ಕೇರಳ: ಎರಡನೆ ವರ್ಷಕ್ಕೆ ಪಿಣರಾಯಿ ಸರಕಾರ

Update: 2017-05-25 07:27 GMT

  ತಿರುವನಂತಪುರಂ, ಮೇ 25: ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರಕಾರ ಎರಡನೆ ವರ್ಷಕ್ಕೆ ಕಾಲಿಟ್ಟಿದೆ. ನಿಶಾಗಂಧಿಯಲ್ಲಿ ಗುರುವಾರ ಸಂಜೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನವಕೇರಳ ಪ್ರಥಮ ವರ್ಷ ಆಚರಣೆಯನ್ನು ಉದ್ಘಾಟಿಸಲಿದ್ದಾರೆ. ಮಹಿಳೆಯರು , ಮಕ್ಕಳು ಸಹಿತ ವಿವಿಧ ಕ್ಷೇತ್ರಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ವಿಚಾರಗೋಷ್ಠಿಗಳು ನಡೆಯಲಿದ್ದು ಜೂನ್ ಐದಕ್ಕೆ ಕ್ಯಾಲಿಕಟ್ ನಲ್ಲಿ ಕೊನೆಗೊಳ್ಳಲಿದೆ.

    ಇದೇ ವೇಳೆ ಸರಕಾರದ ವರ್ಷಾಚರಣೆ ವೇಳೆ ಪ್ರತಿಪಕ್ಷಗಳು ಭಾರೀ ಪ್ರತಿಭಟನಾ ಕಾರ್ಯಕ್ರಮಗಳನ್ನು ಸಿದ್ಧಪಡಿಸಿವೆ. ಯುಡಿಎಫ್ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಿದೆ. ಯೂತ್ ಕಾಂಗ್ರೆಸ್ ಮತ್ತು ಯುವ ಮೋರ್ಚಾ ಸೆಕ್ರಟರಿಯೇಟ್‌ಗೆ ಮುತ್ತಿಗೆ ಹಾಕಲಿವೆ.ಒಂದು ವರ್ಷದಲ್ಲಿ ಸರಕಾರದಿಂದ ಯಾವುದೇ ಸಾಧನೆಗಳಾಗಿಲ್ಲ ಎಂದು ಪ್ರತಿಪಕ್ಷಗಳ ಅಪಸ್ವರವಾಗಿದೆ. 2016 ಮೇ 25ಕ್ಕೆ ಎಲ್‌ಡಿಎಫ್ ಸರಕಾರ ನಾವು ಒಟ್ಟಿಗೆ ಮುನ್ನಡೆಯೋಣ ಸರಕಾರ ನಮ್ಮ ಜೊತೆ ಇದೆಎನ್ನುವ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಿತ್ತು. ಕೊಚ್ಚಿ ಮೆಟ್ರೊ,ಕಣ್ಣೂರು ವಿಮಾನ ನಿಲ್ದಾಣ, ಗೆಯಿಲ್ ಪೈಪ್ ಲೈನ್ ಮುಂತಾದ ಅನೇಕ ಯಶಸ್ವೀಯೋಜನೆಗಳನ್ನು ತನ್ನ ಒಂದು ವರ್ಷದ ಸಾಧನೆಗಳೆಂದು ಸರಕಾರ ಬಿಂಬಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News