ಉತ್ತರವಿಲ್ಲದ ಪ್ರಶ್ನೆ!

Update: 2017-05-31 18:40 GMT

‘‘ಎಲ್ಲರೂ ಹಾಗೆ ಹೇಳಿದರೆ ದೇಶವನ್ನು ಕಾಪಾಡುವವರು ಯಾರು? ಹಾಗಾದರೆ ಇಡೀ ಊರು ಮೊನ್ನೆ ನನ್ನ ಮಗನಿಗೆ ಸನ್ಮಾನ ಮಾಡಿತಲ್ಲ? ಸುಮ್ಮನೆ ಸನ್ಮಾನ ಮಾಡಿದರಾ? ಆ ಯೋಗ್ಯತೆ ಇದ್ದುದರಿಂದ ತಾನೇ ಸನ್ಮಾನ ಮಾಡಿರುವುದು...’’

‘‘ಈ ಸನ್ಮಾನ, ಗಿನ್ಮಾನ ಎಲ್ಲ ಪೊಲಿಟಿಕ್ಸ್ ಭಟ್ಟರೆ. ಲೆಕ್ಕದ ಮೇಷ್ಟ್ರಿಗೆ ಇದೆಲ್ಲ ಅರ್ಥ ಆಗುವುದಿಲ್ಲವಾ? ಎಲ್ಲದರ ಹಿಂದೆ ಲೆಕ್ಕ ಉಂಟು. ಇದು ನಿಮಗೆ ಮಾತ್ರ ಹೇಳುವುದು. ಗುರೂಜಿ ಸಭೆಯಲ್ಲಿ ಅಷ್ಟೆಲ್ಲ ನಮ್ಮ ಹುಡುಗನನ್ನು ಹೊಗಳಿದರಲ್ಲ. ಹಾಗಾದರೆ ಅವರ ಮಗಳನ್ನು ಯಾಕೆ ಆ ಅಮೆರಿಕದವನಿಗೆ ಕೊಟ್ಟರು? ಪಪ್ಪುವಿಗೇ ಮದುವೆ ಮಾಡಿಕೊಡಬಹುದಿತ್ತಲ್ಲ? ಒಟ್ಟಿಗೆ ಓದುತ್ತಿದ್ದ ಹುಡುಗ ಬೇರೆ...ಅದೆಲ್ಲ ಬೇಡ...ನಾನು ನೇರ ವಾಗಿ ನಿಮ್ಮಲ್ಲಿ ಕೇಳುವುದು...ನಿಮಗೆ ಒಬ್ಬ ಮಗಳಿದ್ದರೆ ನೀವು ಮಿಲಿಟರಿಯವನಿಗೆ ಕೊಡುತ್ತಿದ್ದಿರಾ...ಹೇಳಿ’’

ಅನಂತಭಟ್ಟರ ಬಾಯಿಯಿಂದ ಮಾತು ಹೊರಡಲಿಲ್ಲ.

‘‘ಇಷ್ಟಕ್ಕೂ ಈಗ ಬ್ರಾಹ್ಮಣ ಹುಡುಗಿ ಎಲ್ಲುಂಟು ಹೇಳಿ? ಸಂಪ್ರದಾಯವನ್ನು ಕಟ್ಟು ನಿಟ್ಟಾಗಿ ಪಾಲಿಸುವ ಬ್ರಾಹ್ಮಣ ಹುಡುಗರಿಗೆ ಮದುವೆಯೇ ಇಲ್ಲ...ಹೊಳೆಯಾಚೆಯ ಶಿವಪ್ರಸಾದರ ಮಗನ ಅವಸ್ಥೆ ನೋಡಿ...ಅಷ್ಟು ತೋಟ ಇದ್ದರೂ ಹುಡುಗಿ ಸಿಗಲಿಲ್ಲ. ಕೃಷಿಕನನ್ನು ಮದುವೆಯಾಗಲು ಹುಡುಗಿಯರು ಮುಂದೆ ಬರುವುದಿಲ್ಲ. ಅವರು ಯಾಕೆ ಮುಂದೆ ಬರುತ್ತಾರೆ ಹೇಳಿ? ಅವರೂ ಕಂಪ್ಯೂಟರ್ ಅದು ಇದೂ ಎಂದು ಕಲಿತು ನಗರದ ರುಚಿ ಹಿಡಿದಿದ್ದಾರೆ. ಮದುವೆಯಾಗಿ ಬಂದು ಹಳ್ಳಿಯಲ್ಲಿ ಇರಲಿಕ್ಕೆ ಅವರಿಂದಾಗುತ್ತದೆಯೇ?. ಎಲ್ಲರಿಗೂ ಅಮೆರಿಕದ ಹುಡುಗ ಬೇಕು. ಅಥವಾ ಬೆಂಗಳೂರಿನಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಬೇಕು....ಹೀಗಾದರೆ ನಮ್ಮ ಹುಡುಗರಿಗೆ ಹುಡುಗಿ ಎಲ್ಲಿಂದ ಸಿಗುತ್ತದೆ? ಈ ಹುಡುಗಿಯರಿಗೆ ವಿದ್ಯೆ ಕಲಿಸುವುದೇ ವೇಸ್ಟ್. ಎಲ್ಲ ಸಮಸ್ಯೆ ಆರಂಭವಾದದ್ದೇ ಅಲ್ಲಿಂದ. ಶಿವಪ್ರಸಾದರ ಮಗ ಮೊನ್ನೆ ಮದುವೆಯಾದದ್ದು ಗೊತ್ತಲ್ಲ...ಕೆಳಜಾತಿಯ ಹುಡುಗಿಯನ್ನು ಶುದ್ಧೀಕರಣ ಮಾಡಿ ಮದುವೆಯಾದ. ಹುಡುಗಿ ಲಕ್ಷಣವಾಗಿದ್ದಾಳೆ. ಯಾವ ಬ್ರಾಹ್ಮಣ ಹುಡುಗಿಗೂ ಕಮ್ಮಿ ಇಲ್ಲ....ಸಂಬಂಧ ಕೂಡಿಸಿದ್ದು ನಾನೇ...’’

