ಆಂಧ್ರಪ್ರದೇಶದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆಗೆ ಇಸ್ರೇಲ್ ನೆರವು

Update: 2017-05-24 04:46 GMT

ವಿಶಾಖಪಟ್ಟಣ, ಮೇ 24: ಆಂಧ್ರಪ್ರದೇಶದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆಗೆ   ಅಲ್ಲಿನ ಸರಕಾರ ಇಸ್ರೇಲ್ ನಿಂದ ತಾಂತ್ರಿಕ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರ ನೆರವು ಪಡೆಯಲಿದೆ.
ನಕ್ಸಲ್ ರ ಹಾವಳಿಯಿಂದ ತತ್ತರಿಸಿರುವ ಆಂಧ್ರಪ್ರದೇಶ ನಕ್ಸಲರ ವಿರುದ್ಧ ಕಾರ್ಯಾಚರಣೆಗೆ  ವಿದೇಶದ ನೆರವು ಪಡೆಯಲಿರುವ ಭಾರತದ ಮೊದಲ ರಾಜ್ಯ ಎನಿಸಿಕೊಳ್ಳಲಿದೆ.
ಆಂಧ್ರಪ್ರದೇಶ ಸರಕಾರ ಈಗಾಗಲೇ ಸಿಆರ್ ಪಿಎಫ್ ನ ಮಾಜಿ ಡಿಜಿ ಕೋಡೆ ದುರ್ಗಾಪ್ರಸಾದ್ ಅವರನ್ನು ಗೃಹ ಇಲಾಖೆಯ ಸಲಹೆಗಾರನಾಗಿ ನೇಮಕ ಮಾಡಿದೆ. ದುರ್ಗಾ ಪ್ರಸಾದ್ ಅವರು ಛತ್ತಿಸ್ ಗಢ , ಝಾರ್ಖಂಡ್ ಮತ್ತು ಒಡಿಶಾದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿದ ಅನುಭವ ಹೊಂದಿದ್ದಾರೆ. 
ಇಸ್ರೇಲ್ ನಿಮದ ಆಗಮಿಸಿದ್ದ  ಇಬ್ಬರು ತಜ್ಞರ ತಂಡ,  ಆಂಧ್ರದ ಡಿಜಿಪಿ ಎನ್.ಸಾಂಬಶಿವ  ರಾವ್, ಎಸ್ ಐಬಿ, ನಕ್ಸಲ್ ನಿಗ್ರಹ ದಳ ಸೋಮವಾರ ನಕ್ಸಲ್ ರ ಹಾವಳಿಯಿಂದ ತತ್ತರಿಸಿರುವ ಪ್ರದೇಶಗಳಿಗೆ ತೆರಳಿ ಸಮೀಕ್ಷೆ ಕೈಗೊಂಡು, ಕಾರ್ಯಾಚರಣೆಗೆ ಯೋಜನೆ ರೂಪಿಸಿದೆ ಎಂದು ತಿಳಿದು ಬಂದಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News