ಭ್ರಷ್ಟಾಚಾರಿಗಳ ಚರ್ಚ್ ಸಂದರ್ಶನ ನಿಷೇಧಕ್ಕೆ ವ್ಯಾಟಿಕನ್ ಚಿಂತನೆ

Update: 2017-06-19 10:50 GMT

ರೋಂ,ಜೂ. 19: ಭ್ರಷ್ಟಾಚಾರಿಗಳು ಮತ್ತುದರೋಡೆಕೋರರ ತಂಡದ ಸದಸ್ಯರಿಗೆ ಚರ್ಚ್ ನಿಷೇಧ ಹೇರಲು ವ್ಯಾಟಿಕನ್ ಚಿಂತನೆ ನಡೆಸುತ್ತಿದೆ ಎಂದು ಇಟಲಿಯ ಮಾಧ್ಯಮಗಳು ವರದಿಮಾಡಿವೆ. ವ್ಯಾಟಿಕನ್‌ನಲ್ಲಿ ನಡೆದ ಭ್ರಷ್ಟಾಚಾರ ಕುರಿತ ಅಂತಾರಾಷ್ಟ್ರೀಯ ಸಂವಾದದಲ್ಲಿ ಈ ವಿಚಾರ ಪರಿಗಣನೆಗೆ ಬಂದಿದ್ದು, ವ್ಯಾಟಿಕನ್ ವಿವಿಧ ಹೈಕಮೀಶನರ್‌ಗಳು, ಪೊಲೀಸ್ ಪ್ರತಿನಿಧಿಗಳು, ಮ್ಯಾಜಿಸ್ಟ್ರೇಟ್‌ಗಳ ಸಹಿತ ಐವತ್ತು ಮಂದಿ ಈಸಂವಾದದಲ್ಲಿ ಭಾಗವಹಿಸಿದ್ದರು.

ಸಂವಾದದ ಕೊನೆಯಲ್ಲಿ ಹೊರಡಿಸಲಾದ ಹೇಳಿಕೆಯಲ್ಲಿ ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೊಗೆಯಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಬಲಿಷ್ಠಗೊಳ್ಳಬೇಕೆಂದು ಕರೆ ನೀಡಲಾಗಿದೆ. ಭ್ರಷ್ಟಾಚಾರಿಗಳು, ದರೋಡೆಕೋರರಿಗೆ ಚರ್ಚ್ ನಿಷೇಧ ಹೇರಬೇಕಾದ ಸಮಯ ಕಳೆದುಹೋಗಿದೆ ಎಂದು ವ್ಯಾಟಿಕನ್ ತಿಳಿಸಿದೆ.

ಭ್ರಷ್ಟಾಚಾರ ನಿಗ್ರಹಕ್ಕೆ ಕಠಿಣ ಕ್ರಮದ ಅಗತ್ಯವಿದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. 2014ರಲ್ಲಿ ಇಟಲಿಯಲ್ಲಿ ಮಾಫಿಯ ತಂಡಗಳಲ್ಲಿ ಒಂದರ ಕೇಂದ್ರಕ್ಕೆ ಭೇಟಿ ನೀಡಿದ ಅವರು ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡವರಿಗೆ ಚರ್ಚ್ ನಿಷೇಧ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಇಟಲಿಯ ಸಿಸಿಲಿ, ಕಂಫಾನಿಯದಲ್ಲಿ ದರೋಡೆ ತಂಡಗಳಿಗೆ ಅಲ್ಲಲ್ಲಿನ ಚರ್ಚ್ ಮುಖ್ಯಸ್ಥರು ಚರ್ಚ್ ನಿಷೇಧ ಹೇರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News