ಅನಂತಭಟ್ಟರು ಏನೂ ಪ್ರತಿಕ್ರಿಯಿಸಲಿಲ್ಲ. ಪಪ್ಪುವಿಗೆ ಮಾತ್ರ ಕಿರಿಕಿರಿ ಅನ್ನಿಸತೊಡಗಿತು. ಪದ್ಮನಾಭರು ಮಾತು ಮುಂದುವರಿಸಿದರು ‘‘...ಮೇಷ್ಟ್ರೇ, ಬೇಜಾರು ಮಾಡ್ಬೇಡಿ. ನಾನು ತುಂಬಾ ಟ್ರೈ ಮಾಡಿದ್ದೇನೆ. ಹುಡುಗ ಮಿಲಿಟರಿಯಲ್ಲಿದ್ದಾನೆ ಎಂದ ಕೂಡಲೇ ಮಾತುಕತೆ ಕಟ್ ಆಗಿ ಬಿಡುತ್ತದೆ....ಒಬ್ಬೊಬ್ಬರದು ಒಂದೊಂದು ತಕರಾರು. ಈಗ ಎಲ್ಲರಿಗೂ ಇರುವುದು ಒಂದು ಅಥವಾ ಎರಡು ಮಕ್ಕಳು. ಇರುವ ಒಬ್ಬ ಹೆಣ್ಣು ಮಗಳನ್ನು ಯಾರಾದರೂ ಮಿಲಿಟರಿಯವನಿಗೆ ಕೊಡುತ್ತಾರಾ ಎಂದು ಕೇಳುತ್ತಾರೆ. ನೀವು ಮನಸ್ಸು ಮಾಡಿದರೆ ಈಗ ಒಂದು ಹುಡುಗಿ ಉಂಟು...’’

ಅನಂತಭಟ್ಟರು ತಲೆಯೆತ್ತಿ ಪದ್ಮನಾಭರನ್ನು ನೋಡಿದರು.

‘‘ಮೇಷ್ಟ್ರೇ...ಹುಡುಗಿ ಲಕ್ಷಣ ಇದ್ದಾಳೆ. ಸಂಸ್ಕಾರ ಮುಖದಲ್ಲಿ ಎದ್ದು ಕಾಣುತ್ತದೆ. ಬಡ ಕುಟುಂಬದಿಂದ ಬಂದದ್ದು. ಆದರೆ ಕೆಳ ಜಾತಿಯ ಹುಡುಗಿ. ಕೆಳಗೆ ಎಂದರೆ ತುಂಬಾ ಕೆಳಗೆ ಅಲ್ಲ. ಶುದ್ಧೀಕರಣ ಮಾಡಿ ಮನೆ ತುಂಬಿಸಿಕೊಳ್ಳುವುದಾದರೆ ನಾನು ಮಾತಾಡಿ ಸರಿಪಡಿಸುತ್ತೇನೆ...ಈಗ ಎಲ್ಲ ಬ್ರಾಹ್ಮಣರು ಇದನ್ನೇ ಮಾಡುವುದು...ಇಲ್ಲವಾದರೆ ದೂರದ ಕಾಶ್ಮೀರದಿಂದ ಬ್ರಾಹ್ಮಣ ಹುಡುಗಿಯರನ್ನು ತರಬೇಕಷ್ಟೇ...ಆಗಬಹುದೋ?’’ ಪದ್ಮನಾಭರು ಕೊನೆಗೂ ತನ್ನೊಳಗಿರುವ ಮಾತನ್ನು ಹೊರಗಿಟ್ಟರು. ‘‘...ಆದರೆ ಪರ ಊರಿನ ಸೊಬಗರಿಗಿಂತ ನಮ್ಮೂರಿನ ಕಳ್ಳರೇ ವಾಸಿ...ನೆನಪಿಟ್ಟುಕೊಳ್ಳಿ...’’ ಎಂದೂ ಸೇರಿಸಿದರು.

ಅನಂತಭಟ್ಟರಿಗೆ ಇರಿದಂತಾಯಿತು. ತುಸು ಹೊತ್ತು ತತ್ತರಿಸಿದವರಂತೆ ಕೂತರು. ಬಳಿಕ ಅವರು ಪದ್ಮನಾಭರ ಎರಡು ಕೈನ್ನು ಹಿಡಿದು ಹೇಳಿದರು ‘‘ನೋಡಿ...ನನಗಿ ರೋದು ಒಬ್ಬನೇ ಮಗ. ಕೊಳ್ಳಿ ಇಡುವುದರಿಂದ ಹಿಡಿದು ಎಲ್ಲದಕ್ಕೂ ಅವನೇ ಆಗಬೇಕು. ಆದರೂ ಅವನನ್ನು ನಾನು ದೇಶ ಕಾಯೋದಕ್ಕೆ ಕಳುಹಿಸಿದ್ದೇನೆ. ಈ ದೇಶವನ್ನು ತಾಯಿ ಎಂದು ಪ್ರೀತಿಸಿ ಅಭಿಮಾನ ಪಡುವ ಯಾವುದಾದರೂ ಒಂದು ಬ್ರಾಹ್ಮಣ ಕುಟುಂಬವನ್ನು ಹುಡುಕಿ. ಹುಡುಗಿ ಬಡವಳಾದರೂ, ಕುರೂಪಿಯಾದರೂ ಚಿಂತಿಲ್ಲ...’’

ಪದ್ಮನಾಭರು ಮೆತ್ತಗಾದರು ‘‘ಆಯ್ತು ಮೇಷ್ಟ್ರೇ, ಪ್ರಯತ್ನಿಸುತ್ತೇನೆ. ನಿಮ್ಮ ಬಗ್ಗೆ, ನಿಮ್ಮ ಮಗನ ಬಗ್ಗೆ ನನಗೆ ಗೊತ್ತಿಲ್ಲವೇ? ಬಡತನವಿದ್ದರೂ ಗೌರವ, ಸಂಸ್ಕಾರ, ಸಂಪ್ರದಾಯ ಬಿಟ್ಟವರಲ್ಲ...ಹೋಗುವ ನಾವು. ಇಲ್ಲಿ ಕುಳಿತು ಏನು ಮಾಡುವುದು...’’

