"ಎರಡೆರಡು ಬಾರಿ ನಮ್ಮನ್ನು ನೋಡಬೇಡಿ": ಕೊಚ್ಚಿ ಮೆಟ್ರೋದ ತೃತೀಯಲಿಂಗಿ ನೌಕರರ ಮನವಿ

Update: 2017-06-19 10:50 GMT
ಚಿತ್ರ ಕೃಪೆ: thenewsminute

ಕೊಚ್ಚಿ, ಜೂ. 19: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಂಡ ಕೊಚ್ಚಿ ಮೆಟ್ರೋ ಹಲವು ಕಾರಣಗಳಿಗಾಗಿ ಸುದ್ದಿಯಾಗಿದೆ. ಈ ಯೋಜನೆಯಲ್ಲಿ ಸುಮಾರು 23 ತೃತೀಯ ಲಿಂಗಿಗಳಿಗೆ ಉದ್ಯೋಗ ನೀಡಲಾಗಿದ್ದು ಅವರು ಗ್ರೌಂಡ್ ಸ್ಟಾಫ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ತೃತೀಯ ಲಿಂಗಿಗಳಿಗೆ ಈ ಯೋಜನೆಯಲ್ಲಿ ಉದ್ಯೋಗ ನೀಡಿರುವುದು ಸಂತೋಷದ ವಿಚಾರವಾದರೂ ಸಮಾಜ ಅವರನ್ನು ಈ ಹುದ್ದೆಗಳಲ್ಲಿ ಒಪ್ಪುವುದೇ ಎಂಬ ಪ್ರಶ್ನೆಯೂ ಎದುರಾಗಿದೆ.

ಈ ತೃತೀಯ ಲಿಂಗಿಗಳನ್ನು ಜನರು ದಿಟ್ಟಿಸಿ ನೋಡುತ್ತಾರೆ, ಕೆಲವರು ಎರಡೆರಡು ಬಾರಿ ಅವರನ್ನು ನೋಡುತ್ತಾರೆ ಹಾಗೂ ಇನ್ನು ಹಲವರು ಅವರ ಸಮುದಾಯವನ್ನು ಅಪಹಾಸ್ಯ ಕೂಡ ಮಾಡುತ್ತಾರೆ.

ಆದರೆ ಸಮಾಜ ತೃತೀಯ ಲಿಂಗಿಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ಕೊಚ್ಚಿ ಮೆಟ್ರೋ ಆರಂಭಗೊಂಡಂದಿನಿಂದ ಅದರಲ್ಲಿ ಪ್ರಯಾಣಿಸುತ್ತಿರುವ ಜನರಿಗೆ ಈ ತೃತೀಯ ಲಿಂಗಿಗಳ ಸಂದೇಶ ಮಹತ್ವದ್ದು.

ಕೇರಳ ಇನ್ಫಾರ್ಮೇಶನ್ ಎಂಬ ಫೇಸ್ ಬುಕ್ ಪೇಜ್ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಕೊಚ್ಚಿ ಮೆಟ್ರೋ ಯೋಜನೆಯ ಭಾಗವಾಗಿ ಕೆಲಸ ಮಾಡುವ ತೃತೀಯ ಲಿಂಗಿಗಳು, ಸಮಾಜ ತಮ್ಮನ್ನು ಇತರರಂತೆಯೇ ಕಾಣಬೇಕೆಂದು ಹೇಳಿದ್ದಾರೆ.

‘‘ನಮ್ಮನ್ನು ಎರಡೆರಡು ಬಾರಿ ನೋಡಬೇಡಿ,’’ ಎಂದು ತೃತೀಯ ಲಿಂಗಿಗಳು ಹೇಳುವ ದೃಶ್ಯ ಈ ವೀಡಿಯೋದಲ್ಲಿದೆ. ಜನರು ತಮ್ಮನ್ನು ಅಪಹಾಸ್ಯ ಮಾಡಬಾರದು, ತಮ್ಮ ಮೇಲೆ ಅನುಕಂಪ ತೋರಿಸುವ ಅಗತ್ಯವೂ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರಲ್ಲದೆ ಇತರರಂತೆ ತಮಗೂ ಜೀವನದಲ್ಲಿ ಆಸೆ ಆಕಾಂಕ್ಷೆ, ಗುರಿ ಹಾಗೂ ನಿರೀಕ್ಷೆಗಳಿವೆ ಎಂದಿದ್ದಾರೆ. ನಮ್ಮನ್ನೂ ಗೌರವದಿಂದ ಕಾಣಿರಿ ಎಂದು ಅವರು ಹೇಳುತ್ತಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News