ಈ ಹಸಿದ ಆಡು ತಿಂದುದರ 'ಮೌಲ್ಯ'ವೆಷ್ಟು ಗೊತ್ತೇ?

Update: 2017-06-07 03:50 GMT
ಸಾಂದರ್ಭಿಕ ಚಿತ್ರ

ಕಾನ್ಪುರ, ಜೂ.6: ಹಸಿದ ಆಡೊಂದು ಮಾಲಕನ ಜೇಬಿನಲ್ಲಿದ್ದ 62 ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ತಿಂದು ಹಾಕಿದ ಘಟನೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಸೀಳುಪುರ ಗ್ರಾಮದಲ್ಲಿ ನಡೆದಿದೆ.

ಸರ್ವೇಶ್ ಕುಮಾರ್ ಪಾಲ್ ಎಂಬ ರೈತ, ಮನೆಗೆ ಇಟ್ಟಿಗೆ ಖರೀದಿಸುವ ಸಲುವಾಗಿ 66 ಸಾವಿರ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳನ್ನು ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡಿದ್ದರು. ಹಸಿದ ಆಡು ತನ್ನ ಪ್ಯಾಂಟ್‌ ಜೇಬಿನಲ್ಲಿದ್ದ ನೋಟುಗಳನ್ನು ತಿನ್ನುತ್ತಿದ್ದುದನ್ನು ನೋಡಿದ ತಕ್ಷಣ ಪಾಲ್ ಎಚ್ಚರಿಕೆ ಗಂಟೆ ಮೊಳಗಿಸಿದರು. ಆದರೆ ಎರಡು ಸಾವಿರ ರೂಪಾಯಿಯ ಎರಡು ನೋಟುಗಳನ್ನು ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಯಿತು. 31 ನೋಟುಗಳು ಕುರಿಯ ಹೊಟ್ಟೆ ಸೇರಿದ್ದವು.

"ನಾನು ಸ್ನಾನಕ್ಕೆ ಹೋಗಿದ್ದಾಗ ಪ್ಯಾಂಟಿನ ಜೇಬಿನಲ್ಲಿದ್ದ ಹಣಕ್ಕೆ ಆಡು ಕಣ್ಣುಹಾಕಿತ್ತು. ಎಲ್ಲ ಕಾಗದ ಉತ್ಪನ್ನಗಳನ್ನು ತಿನ್ನುವ ಕುಖ್ಯಾತಿ ಹೊಂದಿದ ಈ ಆಡು, ಈ ಬಾರಿ ನೋಟನ್ನು ತಿಂದುಹಾಕಿತು. ಆದರೆ ಏನು ಮಾಡೋಣ, ಈ ಆಡು ನಮಗೆ ಮಗು ಇದ್ದಂತೆ" ಎಂದು ಸರ್ವೇಶ್ ಹೇಳಿದರು. ಅಡಿನ ಜೊಲ್ಲಿನಿಂದ ಒದ್ದೆಯಾಗಿದ್ದ ಎರಡು ನೋಟುಗಳು ಸಿಕ್ಕಿವೆ’ ಎಂದು ಹೇಳಿದ್ದಾರೆ.

ಈ ಹಣಭಕ್ಷಕ ಆಡನ್ನು ನೋಡಲು ಅಕ್ಕಪಕ್ಕದ ಗ್ರಾಮಗಳ ಜನ ಸಾಲುಗಟ್ಟಿ ಬರುತ್ತಿದ್ದಾರೆ. ಕೆಲವರು ಆಡನ್ನು ಪಶು ವೈದ್ಯರ ಬಳಿಗೆ ಕರೆದೊಯ್ದು ವಾಂತಿ ಮಾಡಿಸಲು ಔಷಧಿ ಪಡೆಯುವಂತೆಯು ಸಲಹೆ ಮಾಡಿದ್ದಾರೆ. ಆ ಮೂಲಕ ಒಂದಷ್ಟು ಹಣವಾದರೂ ಸಿಗಬಹುದು ಎಂಬ ಎಣಿಕೆ ಅವರದ್ದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News