ಅನಂತಭಟ್ಟರೇ ಚಹಾದ ದುಡ್ಡು ಕೊಟ್ಟರು. ಅಪ್ಪ, ಮಗ ಮನೆಯ ದಾರಿ ಹಿಡಿದರು. ಮನೆಗೆ ಅಷ್ಟು ದೂರವಿರುವ ಕಿರು ಸೇತುವೆಯ ಮೇಲೆ ನಿಂತಿದ್ದಾಗ ಒಮ್ಮೆಲೆ ನಿಂತ ಪಪ್ಪು, ತಂದೆಯ ಕಡೆಗೆ ತಿರುಗಿ ಕೇಳಿದ ‘‘ಅಪ್ಪ ನಾನೊಂದು ಕೇಳುತ್ತೇನೆ. ಉತ್ತರಿಸುತ್ತೀಯಾ?’’

‘‘ಹೇಳು ಮಗಾ’’ ಎಂದರು.

‘‘ನಿಮಗೆ ಒಬ್ಬ ಮಗಳಿದ್ದರೆ ಅವಳನ್ನು ನೀವು ಮಿಲಿಟರಿಯವನಿಗೆ ಕೊಡುತ್ತಿದ್ದಿರಾ?’’

ಅನಂತಭಟ್ಟರು ಪ್ರತಿಕ್ರಿಯಿಸದೆ, ಮನೆಯ ಕಡೆ ನಡೆದರು. ಅಪ್ಪ ಹೋಗುವುದನ್ನೇ ನೋಡುತ್ತಾ ಪಪ್ಪು ಕಲ್ಲಿನಂತೆ ನಿಂತಿದ್ದ.

***

ಅದೊಂದು ದಿನ ಬೆಳಗ್ಗೆ ‘‘ಸ್ವಲ್ಪ ಕೆಲಸವಿದೆ ಅಮ್ಮ...ಪೇಟೆ ಕಡೆ ಹೋಗಿ ಬರುತ್ತೇನೆ’’ ಎಂದು ಪಪ್ಪು ಮನೆಯಿಂದ ಹೊರಟ. ಅವತ್ತು ಮಗ ತುಸು ವಿಶೇಷವಾಗಿ ಕಂಡ. ಅವನು ಮಿಲಿಟರಿಯ ಯುನಿಫಾರ್ಮ್ ಧರಿಸಿದ್ದ. ಮನೆಯಲ್ಲಾಗಲಿ, ಊರಲ್ಲಾಗಲಿ ಈ ಬಟ್ಟೆಗಳನ್ನು ಆತ ಧರಿಸಿ ಓಡಾಡಿದ್ದೇ ಇಲ್ಲ. ‘‘ಎಲ್ಲಿಗೋ?’’ ತಾಯಿ ಕೇಳಿದರು.

‘‘ಇಲ್ಲೇ ಅಮ್ಮ, ಮಧ್ಯಾಹ್ನದ ಒಳಗೆ ಬರುತ್ತೇನೆ’’ ಎನ್ನುತ್ತಾ ಲಗುಬಗೆಯಿಂದ ಅಂಗಳಕ್ಕಿಳಿದ. ಮಗ ಹೋದ ದಾರಿಯನ್ನೇ ನೋಡುತ್ತಾ ತಾಯಿ ನಿಟ್ಟುಸಿರಿಟ್ಟರು.

ಪಪ್ಪು ನೇರವಾಗಿ ವೆಂಕಟನ ಮನೆಯ ದಾರಿ ಹಿಡಿದಿದ್ದ. ಸುಬ್ಬಯ್ಯ ಮೇಷ್ಟ್ರ ಮನೆಗೆ ಒತ್ತಿಕೊಂಡು ಹೋಗಿರುವ ಓಣಿಯಲ್ಲಿ ಈ ಬಾರಿ ಜಾಗರೂಕತೆಯಿಂದ ಹೆಜ್ಜೆಯಿಡತೊಡಗಿದ. ಹಿಂದಿನ ವಾಸನೆ ಮತ್ತೆ ಅವನನ್ನು ಹಿಂಬಾಲಿಸ ತೊಡಗಿತು. ಆದರೆ ಈ ಬಾರಿ ವೆಂಕಟನ ಮನೆಗೆ ಹೋಗಲೇ ಬೇಕು ಎಂದು ಅವನು ನಿರ್ಧರಿಸಿದ್ದ. ವಾಸನೆ ಅವನ ಹೊಟ್ಟೆಯನ್ನು ತೊಳೆಸುವಂತಿದ್ದರೂ ಅವನು ಹೆಜ್ಜೆ ಹಿಂದಿಡಲಿಲ್ಲ. ದಾರಿಯಲ್ಲಿ ಹೋಗುವವರೆಲ್ಲ ಇವನನ್ನು ವಿಚಿತ್ರವೆಂಬಂತೆ ಅಚ್ಚರಿಯಿಂದ ನೋಡುತ್ತಿದ್ದರು. ಕೆಲವರಂತೂ ಹೆದರಿ ಬಿಟ್ಟಿದ್ದರು. ಮಿಲಿಟರಿ ಧಿರಿಸಿನಲ್ಲಿ ಹೀಗೆ ಒಬ್ಬ ಆ ರಸ್ತೆಯಲ್ಲಿ ನಡೆದದ್ದಿಲ್ಲ. ಕೆಲವರು ‘ಪೊಲೀಸ್ ಇರಬೇಕು’ ಎಂದು ತಪ್ಪು ತಿಳಿದರು. ಯಾರು ನಮಸ್ಕರಿಸಿದರೂ ಅದಕ್ಕೆ ಪ್ರತಿ ಉತ್ತರಿಸದೆ, ಅವರ ಮುಖವನ್ನೂ ನೋಡದೆ ಪಪ್ಪು ಮುಂದೆ ನಡೆಯುತ್ತಿದ್ದ. ದೂರದಲ್ಲಿ ಹೊಲೆಯರ ದಟ್ಟಿಗೆ ಕಾಣುತ್ತಿತ್ತು. ಹತ್ತಿರವಾಗುತ್ತಿದ್ದಂತೆಯೇ ಅವನ ಬದುಕಿಗೆ ಅಪರಿಚಿತವಾದ ಒಂದು ಲೋಕ ತೆರೆದುಕೊಂಡಿತು. ತನ್ನ ಊರಲ್ಲೇ ಇರುವ ಆ ಗುಡಿಸಲುಗಳ ಸಾಲನ್ನು ಅವನು ಅದೇ ಮೊದಲ ಬಾರಿಗೆ ನೋಡುತ್ತಿರುವುದು. ಅಲ್ಲಿರುವ ಮುದುಕರು, ಹೆಂಗಸರು ಈತನನ್ನು ಗಾಬರಿ ಕಣ್ಣಿನಿಂದ ನೋಡುತ್ತಿದ್ದರು. ಮಕ್ಕಳ ಒಂದು ಸಣ್ಣ ಗುಂಪು ಇವನ ಹಿಂದೆ ನೆರೆಯಿತು.

