ಪಾಕ್ ಚಿತ್ರಗಳಲ್ಲಿ ನಟಿಸಲು ನನಗೆ ತೀವ್ರ ಆಸಕ್ತಿ: ಬಿಜೆಪಿ ಸಂಸದ ಪರೇಶ್ ರಾವಲ್

Update: 2017-06-06 16:48 GMT

ಹೊಸದಿಲ್ಲಿ, ಜೂ.6: ಭಾರತದ ಟಿವಿ ಶೋಗಳು ಬೋರು ಹೊಡಿಸುತ್ತಿದ್ದು, ಪಾಕಿಸ್ತಾನಿ ಧಾರವಾಹಿಗಳು ಹಾಗೂ ಚಿತ್ರಗಳಲ್ಲಿ ನಟಿಸಲು ಆಸಕ್ತನಾಗಿದ್ದೇನೆ ಎಂದು ಚಿತ್ರನಟ, ಬಿಜೆಪಿ ಸಂಸದ ಪರೇಶ್ ರಾವಲ್ ಹೇಳಿದ್ದಾರೆ,

“ಪಾಕಿಸ್ತಾನಿ ಶೋಗಳು ಹಾಗೂ ಚಿತ್ರಗಳಲ್ಲಿ ನಟಿಸಲು ನನಗೆ ಆಸಕ್ತಿಯಿದೆ. ಹಮ್ ಸಫರ್ ನಂತಹ ಪಾಕಿಸ್ತಾನಿ ಧಾರವಾಹಿಗಳನ್ನು ನಾನು ಇಷ್ಟಪಡುತ್ತೇನೆ. ಅವರ ನಟನೆ, ಕಥೆ, ಬರವಣಿಗೆ ಹಾಗೂ ಭಾಷೆ ಎಲ್ಲವೂ ಉತ್ತಮವಾಗಿದೆ. ನಮ್ಮ ಶೋಗಳು ಬೋರು ಹೊಡೆಸುವಂತೆ ಅನಿಸುತ್ತಿದೆ” ಎಂದು ರಾವಲ್ ಹೇಳಿದ್ದಾರೆ.

ಸಿನೆಮಾ ಹಾಗೂ ಕ್ರಿಕೆಟ್ ಎರಡು ದೇಶಗಳ ನಡುವಿನ ಸೇತುವೆಯಾಗಿದೆ. ಕಲಾವಿದರು ಹಾಗೂ ಕ್ರಿಕೆಟರ್ ಗಳು ಬಾಂಬ್ ಎಸೆಯುವವರಲ್ಲ. ಅವರು ಭಯೋತ್ಪಾದಕರಲ್ಲ. ಯಾರ ಮೇಲೂ, ಯಾವುದರ ಮೇಲೂ ನಿಷೇಧ ಹೇರಬಾರದು ಎಂದು ಪಾಕಿಸ್ತಾನಿ ಕಲಾವಿದರ ಮೇಲಿನ ನಿಷೇಧವನ್ನು ವಿರೋಧಿಸಿದ ನಟ , ಹಿಂದಿ ಮೀಡಿಯಂ ಚಿತ್ರದಲ್ಲೂ ಪಾಕಿಸ್ತಾನಿ ಕಲಾವಿದೆಯೊಬ್ಬರು ಇದ್ದರು” ಎಂದಿದ್ದಾರೆ.

ಲೇಖಕಿ ಅರುಂಧತಿ ರಾಯ್ ಅವರನ್ನು ಸೇನಾ ಜೀಪಿನ ಮುಂಭಾಗಕ್ಕೆ ಕಟ್ಟಬೇಕು ಎಂಬ ಪರೇಶ್ ರಾವಲ್ ಹೇಳಿಕೆ ಇತ್ತೀಚೆಗಷ್ಟೇ ಭಾರೀ ವಿವಾದ ಸೃಷ್ಟಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News