ಉತ್ತರ ಪ್ರದೇಶದಲ್ಲಿ ಬಿಎಸ್ಪಿಯ ಮುಸ್ಲಿಂ ಮುಖಂಡನ ಹತ್ಯೆ

Update: 2017-03-20 06:57 GMT

 ಅಲಹಾಬಾದ್, ಮಾ.20:  ಶಸ್ತ್ರ ಸರ್ಜಿತ ದುಷ್ಕರ್ಮಿಗಳಿಬ್ಬರು  ಕಳೆದ ರಾತ್ರಿ ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಮುಖಂಡ ಮುಹಮ್ಮದ್ ಶಮಿ ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 
ಅಲಹಾಬಾದ್ ನ ಮೌವ್ ಐಮಾ ಎಂಬಲ್ಲಿರುವ   ಕಚೇರಿ ಬಳಿ ಮುಹಮ್ಮದ್ ಶಮಿ ಅವರು ಕಾರು ಪಾರ್ಕ್ ಮಾಡುತ್ತಿದ್ದ  ವೇಳೆ ಬೈಕ್ ನಲ್ಲಿ ಬಂದ ಅಪರಿಚಿತರು ಶಮಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. 
ಗಂಭೀರ ಗಾಯಗೊಂಡ 60 ವರ್ಷದ ಮುಹಮ್ಮದ್ ಶಮಿ ಗುಂಡೇಟಿನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

2002ರಲ್ಲಿ ಕುಂಡಾ ಕ್ಷೇತ್ರದಿಂದ ರಘುರಾಜ್‌ ಪ್ರತಾಪ್‌ ಸಿಂಗ್‌ ಅಲಿಯಾಸ್‌ ರಾಜಾ ಭಯ್ಯಾ ವಿರುದ್ಧ ಶಮಿ ಸ್ಪರ್ಧಿಸಿದ್ದರು.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News