ಇಸ್ರೋದಿಂದ ಐತಿಹಾಸಿಕ ಸಾಧನೆ; ಒಂದೇ ರಾಕೆಟ್ ನಿಂದ 104 ಉಪಗ್ರಹ ಉಡಾವಣೆ

Update: 2017-02-15 05:03 GMT

ಶ್ರೀಹರಿಕೋಟಾ, ಫೆ.15:  ಒಂದೇ ರಾಕೆಟ್ ನಿಂದ 104 ಉಪಗ್ರಹಗಳನ್ನು  ಉಡಾವಣೆ ಮಾಡುವ ಮೂಲಕ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ  ಇಂದು ಐತಿಹಾಸಿಕ ಸಾಧನೆ ಮಾಡಿದೆ.
ಆಂಧ್ರಪ್ರದೇಶದ  ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9.28ರ ಹೊತ್ತಿಗೆ 104ಉಪಗ್ರಹಗಳನ್ನು ಹೊತ್ತು ಪಿಎಸ್‌ಎಲ್ ವಿ -ಸಿ37ರಾಕೆಟ್‌ ನಭಕ್ಕೆ ಹಾರಿದೆ. 

104 ಉಪಗ್ರಹಗಳ ಪೈಕಿ ಭಾರತದ  ಕಾರ್ಟೋಸ್ಯಾಟ್–2, ಐಎನ್‌ಎಸ್‌-1ಎ ಹಾಗೂ ಐಎನ್‌ಎಸ್‌–1ಬಿ  ಸೇರಿದಂತೆ  ಮೂರು ಉಪಗ್ರಹಗಳು. ಅಮೆರಿಕದ 88 ಚಿಕ್ಕ ಉಪಗ್ರಹ(ಕ್ಯೂಬ್‌ಸ್ಯಾಟ್‌)ಗಳು ಕಕ್ಷೆ ಸೇರಿದೆ.
ಅಮೆರಿಕ, ಜರ್ಮನಿ, ಇಸ್ರೇಲ್, ಯುಎಇ, ಹಾಲೆಂಡ್, ಬೆಲ್ಜಿಯಂ ಸೇರಿದಂತೆ ವಿದೇಶದ 101 ವಾಣಿಜ್ಯ ಉದ್ದೇಶಿತ ಉಪಗ್ರಹಗಳು ಒಳಗೊಂಡಿವೆ.

ಭಾರತವನ್ನು ಹೊರತುಪಡಿಸಿದರೆ ಬಾಹ್ಯಾಕಾಶದಲ್ಲಿ ಯಾವುದೇ ದೇಶ ಇಂತಹ ಸಾಧನೆ ಮಾಡಿಲ್ಲ.

2014ರಲ್ಲಿ ರಷ್ಯಾ ಒಂದೇ ರಾಕೆಟ್ ನಲ್ಲಿ 37 ಉಪಗ್ರಹಗಳನ್ನು ಉಡಾಯಿಸಿರುವುದು ಈ ವರೆಗಿನ ದೊಡ್ಡ ಸಾಧನೆಯಾಗಿತ್ತು. ರಷ್ಯಾ ದಾಖಲೆ ಮುರಿದು ಭಾರತ   ಇದೀಗ ಐತಿಹಾಸಿಕ ದಾಖಲೆ ನಿರ್ಮಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News