ಗೋಹತ್ಯೆ ಆರೋಪ: ಉದ್ವಿಗ್ನ ಸ್ಥಿತಿ

Update: 2017-06-23 04:05 GMT

ಶಹಾಜಹಾನ್‌ಪುರ, ಜೂ. 23: ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡಲಾಗಿದೆ ಎಂದು ಒಂದು ಗುಂಪು ಆಪಾದಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದ್ದು, ಭಾರಿ ಪ್ರಮಾಣದಲ್ಲಿ ಪೊಲೀಸ್ ಕಾವಲು ನಿಯೋಜಿಸಲಾಗಿದೆ.

ಉತ್ತರ ಪ್ರದೇಶ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಐಪಿಸಿ ಅನ್ವಯ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶಹಜಹಾನ್‌ಪುರದ ಮಾವು ಎಂಬ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಬೆಟ್ಟಕ್ಕೆ ಮೇಯಲು ಬಿಟ್ಟ ಹಸು ಮನೆಗೆ ವಾಪಾಸು ಬಾರದ ಹಿನ್ನೆಲೆಯಲ್ಲಿ ಮರುದಿನ ಹಸುವಿಗಾಗಿ ಭಾರೀ ಹುಟುಕಾಟ ನಡೆಯಿತು. ಆ ವೇಳೆ ನಾಲ್ವರು ತಮ್ಮ ಮುಖವನ್ನು ಮುಚ್ಚಿಕೊಂಡು ರಾಮ್‌ಗಂಗಾ ನದಿಯ ಮರಳಿನಲ್ಲಿ ಹಸುವಿನ ಚರ್ಮವನ್ನು ಇರಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ಎಸ್ಪಿ ಸುಭಾಶ್‌ಚಂದ್ರ ಶಕ್ಯಾ ಪ್ರಕಟಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಶಹಜಹಾನ್‌ಪಿರ- ಫರೂಕಾಬಾದ್ ರಸ್ತೆಯಲ್ಲಿ ಭಾರಿ ಸಂಖ್ಯೆಯ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News