ಮಂಟಪದಲ್ಲಿದ್ದ ಮದುಮಗಳು ಇದೀಗ ಕಂಬಿ ಹಿಂದೆ!

Update: 2017-06-19 11:01 GMT

ಪಂದಳಂ,ಜೂ.19: ಮದುವೆ ಆದ ಬಳಿಕ ಹಣ ಮತ್ತು ಆಭರಣಗಳೊಂದಿಗೆ ಪರಾರಿಯಾಗುತ್ತಿದ್ದ ಯುವತಿಯನ್ನು ಊರವರೇ ಮದುವೆ ವೇದಿಕೆಯಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಟ್ಟಾರಕರ ಇಳಮಾಡ್ ಆಕ್‌ಕಲ್‌ನ ಶಾಲಿನಿ(32)ಯನ್ನು ಪಂದಳಂ ಪೊಲೀಸರು ಬಂಧಿಸಿದ್ದಾರೆ. ರವಿವಾರ ಉಳ್ಳನ್ನೂರ್ ವಿಳಯಾಡಿಶ್ಶೇರಿಯಲ್ಲಿ ಕುಲನಡ ಎಂಬಲ್ಲಿನ ಯುವಕನನ್ನು ಶಾಲಿನಿ ಮದುವೆಯಾದ ಬಳಿಕ ಊರವರ ಕೈಗೆ ಸಿಕ್ಕಿಬಿದ್ದಿದ್ದಾಳೆ. ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು ವಂಚಕಿಯನ್ನು ಗುರುತಿಸಿದ್ದರು. ನಂತರ ವಂಚನೆಗೊಳಗಾದ ಕಿಡಂಗನ್ನೂರ್‌ನ ಯುವಕನನ್ನು ಕರೆತಂದು ಯುವತಿಯನ್ನು ಗುರುತಿಸಲಾಯಿತು.

ವಂಚನೆ ಬಯಲಾಗಿ ಪೊಲೀಸರು ಬರುವುದು ಖಚಿತವಾದೊಡನೆ ಶಾಲಿನಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಪಂದಳಂ ಎಸ್ಸೈ, ಎಸ್.ಸನೂಜ್ ನೇತೃತ್ವದ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ತನಗೆ ಎರಡನೆ ಮದುವೆ ಇದು. ನಿಕಟ ಸಂಬಂಧಿಕರಿಲ್ಲ.ಕೋರ್ಟಿನಲ್ಲಿ ಕೆಲಸ ಎಂದು ಮಹಿಳೆ ವರನ ಮನೆಯವರನ್ನು ಒಪ್ಪಿಸಿದ್ದಳು.

ಮದುವೆ ತೀರ್ಮಾನಿಸಿದ ಬಳಿಕ 10,000ರೂಪಾಯಿಯನ್ನು ಇನ್ಶೂರೆನ್ಸ್ ಕಟ್ಟಲು ಎಂದು ಶಾಲಿನಿ ಉಪಾಯವಾಗಿ ತೆಗೆದುಕೊಂಡಿದ್ದಾಳೆ. ಶನಿವಾರ ಸಂಬಂಧಿಕ ಎಂದು ಹೇಳಿ ಒಬ್ಬರು ಇವಳನ್ನು ವರನ ಮನೆಗೆ ಕರೆತಂದು ಬಿಟ್ಟಿದ್ದರು. ಈಕೆ ನಕಲಿ ಚಿನ್ನಾಭರಣಗಳನ್ನು ಧರಿಸಿದ್ದಳು. ಕೋಯಿಪ್ರಂ, ಚೆಂಙನ್ನೂರ್, ಆರನ್ಮುಳ, ಎರ್ನಾಕುಲಂ ಜಿಲ್ಲೆಗಳಲ್ಲಿ ಹಲವು ಪೊಲೀಸ್ ಠಾಣೆಗಳಲ್ಲಿ ಮಹಿಳೆಯ ವಿರುದ್ಧ ಒಂಬತ್ತು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಮಹಿಳೆ ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News