ಕ್ಯಾಮರೂನ್ ನಲ್ಲಿ ಅವಳಿ ಸ್ಫೋಟ: 7 ಮಂದಿ ಮೃತ್ಯು

Update: 2017-06-02 14:12 GMT

ಕ್ಯಾಮರೂನ್, ಜೂ.2: ಅವಳಿ ಸ್ಫೋಟಗಳು ಸಂಭವಿಸಿ 7 ಮಂದಿ ಮೃತಪಟ್ಟು 30ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡ ಘಟನೆ ಕ್ಯಾಮರೂನ್ ನಲ್ಲಿ ನಡೆದಿದೆ.

ನೈಜೀರಿಯಾ ಗಡಿ ಪ್ರದೇಶದ ಬೌರ್ವೇರ್ ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಆತ್ಮಾಹುತಿ ಬಾಂಬರ್ ಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ.  ಬೋಕೋ ಹರಾಮ್ ಬಾಂಬ್ ದಾಳಿ ನಡೆಸಿದೆ ಎಂದು ಗವರ್ನರ್ ಮಿದ್ ಜಿಯವಾಕ ಬಕಾರಿ ಹೇಳಿದ್ದಾರೆ.

“ಮುಸ್ಲಿಮರು ಮುಂಜಾನೆ 5:30ರ ಸುಮಾರಿಗೆ ಪ್ರಾರ್ಥನೆ ಸಲ್ಲಿಸಲು ತೆರಳುತ್ತಿದ್ದಾಗ ಬಾಂಬ್ ಸ್ಫೋಟ ನಡೆದಿದೆ. ಸ್ಥಳದಲ್ಲೇ ಇಬ್ಬರು ಬಾಂಬರ್ ಗಳು ಸೇರಿ 9 ಮಂದಿ ಮೃತಪಟ್ಟಿದ್ದರು. ಗಾಯಗೊಂಡ ಸುಮಾರು 30 ಮಂದಿಯನ್ನು ಮೋರಾ ಹಾಗೂ ಮರೋವಾ ಆಸ್ಪತ್ರೆಗೆ ದಾಖಲಿಸಲಾಯಿತು” ಎಂದು ಸ್ಥಳೀಯ ಇಮಾಮ್ ಸೈದವ್ ಹಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News