ಡಿಜಿಸಿಎ ಅಧಿಕಾರಿಗಳ ವಿರುದ್ಧ ‘ಅಶ್ಲೀಲ ಟೀಕೆ’ ಮಾಡಿ ಸಂಕಷ್ಟಕ್ಕೆ ಸಿಲುಕಿದ 34 ಪೈಲಟ್‌ಗಳು

Update: 2017-06-06 10:44 GMT

ಹೊಸದಿಲ್ಲಿ,ಜೂ.6: ವಾಟ್ಸ್‌ಆ್ಯಪ್‌ನಲ್ಲಿ ತನ್ನ ಅಧಿಕಾರಿಗಳ ವಿರುದ್ಧ ‘ಅಶ್ಲೀಲ ಟೀಕೆ’ಗಳನ್ನು ಮಾಡಿದ್ದಕ್ಕಾಗಿ ಸ್ಪೈಸ್ ಜೆಟ್, ಜೆಟ್ ಏರ್‌ವೇಸ್,ಗೋಏರ್ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆಗಳ 34 ಪೈಲಟ್‌ಗಳ ವಿರುದ್ಧ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ವು ಪೊಲೀಸ್ ದೂರನ್ನು ದಾಖಲಿಸಿದೆ.

ವಾಟ್ಸ್‌ಆ್ಯಪ್ ಗುಂಪೊಂದಕ್ಕೆ ಸೇರಿರುವ ಪೈಲಟ್‌ಗಳ ವಿರುದ್ಧ ಈ ದೂರು ದಾಖಲಾ ಗಿದೆ. ಈ ಗುಂಪಿನಲ್ಲಿ ಅಧಿಕಾರಿಗಳ ವಿರುದ್ಧ ಅಶ್ಲೀಲ ಟೀಕೆಗಳನ್ನು ಮಾಡಲಾಗಿದೆ. ಡಿಜಿಸಿಎ ಅಧಿಕಾರಿಗಳ ಕುಟುಂಬ ಸದಸ್ಯರ ವಿರುದ್ಧ ಅತ್ಯಂತ ಆಕ್ಷೇಪಾರ್ಹ, ಕ್ಷಮಿಸಲು ಸಾಧ್ಯವಿಲ್ಲದ ಕೊಳಕು ಭಾಷೆಯನ್ನು ಬಳಸಿ ಸಂದೇಶಗಳನ್ನು ರವಾನಿಸಲಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ಈ ಕೊಳಕು ಸಂದೇಶಗಳು ಹರಿದಾಡುತ್ತಿದ್ದು, ಅದರ ಸ್ಕ್ರೀನ್ ಶಾಟ್ ಸಹಿತ 34 ಪೈಲಟ್‌ಗಳ ವಿರುದ್ಧ ಲೋಧಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಇನ್ನೋರ್ವ ಡಿಜಿಸಿಎ ಅಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News