‘‘ಇಲ್ಲಿ ಯೋಧ ವೆಂಕಟನ ಮನೆ ಎಲ್ಲಿ?’’ ಒಬ್ಬ ಮುದುಕನಲ್ಲಿ ಕೇಳಿದ.

‘‘ಅಂಥವರು ಇಲ್ಲಿ ಯಾರೂ ಇಲ್ಲ’’ ಎಂದು ಮುದುಕ ಭಯಭಕ್ತಿಯಿಂದ ಹೇಳಿದ. ಯಾರನ್ನೋ ಆರೆಸ್ಟ್ ಮಾಡಲು ಪೊಲೀಸರು ಬಂದಿದ್ದಾರೆ ಎಂದು ಅವನು ತಪ್ಪು ತಿಳಿದುಕೊಂಡಿದ್ದ. ‘‘ಸೇನೆಯಲ್ಲಿದ್ದು ಕಾರ್ಗಿಲ್ ಯುದ್ಧದಲ್ಲಿ ಮೃತನಾದ ವೆಂಕಟನ ಮನೆ ಯಾವುದು?’’ ಮತ್ತೆ ಕೇಳಿದ.

‘‘ಅಂಥವರು ಯಾರೂ ಇಲ್ಲಿಲ್ಲ...’’ ಮುದುಕ ಮತ್ತೆ ಹೇಳಿದ.

‘‘ಕೆಲ ವರ್ಷದ ಹಿಂದೆ ಒಬ್ಬ ಸೈನಿಕ ಕಾರ್ಗಿಲ್ ಯುದ್ಧದಲ್ಲಿ ತೀರಿಹೋಗಿದ್ದನಲ್ಲ...ಶಾಲೆಯಲ್ಲಿ ಅವನ ಮೃತದೇಹಕ್ಕೆ ಗೌರವವನ್ನೂ ಸಲ್ಲಿಸಲಾಗಿತ್ತು...ಆ ವೆಂಕಟ....’’ ಮತ್ತೆ ವಿವರಿಸತೊಡಗಿದ.

ಅಷ್ಟರಲ್ಲಿ ಒಬ್ಬ ಯುವಕ ಬಾಯಿ ತೆರೆದ ‘‘ಓ ಆ ವೆಂಕಟನ. ಅವನ ಮನೆ ಓ ಅಲ್ಲಿ ಕಾಣುತ್ತದಲ್ಲ ಮುಳಿಯ ಗುಡಿಸಲು, ಬಿಳಿ ಸುಣ್ಣ ಬಳಿದ ಮಣ್ಣಿನ ಗೋಡೆ...ಅದೇ ಅವನ ಮನೆ...’’

ಪಪ್ಪು ಲಗು ಬಗೆಯಿಂದ ಅತ್ತ ನಡೆದ.

ಮಿಲಿಟರಿಯವರು ಯಾರೋ ಬಂದಿದ್ದಾರೆ ಎನ್ನುವ ಸುದ್ದಿ ಅದಾಗಲೇ ಅಲ್ಲಿಗೆ ತಲುಪಿತ್ತು ಎಂದು ಕಾಣುತ್ತದೆ. ವೆಂಕಟನ ಹೆಂಡತಿ ಬಾಗಿಲಲ್ಲೇ ನಿಂತಿದ್ದಳು.

‘‘ನಮಸ್ಕಾರ ಉಲ್ಲಯ?...’’ ಎಂದು ಕೈ ಮುಗಿದಳು.

ಪಪ್ಪು ಆಕೆಯನ್ನು ನೋಡಿ ಆವಕ್ಕಾಗಿದ್ದ. ಎಲುಬಿನ ಹಂದರವೊಂದು ಅವನ ಮುಂದಿತ್ತು. ಮತ್ತೊಬ್ಬಳು ಪ್ರಾಯಕ್ಕೆ ಬಂದ ಹುಡುಗಿ. ಕಪ್ಪಗೆ. ಹರಿದ ಸೀರೆ ಉಟ್ಟುಕೊಂಡಿದೆ. ಶಾಲೆಯ ಮೈದಾನದಲ್ಲಿ ತನ್ನ ಗಂಡನ ಮೃತದೇಹ ನೋಡಿ ಚೀರಾಡುತ್ತಿದ್ದ ಆ ಘಟನೆ ಅವನ ಕಣ್ಣೆದುರು ಬಂತು.

‘‘ನಾನೂ ಸೇನೆಯಲ್ಲಿದ್ದೇನೆ. ವೆಂಕಟನ ಥರ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ...’’ ಎಂದ. ಮನೆಯ ಒಳ ಕರೆಯುತ್ತಾರೆ ಎಂದು ಕಾಯುತ್ತಿದ್ದ ಪಪ್ಪು. ಆದರೆ ಅವರಿಗೆ ಆತ ಮನೆಯ ಒಳಗೆ ಬರುವುದು ಇಷ್ಟವಿರಲಿಲ್ಲ. ಅಂಗಳದಲ್ಲೇ ನಿಲ್ಲಿಸಿ ಮಾತನಾಡಿಸುತ್ತಿದ್ದರು. ಮುಖ್ಯವಾಗಿ ವೆಂಕಟನ ಪತ್ನಿಗೆ ದೇಶ ಎಂದರೆ ಏನು ಎಂದೇ ಗೊತ್ತಿರಲಿಲ್ಲ. ಮಿಲಿಟರಿಯವರು ಇವನ ಜೊತೆಗೆ ಏನಾದರೂ ಹಣ ಕಳುಹಿಸಿರಬಹುದೇ? ಎಂಬ ಆಸೆಯೊಂದು ಅವಳಲ್ಲಿತ್ತು.

‘‘ನಾನು ಲೆಕ್ಕದ ಮೇಷ್ಟು ಅನಂತ ಭಟ್ಟರ ಮಗ....ಪ್ರತಾಪ ಸಿಂಹ’’ ಎಂದು ಪರಿಚಯಿಸಿದ.

