ನಾನು ನಿಮ್ಮ ಹುತಾತ್ಮನ ಮಗಳಲ್ಲ, ನಾನು ನನ್ನ ತಂದೆಯ ಮಗಳು: ಗುರ್ ಮೆಹರ್ ಕೌರ್

Update: 2017-04-13 05:14 GMT

ನಾನು ಯಾರು?

ಬಹುಶಃ ನಾನು ಒಂದು ವಾರದ ಹಿಂದೆ ನನ್ನ ಸಹಜ, ಚೇತೋಹಾರಿ ಧ್ವನಿಯಲ್ಲಿ ಯುದ್ಧದ ಪ್ರತಿಬಂಧಕಗಳ ಉಲ್ಲೇಖವಿಲ್ಲದೇ ಉತ್ತರಿಸಬಹುದಾದ ಪ್ರಶ್ನೆಯಾಗಿತ್ತು. ಆದರೆ ಈಗ ನನಗೆ ಆ ಖಾತ್ರಿ ಇಲ್ಲ.

ನಾನು ಯಾರು ಎಂದು ರಾಕ್ಷಸರು ಬಿಂಬಿಸಿದ ವ್ಯಕ್ತಿಯೇ?

ಮಾಧ್ಯಮ ಮಾಮೂಲಿಯಾಗಿ ಬಿಂಬಿಸುವ ಅಥವಾ ಚಿತ್ರಿಸುವ ವ್ಯಕ್ತಿಯೇ?

ಸೆಲೆಬ್ರಿಟಿಗಳು ನನ್ನನ್ನು ಕಾಣುವ ರೀತಿಯ ವ್ಯಕ್ತಿಯೇ?

ಅಲ್ಲ. ನಾನು ಅದ್ಯಾವುದೂ ಅಲ್ಲ. ನಿಮ್ಮೆಲ್ಲ ಟಿವಿ ಪರದೆಗಳ ಮುಂದೆ ಮಿಂಚುವ, ಕೈಯಲ್ಲಿ ಪ್ರದರ್ಶಕ ಫಲಕವನ್ನು ಹಿಡಿದ, ಹುಬ್ಬೇರಿಸಿದ, ಸೆಲ್‌ಫೋನ್ ಕ್ಯಾಮರಾದ ಸಣ್ಣ ಲೆನ್ಸ್‌ಗಳು ನನ್ನನ್ನು ಗುರುತಿಸುವ ರೀತಿಯ ನನ್ನಂತೆ ಕಾಣುವ ಹುಡುಗಿಯೂ ಅಲ್ಲ. ಆ ಭಾವಚಿತ್ರದಲ್ಲಿ ಪ್ರತಿಫಲಿಸುವ ಆಕೆಯ ಯೋಚನೆಗಳ ತೀವ್ರತೆಯ ಐಡೆಂಟಿಟಿ ಮಾತ್ರ ನನ್ನ ಹೋಲಿಕೆ ಹೊಂದಿದೆ. ಆಕೆ ಉರಿಯಂತಿದ್ದಾಳೆ. ಅದು ನನಗೆ ಸಂಬಂಧಿಸಿದ ವಿಷಯ. ಆದರೆ ‘‘ಬ್ರೇಕಿಂಗ್ ನ್ಯೂಸ್ ಹೆಡ್‌ಲೈನ್ಸ್’’ ಮಾತ್ರ ಭಿನ್ನ ಕಥೆ ಹೇಳಿತ್ತು. ಆ ಶೀರ್ಷಿಕೆಗಳು ನನ್ನವಲ್ಲ.
ಹುತಾತ್ಮನ ಮಗಳು
ಹುತಾತ್ಮನ ಮಗಳು
ಹುತಾತ್ಮನ ಮಗಳು
ನಾನು ತಂದೆಯ ಮಗಳು. ನನ್ನ ತಂದೆ ಗುಲ್‌ಗುಲ್. ನಾನು ಅವರ ಬೊಂಬೆ. ನಾನು ಎರಡು ವರ್ಷದ, ಶಬ್ದಗಳನ್ನು ಅರ್ಥ ಮಾಡಿಕೊಳ್ಳಲಾಗದ ಅದರೆ ನನ್ನ ವಿಳಾಸಕ್ಕೆ ಬರೆದ ಪತ್ರದಲ್ಲಿ ರಚಿಸಿದ ಚಿತ್ರಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಕಲಾಗಾರ್ತಿ. ನಾನು ನನ್ನ ತಾಯಿಯ ಪಾಲಿಗೆ ತಲೆನೋವು. ಆಕೆಯ ಅಭಿಪ್ರಾಯದಂತೆ, ದುಡುಕಿನ ಮೂಡಿ ಬಾಲೆ. ಅದು ಆಕೆಯ ಪ್ರತಿಫಲನ. ದೊಡ್ಡ ಪಂದ್ಯಗಳಿಗೆ ಮುನ್ನ ಸಹೋದರಿಗೆ ಪಾಪ್ ಸಂಸ್ಕೃತಿಯ ಮಾರ್ಗದರ್ಶಕಿ ಹಾಗೂ ಜಗಳಗಂಟಿ ಪಾಲುಗಾರ್ತಿ.

