ಕಾಶ್ಮೀರದಲ್ಲಿ ಹಿಂಸೆ ಹತ್ತಿಕ್ಕಲು ಕೇಂದ್ರದಿಂದ ಲಕ್ಷಕ್ಕೂ ಅಧಿಕ ಪ್ಲಾಸ್ಟಿಕ್ ಬುಲೆಟ್ ರವಾನೆ

Update: 2017-06-20 09:03 GMT

ಹೊಸದಿಲ್ಲಿ, ಜೂ.20: ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಹತ್ತಿಕ್ಕುವ ಸಲುವಾಗಿ ಒಂದು ಲಕ್ಷಕ್ಕೂ ಅಧಿಕ ಪ್ಲಾಸ್ಟಿಕ್ ಬುಲೆಟ್ ಗಳನ್ನು ಕೇಂದ್ರ ಸರಕಾರವು ಜಮ್ಮು ಕಾಶ್ಮೀರದ ಭದ್ರತಾ ಪಡೆಗಳಿಗೆ ಪೂರೈಸಿದೆ.

ಅದರ ಜತೆಗೆ ನೈಸರ್ಗಿಕ ಕರಿಮೆಣಸಿನಲ್ಲಿರುವ ಪೆಲರ್ಗೊನಿಕ್ ಆ್ಯಸಿಡ್ ವೆನಿಲ್ಲಿಲ್ ಎಮೈಡ್ ನಿಂದ ತಯಾರಿಸಲಾದ ಪಾವಾ ಶೆಲ್ ಕೂಡ ಕಳುಹಿಸಿಕೊಟ್ಟಿದೆ. ರಾಸಾಯನಿಕ ಹೊಂದಿದ ಪಾವಾ ಶೆಲ್ ಗಳಿಗೆ ಹೋಲಿಸಿದಾಗ ಇವುಗಳು ತಮ್ಮ ವಾಸನೆಯಿಂದಾಗಿ ಹೆಚ್ಚು ಪರಿಣಾಮಕಾರಿಯೆನ್ನಲಾಗಿದೆ.

ಈ ಹಿಂದೆ ಪೆಲ್ಲೆಟ್ ಗನ್ನುಗಳಿಂದಾಗಿ ಸಾಕಷ್ಟು ಮಂದಿಯ ಕಣ್ಣಿಗೆ ಹಾನಿಗೊಂಡಿದ್ದರಿಂದಾಗಿ ಸಾಕಷ್ಟು ಪ್ರಯೋಗಗಳ ನಂತರ ಈ ಪ್ಲಾಸ್ಟಿಕ್ ಬುಲೆಟ್ ಸಿದ್ಧಪಡಿಸಲಾಗಿದೆ ಎಂದು ಗೃಹ ಖಾತೆ ಮೂಲಗಳು ತಿಳಿಸಿವೆ.

ಸಿಂಗಲ್ ಶಾಟ್ ಮೋಡ್ ಮುಖಾಂತರ ಪ್ಲಾಸ್ಟಿಕ್ ಬುಲೆಟ್ ಅನ್ನು ಸಿಡಿಸಬಹುದು ಎಂದು ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಹಿಂಸೆಯನ್ನು ಹತ್ತಿಕ್ಕಲು ಕೆಲವೊಮ್ಮೆ ಅನಿವಾರ್ಯವಾಗಿ ಪೆಲ್ಲೆಟ್ ಗನ್ನುಗಳನ್ನು ಉಪಯೋಗಿಸುವುದು ಈಗಲೂ ಸಾಧ್ಯವಾದರೂ ಅವುಗಳ ಬಳಕೆಯನ್ನು ಬಹಳಷ್ಟು ಕಡಿಮೆಗೊಳಿಸಲಾಗಿದೆ ಎಂದು ಕೇಂದ್ರ ಸರಕಾರ ಈಗಾಗಲೇ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News