‘‘ಏನಾದರೂ ಮಿಲಿಟರಿಯವರು ಹಣ ಕಳುಹಿಸಿಕೊಟ್ಟಿದ್ದಾರಾ...’’ ಆಕೆ ಕೇಳಿಯೇ ಬಿಟ್ಟಳು.

‘‘ಹಣವಾ?’’ ಅದನ್ನು ಕೇಳಿ ಪಪ್ಪು ಕಕ್ಕಾಬಿಕ್ಕಿಯಾದ.

‘‘ಹೌದು...ಮಿಲಿಟರಿಯಲ್ಲಿ ಸತ್ತು ಹೋದರೆ ಪರಿಹಾರ ಎಂದೆಲ್ಲ ಕೊಡುತ್ತಾರಂತಲ್ಲ....ಕಾದು ಕಾದು ಸಾಕಾಯಿತು. ಈಗ ಕಾಯುವುದನ್ನೇ ಬಿಟ್ಟೆ. ತೀರಿಹೋದ ಹೊತ್ತಿನಲ್ಲಿ ಹಲವರಲ್ಲಿ ವಿಚಾರಿಸಿದೆ...ಅವನ ಬಟ್ಟೆ ಬರೆ, ಪೆಟ್ಟಿಗೆ ಎಲ್ಲ ಕಳುಹಿಸಿಕೊಟ್ಟಿದ್ದಾರೆ. ಆದರೆ ಪರಿಹಾರ ಅಂತ ಈವರೆಗೆ ಸಿಕ್ಕೇ ಇಲ್ಲ....’’

‘‘ಯಾಕೆ ಸಿಕ್ಕಿಲ್ಲ....ನೀವು ಯಾರ ಜೊತೆಗಾದರೂ ಮಂಗಳೂರಿಗೆ ಹೋಗಿ ವಿಚಾರಿಸಬೇಕಿತ್ತು....’’ ಪಪ್ಪು ಅಚ್ಚರಿಯಿಂದ ಕೇಳಿದ.

‘‘ನಮ್ಮ ದಟ್ಟಿಗೆಯ ಪಿಯುಸಿ ಕಲಿತ ಐತ ಅದರ ಹಿಂದೆ ತುಂಬಾ ಓಡಾಡಿದ. ಬರುತ್ತದೆ, ಬರುತ್ತದೆ ಎಂದು ಹೇಳುತ್ತಿದ್ದರಂತೆ...ನಾಲ್ಕೈದು ತಿಂಗಳಾದ ಬಳಿಕ ಒಮ್ಮೆ ಅಲ್ಲಿಗೆ ಹೋದಾಗ...ಇವನಿಗೆ ಪರಿಹಾರ ಸಿಗುವುದಿಲ್ಲ ಎಂದು ಹೇಳಿದರಂತೆ...’’

‘‘ಯಾಕಂತೆ?’’

‘‘ಗೊತ್ತಿಲ್ಲ...ಅವನು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ವಂತೆ...ಅವನು ಯುದ್ಧದಲ್ಲಿ ಸತ್ತದ್ದು ಅಲ್ಲವಂತೆ...ಎಂದೆಲ್ಲ ಹೇಳಿ ಅವನನ್ನು ಸಾಗ ಹಾಕಿದರು...ನೀವೇ ಹೇಳಿ, ಯುದ್ಧದಲ್ಲಿ ಸಾಯದೆ ಇದ್ದರೆ ಅವನು ಸತ್ತದ್ದು ಹೇಗೇ? ಮತ್ತೆ ಶಾಲೆಯಲ್ಲಿ ಅಷ್ಟೆಲ್ಲ ದೊಡ್ಡವರು ಸೇರಿ ಅವನು ಯುದ್ಧದಲ್ಲೇ ಸತ್ತದ್ದು ಎಂದು ಹೇಳಿರಲಿಲ್ಲವೇ? ನಾನು ಈ ಮಕ್ಕಳನ್ನು ಇಟ್ಟುಕೊಂಡು ಜೀವನ ಮಾಡುವುದು ಹೇಗೆ...?’’ ಅವಳು ಗೋಳೋ ಎಂದು ಅಳತೊಡಗಿದಳು.

ಯುದ್ಧಭೂಮಿಯಲ್ಲಿ ಸಿಲುಕಿಕೊಂಡ ನಿಶ್ಶಸ್ತ್ರ ಯೋಧ ನಂತೆ ಪಪ್ಪು ಕಂಗಾಲಾಗಿದ್ದ. ಅವಳು ಅಳುತ್ತಿದ್ದಂತೆಯೇ ಪಕ್ಕದಲ್ಲಿದ್ದ ಮಗಳೂ ಕಣ್ಣೀರು ಹಾಕತೊಡಗಿದಳು.

‘‘ಎಲ್ಲರೂ ಹಾಗೆ ಹೇಳಿದರೆ ದೇಶವನ್ನು ಕಾಪಾಡುವವರು ಯಾರು? ಹಾಗಾದರೆ ಇಡೀ ಊರು ಮೊನ್ನೆ ನನ್ನ ಮಗನಿಗೆ ಸನ್ಮಾನ ಮಾಡಿತಲ್ಲ? ಸುಮ್ಮನೆ ಸನ್ಮಾನ ಮಾಡಿದರಾ? ಆ ಯೋಗ್ಯತೆ ಇದ್ದುದರಿಂದ ತಾನೇ ಸನ್ಮಾನ ಮಾಡಿರುವುದು...’’