ಪ್ರಾಧ್ಯಾಪಕರಿಗೆ ಅಡ್ಡಿಪಡಿಸುವ ಹಾಗೂ ಬೆಂಕಿ ಚೆಂಡಿನಂಥ ಚರ್ಚೆ ಆರಂಭಿಸುವ ಉದ್ದೇಶದಿಂದ ಎಲ್ಲ ಉಪನ್ಯಾಸಗಳಿಗೆ ಮೊದಲ ಬೆಂಚ್‌ನಲ್ಲಿ ಕುಳಿತುಕೊಳ್ಳುತ್ತಿದ್ದ ಹುಡುಗಿ. ಪ್ರತಿಯೊಂದರ ಬಗ್ಗೆಯೂ, ಯಾವುದರ ಬಗ್ಗೆಯೂ ವಾದ ಮಾಡುತ್ತಿದ್ದೆ. ಆ ಮೂಲಕ ಸಾಹಿತ್ಯ ಹೆಚ್ಚು ತಮಾಷೆ ಯಾಗಿರಬೇಕು ಎಂಬ ಉದ್ದೇಶದಿಂದ. ನನ್ನ ಸ್ನೇಹಿತರೆನಿಸಿ ಕೊಂಡವರು ಇದನ್ನು ಇಷ್ಟಪಡುತ್ತಿದ್ದರು ಎನ್ನುವುದು ನನ್ನ ಭಾವನೆ. ನನ್ನ ಹಾಸ್ಯ ತೀರಾ ಶುಷ್ಕ ಆದರೆ ಕೆಲ ನಿರ್ದಿಷ್ಟ ದಿನಗಳಲ್ಲಿ ಕ್ರಿಯಾಶೀಲ ಎನ್ನುತ್ತಿದ್ದರು. ಪುಸ್ತಕ ಹಾಗೂ ಕವಿತೆಗಳು ನನಗೆ ಸಾಂತ್ವನ ಹೇಳುತ್ತಿದ್ದವು.


ಪುಸ್ತಕ ಪ್ರೀತಿಯಿಂದಾಗಿ ಮನೆಯ ಗ್ರಂತಹಲಯ ತುಂಬಿ ತುಳುಕುತ್ತಿತ್ತು. ಕಳೆದ ಕೆಲ ತಿಂಗಳಿಂದ ನನ್ನ ಅತಿದೊಡ್ಡ ಕಳವಳ ವೆಂದರೆ, ಅಕೆಯ ದೀಪ ಹಾಗೂ ಚಿತ್ರ ಚೌಕಟ್ಟನ್ನು ಇನ್ನೊಂದು ಶೆಲ್ಫ್ ಸೃಷ್ಟಿಸುವ ಸಲುವಾಗಿ ಸ್ಥಳಾಂತ ರಿಸುವಂತೆ ತಾಯಿಯ ಮನವೊಲಿಸುವುದು ಹೇಗೆ ಎನ್ನುವುದು.


