪವಿದ್ದು, ಈ ಸಂಬಂಧ ಜ.31 ರಂದು ಬಂಧಿಸಲ್ಪಟ್ಟು ಫೆ.1ಕ್ಕೆ ಬಿಡುಗಡೆಯಾಗಿದ್ದರು.

ಶಾಲಾ ಶಿಕ್ಷಕಿಯರು ಜ.14 ರಂದು ಚೈಲ್ಡ್‌ಲೈನ್‌ಗೆ ದೂರು ನೀಡಿದ್ದರು. ನೋಡಲ್ ಅಧಿಕಾರಿ ಜ.25 ರಂದು ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಫೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸದೇ ಬೇರೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಠಿಣ ಶಿಕ್ಷೆಯಿಂದ ಪಾರಾದ ಕಾಮುಕ ಶಿಕ್ಷಕ ಇದೀಗ ಬೇರೆಡೆಗೆ ವರ್ಗವಾಗಿದ್ದಾರೆ.

ಶಾಲಾ ಆಡಳಿತ ಮಂಡಳಿ ಪ್ರಿನ್ಸಿಪಾಲ್‌ರನ್ನು ರಜೆ ಮೇಲೆ ಕಳುಹಿಸಿತ್ತು ಇದೀಗ ಪ್ರಿನ್ಸಿಪಾಲ್‌ರನ್ನು ಕಾರಾವರಕ್ಕೆ ವರ್ಗ ಮಾಡಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News