‘‘ಈ ಸನ್ಮಾನ, ಗಿನ್ಮಾನ ಎಲ್ಲ ಪೊಲಿಟಿಕ್ಸ್ ಭಟ್ಟರೆ. ಲೆಕ್ಕದ ಮೇಷ್ಟ್ರಿಗೆ ಇದೆಲ್ಲ ಅರ್ಥ ಆಗುವುದಿಲ್ಲವಾ? ಎಲ್ಲದರ ಹಿಂದೆ ಲೆಕ್ಕ ಉಂಟು. ಇದು ನಿಮಗೆ ಮಾತ್ರ ಹೇಳುವುದು. ಗುರೂಜಿ ಸಭೆಯಲ್ಲಿ ಅಷ್ಟೆಲ್ಲ ನಮ್ಮ ಹುಡುಗನನ್ನು ಹೊಗಳಿದರಲ್ಲ. ಹಾಗಾದರೆ ಅವರ ಮಗಳನ್ನು ಯಾಕೆ ಆ ಅಮೆರಿಕದವನಿಗೆ ಕೊಟ್ಟರು? ಪಪ್ಪುವಿಗೇ ಮದುವೆ ಮಾಡಿಕೊಡಬಹುದಿತ್ತಲ್ಲ? ಒಟ್ಟಿಗೆ ಓದುತ್ತಿದ್ದ ಹುಡುಗ ಬೇರೆ...ಅದೆಲ್ಲ ಬೇಡ...ನಾನು ನೇರ ವಾಗಿ ನಿಮ್ಮಲ್ಲಿ ಕೇಳುವುದು...ನಿಮಗೆ ಒಬ್ಬ ಮಗಳಿದ್ದರೆ ನೀವು ಮಿಲಿಟರಿಯವನಿಗೆ ಕೊಡುತ್ತಿದ್ದಿರಾ...ಹೇಳಿ’’

ಅನಂತಭಟ್ಟರ ಬಾಯಿಯಿಂದ ಮಾತು ಹೊರಡಲಿಲ್ಲ.

‘‘ಇಷ್ಟಕ್ಕೂ ಈಗ ಬ್ರಾಹ್ಮಣ ಹುಡುಗಿ ಎಲ್ಲುಂಟು ಹೇಳಿ? ಸಂಪ್ರದಾಯವನ್ನು ಕಟ್ಟು ನಿಟ್ಟಾಗಿ ಪಾಲಿಸುವ ಬ್ರಾಹ್ಮಣ ಹುಡುಗರಿಗೆ ಮದುವೆಯೇ ಇಲ್ಲ...ಹೊಳೆಯಾಚೆಯ ಶಿವಪ್ರಸಾದರ ಮಗನ ಅವಸ್ಥೆ ನೋಡಿ...ಅಷ್ಟು ತೋಟ ಇದ್ದರೂ ಹುಡುಗಿ ಸಿಗಲಿಲ್ಲ. ಕೃಷಿಕನನ್ನು ಮದುವೆಯಾಗಲು ಹುಡುಗಿಯರು ಮುಂದೆ ಬರುವುದಿಲ್ಲ. ಅವರು ಯಾಕೆ ಮುಂದೆ ಬರುತ್ತಾರೆ ಹೇಳಿ? ಅವರೂ ಕಂಪ್ಯೂಟರ್ ಅದು ಇದೂ ಎಂದು ಕಲಿತು ನಗರದ ರುಚಿ ಹಿಡಿದಿದ್ದಾರೆ. ಮದುವೆಯಾಗಿ ಬಂದು ಹಳ್ಳಿಯಲ್ಲಿ ಇರಲಿಕ್ಕೆ ಅವರಿಂದಾಗುತ್ತದೆಯೇ?. ಎಲ್ಲರಿಗೂ ಅಮೆರಿಕದ ಹುಡುಗ ಬೇಕು. ಅಥವಾ ಬೆಂಗಳೂರಿನಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಬೇಕು....ಹೀಗಾದರೆ ನಮ್ಮ ಹುಡುಗರಿಗೆ ಹುಡುಗಿ ಎಲ್ಲಿಂದ ಸಿಗುತ್ತದೆ? ಈ ಹುಡುಗಿಯರಿಗೆ ವಿದ್ಯೆ ಕಲಿಸುವುದೇ ವೇಸ್ಟ್. ಎಲ್ಲ ಸಮಸ್ಯೆ ಆರಂಭವಾದದ್ದೇ ಅಲ್ಲಿಂದ. ಶಿವಪ್ರಸಾದರ ಮಗ ಮೊನ್ನೆ ಮದುವೆಯಾದದ್ದು ಗೊತ್ತಲ್ಲ...ಕೆಳಜಾತಿಯ ಹುಡುಗಿಯನ್ನು ಶುದ್ಧೀಕರಣ ಮಾಡಿ ಮದುವೆಯಾದ. ಹುಡುಗಿ ಲಕ್ಷಣವಾಗಿದ್ದಾಳೆ. ಯಾವ ಬ್ರಾಹ್ಮಣ ಹುಡುಗಿಗೂ ಕಮ್ಮಿ ಇಲ್ಲ....ಸಂಬಂಧ ಕೂಡಿಸಿದ್ದು ನಾನೇ...’’

ಅನಂತಭಟ್ಟರು ಏನೂ ಪ್ರತಿಕ್ರಿಯಿಸಲಿಲ್ಲ. ಪಪ್ಪುವಿಗೆ ಮಾತ್ರ ಕಿರಿಕಿರಿ ಅನ್ನಿಸತೊಡಗಿತು. ಪದ್ಮನಾಭರು ಮಾತು ಮುಂದುವರಿಸಿದರು ‘‘...ಮೇಷ್ಟ್ರೇ, ಬೇಜಾರು ಮಾಡ್ಬೇಡಿ. ನಾನು ತುಂಬಾ ಟ್ರೈ ಮಾಡಿದ್ದೇನೆ. ಹುಡುಗ ಮಿಲಿಟರಿಯಲ್ಲಿದ್ದಾನೆ ಎಂದ ಕೂಡಲೇ ಮಾತುಕತೆ ಕಟ್ ಆಗಿ ಬಿಡುತ್ತದೆ....ಒಬ್ಬೊಬ್ಬರದು ಒಂದೊಂದು ತಕರಾರು. ಈಗ ಎಲ್ಲರಿಗೂ ಇರುವುದು ಒಂದು ಅಥವಾ ಎರಡು ಮಕ್ಕಳು. ಇರುವ ಒಬ್ಬ ಹೆಣ್ಣು ಮಗಳನ್ನು ಯಾರಾದರೂ ಮಿಲಿಟರಿಯವನಿಗೆ ಕೊಡುತ್ತಾರಾ ಎಂದು ಕೇಳುತ್ತಾರೆ. ನೀವು ಮನಸ್ಸು ಮಾಡಿದರೆ ಈಗ ಒಂದು ಹುಡುಗಿ ಉಂಟು...’’

ಅನಂತಭಟ್ಟರು ತಲೆಯೆತ್ತಿ ಪದ್ಮನಾಭರನ್ನು ನೋಡಿದರು.

