ಮುಕೇಶ್ ಅಂಬಾನಿಯ ಎಂಟಿಲಿಯಾದಲ್ಲಿ ಬೆಂಕಿ ಅವಘಡ

Update: 2017-07-11 08:44 GMT

ಮುಂಬೈ, ಜು.11: ವಿಶ್ವದ ಅತ್ಯಂತ ಬೆಲೆಬಾಳುವ ಆಸ್ತಿಗಳಲ್ಲೊಂದಾಗಿರುವ ಅಲ್ಟಮೊಂಟ್ ರೋಡಿನಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಎಂಟಿಲಿಯಾ ನಿವಾಸದ ಒಂಬತ್ತನೆ ಮಹಡಿಯಲ್ಲಿ ಮಂಗಳವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಬೆಂಕಿಯನ್ನು ಕೆಲವೇ ನಿಮಿಷಗಳಲ್ಲಿ ನಂದಿಸಲಾಗಿದ್ದು, ಯಾವುದೇ ಹೆಚ್ಚಿನ ಆಸ್ತಿಪಾಸ್ತಿ ನಷ್ಟವಾಗಿಲ್ಲವೆಂದು ತಿಳಿದು ಬಂದಿದೆ.

ಅಗ್ನಿಶಾಮಕ ದಳಕ್ಕೆ 9:04ರ ಸುಮಾರಿಗೆ ಕರೆ ಬಂದಿದ್ದು ಸಿಬ್ಬಂದಿ 9:13ರೊಳಗಾಗಿ ಸ್ಥಳಕ್ಕೆ ಧಾವಿಸಿದ್ದರು.
ಆದರೆ ಅಗ್ನಿ ಶಾಮಕ ದಳ ಆಗಮಿಸುವ ಮೊದಲೇ ಕಟ್ಟಡದ ಸಿಬ್ಬಂದಿ ಅಲ್ಲಿಯೇ ಇದ್ದ ಬೆಂಕಿ ನಂದಿಸುವ ಉಪಕರಣಗಳನ್ನು ಉಪಯೋಗಿಸಿ ಬೆಂಕಿಯನ್ನು ಶಮನಗೊಳಿಸಿದ್ದರು. ಬೆಂಕಿಯು ಒಂಬತ್ತನೆ ಮಹಡಿಯಲ್ಲಿದ್ದ 4ಜಿ ಆಂಟೆನಾ ಹಾಗೂ ತೋಟದ ಪ್ಲಾಸ್ಟಿಕ್ ಫ್ರೇಮಿಂಗ್ ಗೆ ಸೀಮಿತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳುಂಟಾಗಿಲ್ಲ

ಅಂಬಾನಿಯ ಈ ಬಹುಮಹಡಿ ಕಟ್ಟಡವು 170 ಮೀಟರ್ ಎತ್ತರವಾಗಿದೆ. ಘಟನೆಯ ಸಂದರ್ಭ ಕುಟುಂಬದ ಸದಸ್ಯರ್ಯಾರೂ ಮನೆಯಲ್ಲಿರಲಿಲ್ಲವೆಂದು ಹೇಳಲಾಗಿದೆ.

ಬೆಂಕಿ ಅವಘಢಕ್ಕೆ ಕಾರಣವೇನೆಂದು ತಿಳಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ವಕ್ತಾರರೊಬ್ಬರು ಹೇಳಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಖಾಸಗಿ ನಿವಾಸವಾಗಿರುವ ಎಂಟಿಲಿಯಾ ಸುಮಾರು ರೂ.13,000 ಕೋಟಿ ಮೌಲ್ಯದ್ದಾಗಿದ್ದು, ದಕ್ಷಿಣ ಮುಂಬೈನ ಕುಂಬಲ್ಲ ಹಿಲ್ ಪ್ರದೇಶದಲ್ಲಿದೆ.

ಮುಖೇಶ್ ಅಂಬಾನಿ ಕುಟುಂಬ ಸಹಿತ ಸುಮಾರು 600 ಮಂದಿ ಸಿಬ್ಬಂದಿ ಇಲ್ಲಿ 2010ರಿಂದ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News