ರಾಷ್ಟ್ರಪತಿ ಸ್ಥಾನಕ್ಕೆ ಕೋವಿಂದ್ ನಾಮಪತ್ರ

Update: 2017-06-23 08:50 GMT

ಹೊಸದಿಲ್ಲಿ, ಜೂ.23: ರಾಷ್ಟ್ರಪತಿ ಚುನಾವಣೆಗೆ  ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ರಾಮನಾಥ್ ಕೋವಿಂದ್ ಇಂದು ನಾಮಪತ್ರ ಸಲ್ಲಿಸಿದರು.

ಜುಲೈ 17ರಂದು ನಡೆಯಲಿರುವ ಚುನಾವಣೆಗೆ ಕೋವಿಂದ್ ನಾಲ್ಕು ಸೆಟ್ ಗಳಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. 

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅವರ ಸಚಿವ ಸಂಪುಟದ ಸಹದ್ಯೋಗಿಗಳು,ಮಾಜಿ ಉಪ ಪ್ರಧಾನಿ ಎಲ್ಕೆ ಅಡ್ವಾನಿ, ಎಂ.ಎಂ ಜೋಶಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ, 20  ರಾಜ್ಯಗಳ ಮುಖ್ಯ ಮಂತ್ರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತದಲ್ಲಿ ಸಂವಿಧಾನವೇ ಪರಮೋಚ್ಛವಾಗಿದೆ.ರಾಷ್ಟ್ರಪತಿ ಹುದ್ದೆ ರಾಜಕೀಯದಿಂದ ಹೊರತಾಗಿದೆ. ಈ ಹುದ್ದೆಯ ಘನತೆ ಮತ್ತು ಗೌರವವನ್ನು ಉಳಿಸಲು ಪ್ರಯತ್ನಿಸುವೆ.  ರಾಜ್ಯಪಾಲನಾದ ಬಳಿಕ ರಾಜಕೀಯ ನಡೆಸಿಲ್ಲ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News