‘‘ಮೇಷ್ಟ್ರೇ...ಹುಡುಗಿ ಲಕ್ಷಣ ಇದ್ದಾಳೆ. ಸಂಸ್ಕಾರ ಮುಖದಲ್ಲಿ ಎದ್ದು ಕಾಣುತ್ತದೆ. ಬಡ ಕುಟುಂಬದಿಂದ ಬಂದದ್ದು. ಆದರೆ ಕೆಳ ಜಾತಿಯ ಹುಡುಗಿ. ಕೆಳಗೆ ಎಂದರೆ ತುಂಬಾ ಕೆಳಗೆ ಅಲ್ಲ. ಶುದ್ಧೀಕರಣ ಮಾಡಿ ಮನೆ ತುಂಬಿಸಿಕೊಳ್ಳುವುದಾದರೆ ನಾನು ಮಾತಾಡಿ ಸರಿಪಡಿಸುತ್ತೇನೆ...ಈಗ ಎಲ್ಲ ಬ್ರಾಹ್ಮಣರು ಇದನ್ನೇ ಮಾಡುವುದು...ಇಲ್ಲವಾದರೆ ದೂರದ ಕಾಶ್ಮೀರದಿಂದ ಬ್ರಾಹ್ಮಣ ಹುಡುಗಿಯರನ್ನು ತರಬೇಕಷ್ಟೇ...ಆಗಬಹುದೋ?’’ ಪದ್ಮನಾಭರು ಕೊನೆಗೂ ತನ್ನೊಳಗಿರುವ ಮಾತನ್ನು ಹೊರಗಿಟ್ಟರು. ‘‘...ಆದರೆ ಪರ ಊರಿನ ಸೊಬಗರಿಗಿಂತ ನಮ್ಮೂರಿನ ಕಳ್ಳರೇ ವಾಸಿ...ನೆನಪಿಟ್ಟುಕೊಳ್ಳಿ...’’ ಎಂದೂ ಸೇರಿಸಿದರು.

ಅನಂತಭಟ್ಟರಿಗೆ ಇರಿದಂತಾಯಿತು. ತುಸು ಹೊತ್ತು ತತ್ತರಿಸಿದವರಂತೆ ಕೂತರು. ಬಳಿಕ ಅವರು ಪದ್ಮನಾಭರ ಎರಡು ಕೈನ್ನು ಹಿಡಿದು ಹೇಳಿದರು ‘‘ನೋಡಿ...ನನಗಿ ರೋದು ಒಬ್ಬನೇ ಮಗ. ಕೊಳ್ಳಿ ಇಡುವುದರಿಂದ ಹಿಡಿದು ಎಲ್ಲದಕ್ಕೂ ಅವನೇ ಆಗಬೇಕು. ಆದರೂ ಅವನನ್ನು ನಾನು ದೇಶ ಕಾಯೋದಕ್ಕೆ ಕಳುಹಿಸಿದ್ದೇನೆ. ಈ ದೇಶವನ್ನು ತಾಯಿ ಎಂದು ಪ್ರೀತಿಸಿ ಅಭಿಮಾನ ಪಡುವ ಯಾವುದಾದರೂ ಒಂದು ಬ್ರಾಹ್ಮಣ ಕುಟುಂಬವನ್ನು ಹುಡುಕಿ. ಹುಡುಗಿ ಬಡವಳಾದರೂ, ಕುರೂಪಿಯಾದರೂ ಚಿಂತಿಲ್ಲ...’’

ಪದ್ಮನಾಭರು ಮೆತ್ತಗಾದರು ‘‘ಆಯ್ತು ಮೇಷ್ಟ್ರೇ, ಪ್ರಯತ್ನಿಸುತ್ತೇನೆ. ನಿಮ್ಮ ಬಗ್ಗೆ, ನಿಮ್ಮ ಮಗನ ಬಗ್ಗೆ ನನಗೆ ಗೊತ್ತಿಲ್ಲವೇ? ಬಡತನವಿದ್ದರೂ ಗೌರವ, ಸಂಸ್ಕಾರ, ಸಂಪ್ರದಾಯ ಬಿಟ್ಟವರಲ್ಲ...ಹೋಗುವ ನಾವು. ಇಲ್ಲಿ ಕುಳಿತು ಏನು ಮಾಡುವುದು...’’

ಅನಂತಭಟ್ಟರೇ ಚಹಾದ ದುಡ್ಡು ಕೊಟ್ಟರು. ಅಪ್ಪ, ಮಗ ಮನೆಯ ದಾರಿ ಹಿಡಿದರು. ಮನೆಗೆ ಅಷ್ಟು ದೂರವಿರುವ ಕಿರು ಸೇತುವೆಯ ಮೇಲೆ ನಿಂತಿದ್ದಾಗ ಒಮ್ಮೆಲೆ ನಿಂತ ಪಪ್ಪು, ತಂದೆಯ ಕಡೆಗೆ ತಿರುಗಿ ಕೇಳಿದ ‘‘ಅಪ್ಪ ನಾನೊಂದು ಕೇಳುತ್ತೇನೆ. ಉತ್ತರಿಸುತ್ತೀಯಾ?’’

‘‘ಹೇಳು ಮಗಾ’’ ಎಂದರು.

‘‘ನಿಮಗೆ ಒಬ್ಬ ಮಗಳಿದ್ದರೆ ಅವಳನ್ನು ನೀವು ಮಿಲಿಟರಿಯವನಿಗೆ ಕೊಡುತ್ತಿದ್ದಿರಾ?’’

ಅನಂತಭಟ್ಟರು ಪ್ರತಿಕ್ರಿಯಿಸದೆ, ಮನೆಯ ಕಡೆ ನಡೆದರು. ಅಪ್ಪ ಹೋಗುವುದನ್ನೇ ನೋಡುತ್ತಾ ಪಪ್ಪು ಕಲ್ಲಿನಂತೆ ನಿಂತಿದ್ದ.

