ಆಂಧ್ರಕ್ಕೆ ‘ಪವರ್ ಕಟ್’ ಮಾಡಿದ ತೆಲಂಗಾಣ

Update: 2017-06-09 08:42 GMT

ಹೈದರಾಬಾದ್, ಜೂ.9: ತೆಲಂಗಾಣ ಹಾಗೂ ಆಂಧ್ರ ಪ್ರದೇಶ ರಾಜ್ಯಗಳ ನಡುವೆ ‘ಪವರ್’ ಸಮಸ್ಯೆ ಬಿಗಡಾಯಿಸಿದೆ. 1,676.46 ಕೋ.ರೂ. ಬಿಲ್ ಬಾಕಿ ಪಾವತಿಸಲು ಆಂಧ್ರ ಸರಕಾರಕ್ಕೆ ಬೇಡಿಕೆ ಇಟ್ಟಿರುವ ತೆಲಂಗಾಣ ಸರಕಾರ ನೆರೆಯ ರಾಜ್ಯಕ್ಕೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದೆ.

ತೆಲಂಗಾಣ ಟ್ರಾಂಸ್ಕೊದ ಚೇರ್ಮನ್ ಹಾಗೂ ಆಡಳಿತ ನಿರ್ದೇಶಕ ಡಿ.ಪ್ರಭಾಕರ್ ರಾವ್ ಆಂಧ್ರಪ್ರದೇಶ ಸರಕಾರಕ್ಕೆ ಪತ್ರ ಬರೆದಿದ್ದು, ಬಾಕಿ ಹಣ ಪಾವತಿಸಿದ ಬಳಿಕವಷ್ಟೇ ವಿದ್ಯುತ್ ಪೂರೈಕೆಯನ್ನು ಪುನರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

‘‘ಉಭಯ ರಾಜ್ಯಗಳ ನಡುವಿನ ಬಾಕಿ ವಿದ್ಯುತ್ ಬಿಲ್ ಪಾವತಿಗೆ ಸಂಬಂಧಿಸಿ ರಾಜ್ಯಮಟ್ಟದಲ್ಲಿ ಖಾಯಂ ಪರಿಹಾರ ನೀಡುವಂತೆ ನಾವು ಮನವಿ ಸಲ್ಲಿಸಿದ್ದೇವೆ. ತೆಲಂಗಾಣ ವಿದ್ಯುತ್ ಘಟಕಗಳಿಗೆ ಆಂಧ್ರಪ್ರದೇಶದ ಜೆನ್‌ಕೋ 1676.46 ಕೋ.ರೂ.ಬಿಲ್ ಬಾಕಿ ಇಟ್ಟಿದೆ. ಈ ಮೊತ್ತ ಪಾವತಿಯಾದ ತಕ್ಷಣವೇ ಆಂಧ್ರಪ್ರದೇಶದ ಡಿಸ್ಕಾಂಗಳಿಗೆ ತೆಲಂಗಾಣದ ಜೆನ್ಕೊದಿಂದ ವಿದ್ಯುತ್ ಸರಬರಾಜು ಆರಂಭಿಸಲಾಗುವುದು’’ ಎಂದು ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News