ನಾನು ಆದರ್ಶವಾದಿ; ಅಥ್ಲೀಟ್. ಶಾಂತಸ್ವಭಾವದವಳು. ನೀವು ತಿಳಿದು ಕೊಂಡಂತೆ ಕೋಪದ, ದ್ವೇಷಸಾಧನೆಯ ಅಥವಾ ಕಾಲು ಕೆರೆದುಕೊಂಡು ಜಗಳಕ್ಕೆಬರುವ ಸ್ವಭಾವ ನನ್ನದಲ್ಲ. ನನಗೆ ಯುದ್ಧ ಬೇಕಿಲ್ಲ; ಏಕೆಂದರೆ ಅದಕ್ಕೆ ಎಷ್ಟು ಬೆಲೆ ತೆರಬೇಕಾಗುತ್ತದೆ ಎನ್ನುವುದು ನನಗೆ ಗೊತ್ತು. ಅದು ತೀರಾ ದುಬಾರಿ. ನನ್ನ ಮೇಲೆ ವಿಶ್ವಾಸವಿಡಿ. ಏಕೆಂದರೆ ನಾನು ಪ್ರತೀ ದಿನ ಅದಕ್ಕೆ ಬೆಲೆ ತೆರುತ್ತಿದ್ದೇನೆ. ಈಗಲೂ ಪಾವತಿಸುತ್ತಲೇ ಇದ್ದೇನೆ. ಆದರೆ ಅದಕ್ಕೆ ಬಿಲ್ ಇಲ್ಲ. ಬಹುಶಃ ಅದು ಇದಿದ್ದರೆ, ಕೆಲವರು ನನ್ನನ್ನು ಇಷ್ಟೊಂದು ದ್ವೇಷಿ ಸುತ್ತಿರಲಿಲ್ಲ. ಸಂಖ್ಯೆಗಳು ಹೆಚ್ಚು ನಂಬುವಂತೆ ಮಾಡುತ್ತವೆ.
ಸುದ್ದಿವಾಹಿನಿಯ ಸಮೀಕ್ಷೆಯು ‘‘ಗುರ್‌ಮೆಹರ್ ಅವರ ನೋವು ಸರಿಯೇ ತಪ್ಪೇ?’’ ಎಂಬ ಪ್ರಶ್ನೆ ಬಿತ್ತರಿಸುತ್ತಿತ್ತು. ನಿರ್ದಿಷ್ಟ ಪ್ರಮಾಣದ ಮತ ಅನುಪಾತವನ್ನು ಫಲಿತಾಂಶವಾಗಿಯೂ ಪ್ರಸಾರ ಮಾಡುತ್ತಿತ್ತು. ಜನಸಾಮಾನ್ಯರಾದ ನಮಗೆ ಅರ್ಥವಾಗುವಂತಿತ್ತು.
ಆದರೆ! ಅದರ ಮುಂದೆ ನಮ್ಮ ನರಳಿಕೆಗೆ ಏನು ವೌಲ್ಯ? ಶೇ.51ರಷ್ಟು ಮಂದಿ ನಾವು ತಪ್ಪು ಎಂದು ಭಾವಿಸಿದರೆ, ನಾನು ತಪ್ಪು ಎಂದಾಗುತ್ತದೆ. ಹಾಗಾದಲ್ಲಿ, ನನ್ನ ಮನಸ್ಸನ್ನು ಮಲಿನ ಮಾಡುವವರು ಯಾರು ಎನ್ನುವುದು ದೇವರಿಗೇ ಗೊತ್ತು.

