9ನೇ ಶಸ್ತ್ರಚಿಕಿತ್ಸೆಯ ಮೊದಲೇ ದೊಡ್ಡ ತಲೆಯ ಮಗು ನಿಧನ

Update: 2017-06-20 10:39 GMT

ಅಗರ್ತಲ,ಜೂ.20: ಅಪರೂಪದ ರೊಗಕ್ಕೆತುತ್ತಾಗಿ ದೊಡ್ಡತಲೆಯ ಸಮಸ್ಯೆಯನ್ನು ಎದುರಿಸುತ್ತಿದ್ದ ಐದುವರ್ಷದ ರೂನಾ ಬೇಗಂ ಮೃತಳಾಗಿದ್ದಾಳೆ. ಮೆದುಳಿನಲ್ಲಿ ನೀರು ತುಂಬಿಕೊಳ್ಳುವ “ಹೈಡ್ರೊಸಫಲಸ್” ಎನ್ನುವ ರೋಗದಿಂದ ರೂನಾ ಬಳಲುತ್ತಿದ್ದಳು.

ರೂನಾಳ ತಲೆ 94ಸೆಂಟಿಮೀಟರಿನಷ್ಟು ವೃತ್ತ ಪರಿಧಿಯನ್ನು ಹೊಂದಿತ್ತು. 2013ರಿಂದ ಗುರುಗ್ರಾಮದ ಎಫ್‌ಎಂಆರ್‌ಐ ಆಸ್ಪತ್ರೆಯಲ್ಲಿ ಎಂಟು ಶಸ್ತ್ರಕ್ರಿಯೆ ರೂನಾಗೆ ಆಗಿತ್ತು. ಆರು ತಿಂಗಳಲ್ಲಿ ಮುಂದಿನ ಶಸ್ತ್ರ ಚಿಕಿತ್ಸೆ ನಡೆಯುವುದಿತ್ತು. ಅದಕ್ಕಿಂತ ಮೊದಲೇ ರೂನಾ ಮೃತಳಾಗಿದ್ದಾಳೆ.

ಎಲ್ಲಮಕ್ಕಳಂತೆ ರೂನಾ ಕೂಡಾ ಆಗುತ್ತಾಳೆಂದು ವೈದ್ಯರು ಹೇಳಿದ್ದರು. ಒಂದು ತಿಂಗಳ ಹಿಂದೆ ನಡೆದ ಪರೀಕ್ಷೆಯಲ್ಲಿ ರೂನಾಳನ್ನು ರಕ್ಷಿಸಬಹುದು ಎನ್ನುವ ನಿರ್ಧಾರಕ್ಕೆ ವೈದ್ಯರು ಬಂದಿದ್ದರು.

"ಅವಳಿಗೆ ಸಣ್ಣ ಶ್ವಾಸಕೋಶ ಇತ್ತು. ಆದರೆ ಏನಿದ್ದರೂ ಆಸ್ಪತ್ರೆಗೆ ಹೋಗುವ ಮೊದಲೇ ಅವಳು ಮೃತಪಟ್ಟಳು ಎಂದು ರೂನಾಳ ಅಮ್ಮ ಫಾತಿಮಾ ಖಾತೂನ್ ಹೇಳಿದರು.

ಆರಂಭದಲ್ಲಿ ರೂನಾಳ ಸ್ಥಿತಿ ತುಂಬ ಕೆಟ್ಟದಾಗಿತ್ತು. ಆದರೆ ಐದು ಶಸ್ತ್ರಕ್ರಿಯೆಯ ಬಳಿಕ ಅವಳ ಆರೋಗ್ಯದಲ್ಲಿ ಪ್ರಗತಿಯಾಗಿತ್ತು. ಚಿಕಿತ್ಸೆಯ ಎರಡನೆ ಘಟ್ಟದಲ್ಲಿ ಹೆಚ್ಚಿನ ಪ್ರಗತಿಯಾಗಿದ್ದರೂ ಅವಳಿಗೆ ನಡೆಯಲು ಮತ್ತುಮಾತನಾಡಲು ಆಗಿರಲಿಲ್ಲ. ಆದರೆ ಅವಳ ತಲೆಯ ಗಾತ್ರ ಕಡಿಮೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News