ಇಸ್ರೋ ವಿಜ್ಞಾನಿಗಳಿಗೆ ಮುಖ್ಯಮಂತ್ರಿ ಅಭಿನಂದನೆ

Update: 2017-06-05 18:40 GMT

ಬೆಂಗಳೂರು, ಜೂ.5: ಜಿಸ್ಯಾಟ್-19 ಇ ಸಂವಹನ ಉಪಗ್ರಹದ ಯಶಸ್ವಿ ಉಡಾವಣೆ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ವಿಜ್ಞಾನಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

ಜಿ ಸ್ಯಾಟ್-19 ಇ ಈವರೆಗಿನ ಅತೀ ಹೆಚ್ಚು ತೂಕದ ಸಂವಹನ ಉಪಗ್ರಹ ಹಾಗೂ ಜಿಎಸ್‌ಎಲ್‌ಪಿ ಮಾರ್ಕ್ 3 ಡಿಐ ರಾಕೇಟ್‌ನ ಯಶಸ್ವಿ ಹಾರಾಟದ ಸುದ್ದಿಯೂ ತನಗೆ ಅತೀವ ಸಂಸತವನ್ನು ಉಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

ಇಸ್ರೋ ವಿಜ್ಞಾನಿಗಳ ಈ ಪರಿಶ್ರಮದಿಂದಾಗಿ ಭಾರತವು ಸಂವಹನ ಕ್ರಾಂತಿಯಲ್ಲಿ ಬೃಹತ್ ಸಾಧನೆಯನ್ನು ಮಾಡಿದಂತಾಗಿದೆ. ಈ ಮಹತ್ವದ ಸಾಧನೆಗಾಗಿ ನಾನು ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಹಾಗೂ ಅವರ ತಂಡಕ್ಕೆ ಹತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಸಿದ್ದರಾಮಯ್ಯ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News