ದುಬೈ ಅಪೀಲು ಕೋರ್ಟಿನಲ್ಲಿ ಕೇರಳದ ವ್ಯಕ್ತಿಯ ಮರಣದಂಡನೆ ರದ್ದು!

Update: 2017-06-20 10:56 GMT

ದುಬೈ,ಜೂ. 20: ಮೂರುವರ್ಷಗಳ ಹಿಂದೆ ಫಿಲಿಪ್ಪೀನ್ಸ್‌ನ ವ್ಯಕ್ತಿಯನ್ನು ಕೊಂದಿದ್ದ ಪ್ರಕರಣದಲ್ಲಿ ತೃಶೂರಿನ ಚಾವಕ್ಕಾಡ್‌ನ ವ್ಯಕ್ತಿಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ದುಬೈ ಅಪೀಲುಕೋರ್ಟು ರದ್ದುಪಡಿಸಿದೆ. ಚಾವಕ್ಕಾಡ್ನ ನೌಷಾದ್‌ನ ಮರಣದಂಡನೆಯನ್ನು ಹತ್ತುವರ್ಷ ಜೈಲುಶಿಕ್ಷೆಗೆ ಕಡಿತಗೊಳಿಸಿದೆ.

2014ರಲ್ಲಿ ರಾಸಲ್‌ಖೈಮದಲ್ಲಿ ಎಲಿಝೋ ಸಾಂಡಿಯಾಗೊ ಕೊಲೆಯಾಗಿದ್ದು, ಎಲಿಝೊ ರಾಸಲ್‌ಖೈಮದಲ್ಲಿ ಚಾಲಕನಾಗಿದ್ದ ನೌಷಾದ್‌ನ ಗೆಳೆಯನಾಗಿದ್ದ. ನೌಷಾದ್‌ನಲ್ಲಿ ಆಗಾಗ ಹಣಕೇಳುತ್ತಿದ್ದ. ಕೊಡದಿದ್ದರೆ ರಹಸ್ಯಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸುತ್ತಿದ್ದ. ಇದರಿಂದಾಗಿ ಇಬ್ಬರ ನಡುವೆ ಜಗಳ ಆಗಿತ್ತು. ನೌಷಾದ್ ಕೊಲ್ಲುವ ಉದ್ದೇಶದಿಂದ ಎಲಿಝೊನಿಗೆ ಹೊಡೆದಿರಲಿಲ್ಲ. ಆದರೆ ನೌಷಾದ್‌ನ ಹೊಡೆತಕ್ಕೆ ಸಿಕ್ಕಿ ಎಲಿಝೊ ಮೃತಪಟ್ಟಿದ್ದನು. ಪ್ರಕರಣದಲ್ಲಿ ರಾಸಲ್‌ಖೈಮ ಕೋರ್ಟು ನೌಷಾದ್‌ಗೆ ಮರಣದಂಡನೆ ವಿಧಿಸಿತ್ತು.

ನಂತರ ನೌಷಾದ್ ರಾಸಲ್‌ಖೈಮ ಅಪೀಲುಕೋರ್ಟಿನ ಮೊರೆಹೋಗಿದ್ದಾನೆ. ಆದರೆ ಕೆಳಕೋರ್ಟಿನ ತೀರ್ಪನ್ನೇ ಎತ್ತಿ ಹಿಡಿದಿತ್ತು. ನಂತರ ನೌಷಾದ್‌ನ ಸಂಬಂಧಿಕರು ಹಿರಿಯ ಕಾನೂನು ಸಲಹೆಗಾರ ಶಂಶುದ್ದೀನ್ ಕರುನಾಗಪಳ್ಳಿಯವರ ಮೂಲಕ ಸುಪ್ರೀಂಕೋರ್ಟಿಗೆ ಅರ್ಜಿಸಲ್ಲಿಸಿದ್ದರು. ಎರಡು ವಿಭಾಗಗಳ ವಾದವನ್ನು ಆಲಿಸಿದ ನ್ಯಾಯಲಯವು ಪ್ರಕರಣವನ್ನು ಪುನಃ ಅಪೀಲು ಕೋರ್ಟಿಗೆ ಮರಳಿಸಿತ್ತು.ನಂತರ ಮರಣದಂಡನೆಯನ್ನು ಅಪೀಲು ಕೋರ್ಟು ಹತ್ತುವರ್ಷ ಜೈಲು ಶಿಕ್ಷೆಯಾಗಿ ಪರಿವರ್ತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News