ಟ್ರಂಪ್‌ರ ಹವಾಮಾನ ನೀತಿ ವಿರೋಧಿಸಿ ಉನ್ನತ ಅಧಿಕಾರಿ ರಾಜೀನಾಮೆ

Update: 2017-06-06 15:02 GMT

ವಾಶಿಂಗ್ಟನ್, ಜೂ. 6: ಬೀಜಿಂಗ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಉನ್ನತ ರಾಜತಾಂತ್ರಿಕರೊಬ್ಬರು ರಾಜೀನಾಮೆ ನೀಡಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಸೋಮವಾರ ತಿಳಿಸಿದರು. ಟ್ರಂಪ್ ಆಡಳಿತದ ನೀತಿಗಳಿಂದ ಬೇಸತ್ತು ವಿದೇಶ ಸೇವೆಯಿಂದ ಹೊರಹೋಗುತ್ತಿದ್ದೇನೆ ಎಂಬುದಾಗಿ ಅವರು ತನ್ನ ಸಹೋದ್ಯೋಗಿಗಳಿಗೆ ಹೇಳಿದ್ದಾರೆ.

ರಾಯಭಾರ ಕಚೇರಿಯ ಉದ್ಯೋಗಿಗಳ ಟೌನ್‌ಹಾಲ್ ಸಭೆಯಲ್ಲಿ ಡೇವಿಡ್ ರ್ಯಾಂಕ್ ತನ್ನ ರಾಜೀನಾಮೆ ಘೋಷಿಸಿದರು ಎಂದು ವಿದೇಶ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆಗೆಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಂಡಿರುವ ನಿರ್ಧಾರವೇ ತನ್ನ ರಾಜೀನಾಮೆ ನಿರ್ಧಾರಕ್ಕೆ ಕಾರಣ ಎಂದು ಅವರು ಹೇಳೀದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News