***

ಅದೊಂದು ದಿನ ಬೆಳಗ್ಗೆ ‘‘ಸ್ವಲ್ಪ ಕೆಲಸವಿದೆ ಅಮ್ಮ...ಪೇಟೆ ಕಡೆ ಹೋಗಿ ಬರುತ್ತೇನೆ’’ ಎಂದು ಪಪ್ಪು ಮನೆಯಿಂದ ಹೊರಟ. ಅವತ್ತು ಮಗ ತುಸು ವಿಶೇಷವಾಗಿ ಕಂಡ. ಅವನು ಮಿಲಿಟರಿಯ ಯುನಿಫಾರ್ಮ್ ಧರಿಸಿದ್ದ. ಮನೆಯಲ್ಲಾಗಲಿ, ಊರಲ್ಲಾಗಲಿ ಈ ಬಟ್ಟೆಗಳನ್ನು ಆತ ಧರಿಸಿ ಓಡಾಡಿದ್ದೇ ಇಲ್ಲ. ‘‘ಎಲ್ಲಿಗೋ?’’ ತಾಯಿ ಕೇಳಿದರು.

‘‘ಇಲ್ಲೇ ಅಮ್ಮ, ಮಧ್ಯಾಹ್ನದ ಒಳಗೆ ಬರುತ್ತೇನೆ’’ ಎನ್ನುತ್ತಾ ಲಗುಬಗೆಯಿಂದ ಅಂಗಳಕ್ಕಿಳಿದ. ಮಗ ಹೋದ ದಾರಿಯನ್ನೇ ನೋಡುತ್ತಾ ತಾಯಿ ನಿಟ್ಟುಸಿರಿಟ್ಟರು.

ಪಪ್ಪು ನೇರವಾಗಿ ವೆಂಕಟನ ಮನೆಯ ದಾರಿ ಹಿಡಿದಿದ್ದ. ಸುಬ್ಬಯ್ಯ ಮೇಷ್ಟ್ರ ಮನೆಗೆ ಒತ್ತಿಕೊಂಡು ಹೋಗಿರುವ ಓಣಿಯಲ್ಲಿ ಈ ಬಾರಿ ಜಾಗರೂಕತೆಯಿಂದ ಹೆಜ್ಜೆಯಿಡತೊಡಗಿದ. ಹಿಂದಿನ ವಾಸನೆ ಮತ್ತೆ ಅವನನ್ನು ಹಿಂಬಾಲಿಸ ತೊಡಗಿತು. ಆದರೆ ಈ ಬಾರಿ ವೆಂಕಟನ ಮನೆಗೆ ಹೋಗಲೇ ಬೇಕು ಎಂದು ಅವನು ನಿರ್ಧರಿಸಿದ್ದ. ವಾಸನೆ ಅವನ ಹೊಟ್ಟೆಯನ್ನು ತೊಳೆಸುವಂತಿದ್ದರೂ ಅವನು ಹೆಜ್ಜೆ ಹಿಂದಿಡಲಿಲ್ಲ. ದಾರಿಯಲ್ಲಿ ಹೋಗುವವರೆಲ್ಲ ಇವನನ್ನು ವಿಚಿತ್ರವೆಂಬಂತೆ ಅಚ್ಚರಿಯಿಂದ ನೋಡುತ್ತಿದ್ದರು. ಕೆಲವರಂತೂ ಹೆದರಿ ಬಿಟ್ಟಿದ್ದರು. ಮಿಲಿಟರಿ ಧಿರಿಸಿನಲ್ಲಿ ಹೀಗೆ ಒಬ್ಬ ಆ ರಸ್ತೆಯಲ್ಲಿ ನಡೆದದ್ದಿಲ್ಲ. ಕೆಲವರು ‘ಪೊಲೀಸ್ ಇರಬೇಕು’ ಎಂದು ತಪ್ಪು ತಿಳಿದರು. ಯಾರು ನಮಸ್ಕರಿಸಿದರೂ ಅದಕ್ಕೆ ಪ್ರತಿ ಉತ್ತರಿಸದೆ, ಅವರ ಮುಖವನ್ನೂ ನೋಡದೆ ಪಪ್ಪು ಮುಂದೆ ನಡೆಯುತ್ತಿದ್ದ. ದೂರದಲ್ಲಿ ಹೊಲೆಯರ ದಟ್ಟಿಗೆ ಕಾಣುತ್ತಿತ್ತು. ಹತ್ತಿರವಾಗುತ್ತಿದ್ದಂತೆಯೇ ಅವನ ಬದುಕಿಗೆ ಅಪರಿಚಿತವಾದ ಒಂದು ಲೋಕ ತೆರೆದುಕೊಂಡಿತು. ತನ್ನ ಊರಲ್ಲೇ ಇರುವ ಆ ಗುಡಿಸಲುಗಳ ಸಾಲನ್ನು ಅವನು ಅದೇ ಮೊದಲ ಬಾರಿಗೆ ನೋಡುತ್ತಿರುವುದು. ಅಲ್ಲಿರುವ ಮುದುಕರು, ಹೆಂಗಸರು ಈತನನ್ನು ಗಾಬರಿ ಕಣ್ಣಿನಿಂದ ನೋಡುತ್ತಿದ್ದರು. ಮಕ್ಕಳ ಒಂದು ಸಣ್ಣ ಗುಂಪು ಇವನ ಹಿಂದೆ ನೆರೆಯಿತು.

‘‘ಇಲ್ಲಿ ಯೋಧ ವೆಂಕಟನ ಮನೆ ಎಲ್ಲಿ?’’ ಒಬ್ಬ ಮುದುಕನಲ್ಲಿ ಕೇಳಿದ.

‘‘ಅಂಥವರು ಇಲ್ಲಿ ಯಾರೂ ಇಲ್ಲ’’ ಎಂದು ಮುದುಕ ಭಯಭಕ್ತಿಯಿಂದ ಹೇಳಿದ. ಯಾರನ್ನೋ ಆರೆಸ್ಟ್ ಮಾಡಲು ಪೊಲೀಸರು ಬಂದಿದ್ದಾರೆ ಎಂದು ಅವನು ತಪ್ಪು ತಿಳಿದುಕೊಂಡಿದ್ದ. ‘‘ಸೇನೆಯಲ್ಲಿದ್ದು ಕಾರ್ಗಿಲ್ ಯುದ್ಧದಲ್ಲಿ ಮೃತನಾದ ವೆಂಕಟನ ಮನೆ ಯಾವುದು?’’ ಮತ್ತೆ ಕೇಳಿದ.

‘‘ಅಂಥವರು ಯಾರೂ ಇಲ್ಲಿಲ್ಲ...’’ ಮುದುಕ ಮತ್ತೆ ಹೇಳಿದ.

‘‘ಕೆಲ ವರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News