ತಂದೆ ಈಗ ನನ್ನ ಜತೆಗಿಲ್ಲ. 18 ವರ್ಷದಿಂದ ನಮ್ಮಂದಿಗೆ ಇಲ್ಲ. ನನ್ನ ಸೀಮಿತ ಶಬ್ದಸಾಮರ್ಥ್ಯವಾದ 200 ಶಬ್ದಗಳಲ್ಲಿ ಸಾವು, ಯುದ್ಧ ಹಾಗೂ ಪಾಕಿಸ್ತಾನ ಎಂಬ ಹೊಸ ಶಬ್ದವನ್ನು 1999ರ ಆಗಸ್ಟ್ 6ರ ಬಳಿಕ ಕಲಿತೆ. ಹಲವು ಕಾರಣಗಳಿಗಾಗಿ ಈ ಶಬ್ದಗಳ ವ್ಯಾಖ್ಯೆಯನ್ನು ವಾಸ್ತವವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಕೆಲ ವರ್ಷಗಳೇ ಹಿಡಿಯಿತು. ನಾನು ಅಂತರ್ಗತ ಎಂಬ ಪದ ಬಳಸಲು ಕಾರಣ ವೆಂದರೆ, ಪ್ರಾಮಾಣಿಕತೆ ಎಂಬ ಶಬ್ದಕ್ಕೆ ಯಾರಿಗಾದರೂ ನಿಜ ಅರ್ಥ ಗೊತ್ತಿದೆಯೇ? ಅದನ್ನು ನಾನು ಅನುಭವಿಸಿದ್ದೇನೆ, ಅದನ್ನು ವಿಶ್ವದ ಅರ್ಥದಲ್ಲಿ ಚಿತ್ರಿಸಲು ನಾನು ಇನ್ನೂ ಪ್ರಯತ್ನ ಮಾಡುತ್ತಿದ್ದೇನೆ.
ನನ್ನ ತಂದೆ ಹುತಾತ್ಮ. ಆದರೆ ನಾನು ಅವರನ್ನು ಹುತಾತ್ಮನಾಗಿ ತಿಳಿದುಕೊಂಡಿಲ್ಲ. ಕಿಸೆಯಲ್ಲಿ ತುಂಬಾ ಸಿಹಿ ತುಂಬಿದ್ದ ದೊಡ್ಡ ಕಾರ್ಗೊ ಜಾಕೆಟ್ ಹಾಕಿಕೊಂಡು, ಪ್ರತೀ ಬಾರಿ ನನ್ನ ಮುಂದಲೆಗೆ ಪ್ರೀತಿಯಿಂದ ಸಿಹಿ ಮುತ್ತು ನೀಡುವಾಗ ಕುರುಚಲು ಗಡ್ಡ ನನ್ನ ಮೂಗಿಗೆ ಚುಚ್ಚುತ್ತಿದ್ದ ವ್ಯಕ್ತಿಯಾಗಿ ಮಾತ್ರ ತಂದೆಯನ್ನು ನಾನು ಕಂಡಿದ್ದೇನೆ. ಸ್ಟ್ರಾ ಮೂಲಕ ಹೇಗೆ ಹೀರಬೇಕು ಎಂದು ಕಲಿಸಿದ ಶಿಕ್ಷಕನಾಗಿ, ನನಗೆ ಚುಯಿಂಗಮ್ ತಿನ್ನಲು ಕಲಿಸಿದ ಅಪ್ಪ ನನಗೆ ಗೊತ್ತು. ನನಗೆ ಅವರು ತಂದೆಯಾಗಿ ಗೊತ್ತು. ಅವರು ಎಲ್ಲೂ ಹೋಗದಂತೆ ಬಿಗಿದಪ್ಪಿಕೊಂಡು ಅವರನ್ನು ಹಿಡಿದುಕೊಳ್ಳುತ್ತಿದ್ದುದಷ್ಟೇ ನೆನಪಿದೆ. ಹಾಗೆ ಹೋದವರು ಮತ್ತೆ ಬರಲೇ ಇಲ್ಲ.
ನನ್ನ ತಂದೆ ಒಬ್ಬ ಹುತಾತ್ಮ. ನಾನು ಆತನ ಮಗಳು.
ಆದರೆ ನಾನು ‘ನಿಮ್ಮ ಹುತಾತ್ಮನ ಮಗಳು’ ಅಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News