ಸಂಚಾರಿ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಟ್ರಾಫಿಕ್ ಪೇದೆಯ ಕೆನ್ನೆಗೆ ಬಾರಿಸಿದ ಬಿಜೆಪಿ ಶಾಸಕ

Update: 2017-06-06 17:52 GMT

ಉತ್ತರ ಪ್ರದೇಶ, ಜೂ.6: ಒನ್ ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ ಟ್ರಾಫಿಕ್ ಪೇದೆಯೊಬ್ಬರಿಗೆ ಬಿಜೆಪಿ ಶಾಸಕನೊಬ್ಬ ಕಪಾಳಮೋಕ್ಷ  ಮಾಡಿದ ಘಟನೆ ನಡೆದಿದೆ.

ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಬಿಜೆಪಿ ಶಾಸಕ ಶ್ರೀರಾಮ್ ಸೋನ್ಕರ್ ಕಾರನ್ನು ಟ್ರಾಫಿಕ್ ಪೊಲೀಸರು ತಡೆದಿದ್ದಾರೆ.

“ಟ್ರಾಫಿಕ್ ಹೆಚ್ಚಾಗಿದ್ದರಿಂದ ನಾನು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೆ, ಈ ಸಂದರ್ಭ ಒನ್ ವೇ ರಸ್ತೆಯಲ್ಲ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರೊಂದನ್ನು ತಡೆದು ಸಂಚಾರಿ ನಿಯಮ ಪಾಲಿಸುವಂತೆ ಹೇಳಿದೆ. ಯು ಟರ್ನ್ ತೆಗೆದು ಸರಿಯಾದ ದಿಕ್ಕಿನಲ್ಲಿ ಕಾರು ಓಡಿಸುವಂತೆ ಆದೇಶಿಸಿದೆ ಎಂದು ಟ್ರಾಫಿಕ್ ಹೋಂ ಗಾರ್ಡ್ ಪ್ರೇಮ್ ಶೇಖರ್ ಸಾಹಿ ಹೇಳಿದ್ದಾರೆ.

ಈ ಸಂದರ್ಭ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಗದರಿಸಲು ಆರಂಭಿಸಿದ್ದು, ಪೇದೆಯನ್ನು ಅಸಭ್ಯವಾಗಿ ನಿಂದಿಸಿದ. ಇಷ್ಟೇ ಅಲ್ಲದೆ ಘಟನೆಯನ್ನು ರೆಕಾರ್ಡ್ ಮಾಡುತ್ತಿದ್ದ ಮೊಬೈಲನ್ನೂ ಕಿತ್ತುಕೊಂಡ . ಈ ಸಂದರ್ಭ ಅಲ್ಲಿದ್ದ ಇತರ ಪೊಲೀಸರು ಸರಿಯಾಗಿ ವರ್ತಿಸುವಂತೆ ಹೇಳಿದ್ದು, ಇದರಿಂದ ಕೋಪಗೊಂಡ ಓರ್ವ ಹಾಗೂ ಬಿಜೆಪಿ ಶಾಸಕ ಶ್ರೀರಾಮ್ ಕಪಾಳಮೋಕ್ಷ ಮಾಡಿದ್ದಾರೆ ಎಂದು ಪ್ರೇಮ್ ಶೇಖರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News