ಫಝಲ್ ಕೊಲೆ ಪ್ರಕರಣ: ಆರೆಸ್ಸೆಸ್ ಸಂಬಂಧಕ್ಕೆ ಪುರಾವೆ ಇದೆ- ಡಿವೈಎಸ್ಪಿ ಪಿ.ಸದಾನಂದನ್

Update: 2017-06-23 10:17 GMT

ಕಣ್ಣೂರ್, ಜೂ. 23: ತಲಶ್ಶೇರಿ ಫಝಲ್ ಕೊಲೆ ಪ್ರಕರಣದ ಹಿಂದೆ ಸಿಪಿಎಂ ಅಲ್ಲ, ಆರೆಸ್ಸೆಸ್ ಶಾಮೀಲಾಗಿದೆ ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಗಳಿವೆ ಎಂದು ಡಿವೈಎಸ್ಪಿ ಪಿ.ಪಿ. ಸದಾನಂದನ್ ಹೇಳಿದ್ದಾರೆ. ಅವರು ಪೊಲೀಸ್ ಅಸೋಸಿಯೇಶನ್ ಜಿಲ್ಲಾ ಸಮ್ಮೇಳನದಲ್ಲಿಮಾತಾಡುತ್ತಿದ್ದರು.

ಫಝಲ್‌ನನ್ನು ತಾನುಮತ್ತುಸಂಗಡಿಗರು ಕೊಂದಿದ್ದೆಂದು ಆರೆಸ್ಸೆಸ್ ಕಾರ್ಯಕರ್ತಚೆಂಬ್ರದ ಸುಭೀಶ್ ನೀಡಿದ್ದ ಹೇಳಿಕೆಯನ್ನು ಡಿವೈಎಸ್ಪಿ ಸದಾನಂದನ್ ದಾಖಲಿಸಿದ್ದರು. ಈ ಆಧಾರದಲ್ಲಿ ಫಝಲ್ ಕೇಸು ಮರುತನಿಖೆ ನಡೆಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ನ್ಯಾಯಾಲಯ ಇತ್ತೀಚೆಗೆ ತಳ್ಳಿಹಾಕಿತ್ತು.ನಾವು ಹೇಳಿದ್ದು ಸತ್ಯ ಎನ್ನುವುದು ಇಂದಲ್ಲದಿದ್ದರೆ, ನಾಳೆ ಬಹಿರಂಗವಾಗಲಿದೆ ಎಂದು ಡಿವೈಎಸ್ಪಿ ಹೇಳಿದ್ದಾರೆ. ಪ್ರಕರಣದಲ್ಲಿಈಗ ಬಂಧಿಸಲಾದ ವ್ಯಕ್ತಿಗಳು ಕೊಲೆ ನಡೆಸಿಲ್ಲ ಎನ್ನುವುದು ಹೈಕೋರ್ಟಿನ ನ್ಯಾಯಾಧೀಶರು ಹೇಳಿದ್ದಾರೆ. ತುಂಬ ಕೆಟ್ಟ ಭೂತಕಾಲ ಇದ್ದ ಮೂವರನ್ನು ಹುಡುಕಿ ಆರೋಪಿಯನ್ನಾಗಿಸಲು ಪೊಲೀಸರಿಗೆ ಸಾಧ್ಯವಾಗಿದೆ. ಅವರನ್ನು ಬಂಧಿಸುವುದು ಬಿಡಿ, ಸ್ಪರ್ಶಿಸಲು ಕೂಡಾ ಇರುವ ಸಾಕ್ಷ್ಯ ಫೈಲುಗಳನ್ನು ಪೊಲೀಸರು ಪತ್ತೆಹಚ್ಚಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಘಟನೆನಡೆದು ಒಂದು ವರ್ಷದಬಳಿಕ ಒಂದು ಚಿತ್ರಮಂದಿರದ ಕಂಪೌಂಡ್‌ನಿಂದ ಆಯುಧಗಳನ್ನು ಆರೋಪಿಗಳು ತೋರಿಸಿದ್ದರಿಂದ ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದರೆ ಅದನ್ನು ನಂಬುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆಯುಧ ಪತ್ತೆಹಚ್ಚಿದ್ದು ನಕಲಿಯಾಗಿದೆ ಎಂದು ಕೊಲೆಯಾದ ವ್ಯಕ್ತಿಯ ವಕೀಲರು ಕೂಡಾ ನ್ಯಾಯಾಲಯದಲ್ಲಿ ಅಂದು ಹೇಳಿದ್ದಾರೆ ಎಂದು ಸದಾನಂದನ್ ತಿಳಿಸಿದ್ದಾರೆ. ಸುಭೀಶ್ ತಪ್ಪೊಪ್ಪಿಗೆಯನ್ನು ಪೊಲೀಸರು ಹೊಡೆದು ಹೇಳಿಸಿದ್ದಾರೆ ಎನ್ನಲಾಗುತ್ತಿದೆ.

ಹೊಡೆಯಬೇಕಿದ್ದರೆ ಆತನ ಹತ್ತಿರ ಹೋಗಬೇಕಿದೆ. ತಮ್ಮ ಮತ್ತು ಆತನ ಫೋನ್ ದಾಖಲೆಯನ್ನು ಪರಿಶೀಲಿಸಿ ನೋಡಿರಿ. ಇಬ್ಬರೂ ಒಂದೇ ಸ್ಥಳದಲ್ಲಿ ಇದ್ದದ್ದು ಯಾವಾಗ ಎಂದು ಪತ್ತೆಹಚ್ಚಬಹುದಲ್ಲ. ವೀಡಿಯೊ ಪರಿಶೀಲಿಸಿ ನೋಡಿ. ಅದರಲ್ಲಿ ಹೊಡೆದ, ಬೆದರಿಕೆ ಹಾಕಿದ್ದು ಯಾವುದು ಇಲ್ಲ. ಬಹಳ ಸಹಜವಾದ ವಾತಾವರಣದಲ್ಲಿ ವೈಜ್ಞಾನಿಕ ಪುರಾವೆಗಳ ಆಧಾರದಲ್ಲಿ ಕೇಳಿದಾಗ ಹೇಳಿದ್ದೆಂದು ಅಕ್ಕಿ ಊಟ ಮಾಡುವ ಯಾರಿಗೂ ಗೊತ್ತಾಗುತ್ತದೆ. ಗಲ್ಲುಶಿಕ್ಷೆ ವಿಧಿಸಬಹುದಾದ ಸಾಕ್ಷ್ಯಗಳಿವೆ. ಇದನ್ನು ಹೇಳದಿರಲು ಸಾಧ್ಯವಿಲ್ಲದ ವಾತಾವರಣ ಇದೆ. ಆದರೆ ಕೆಲವು ರಾಜಕೀಯ ಪಕ್ಷಗಳು ಪೊಲೀಸ್ ಅಧಿಕಾರಿಗಳ ವಿರುದ್ಧ ಕೊಲೆಬೆದರಿಕೆ ಹಾಕುತ್ತಿವೆ ಎಂದು ಡಿವೈಎಸ್ಪಿ ಸದಾನಂದನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News