ಸಾಕ್ಷ್ಯ ಆಧಾರದಲ್ಲಿಯೇ ವರದಿ ಕೊಟ್ಟಿದ್ದೇನೆ : ಕಾರಾಗೃಹ ಡಿಐಜಿ ರೂಪಾ ಸ್ಪಷ್ಟನೆ

Update: 2017-07-13 07:19 GMT

ಬೆಂಗಳೂರು, ಜು.13: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿದ್ಯಮಾನಗಳ ಬಗ್ಗೆ ಸಾಕ್ಷ್ಯ ಆಧಾರದಲ್ಲಿಯೇ ವರದಿ ಕೊಟ್ಟಿದ್ದೇನೆ ಎಂದು ಕಾರಾಗೃಹ ಇಲಾಖೆಯ ಡಿಐಜಿ ಡಿ.ರೂಪಾ  ಸ್ಪಷ್ಟಪಡಿಸಿದ್ದಾರೆ. 

ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ  ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿ ಜೆ .ಜಯಲಲಿತಾರ ಸ್ನೇಹಿತೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ ಶಶಿಕಲಾಗೆ ವಿಶೇಷ ಆತಿಥ್ಯ ಒದಗಿಸಲು 2 ಕೋಟಿ ರೂ. ಲಂಚ ನೀಡಲಾಗಿದೆ ಎಂದು ಆರೋಪಿಸಿ ಡಿಐಜಿ ರೂಪಾ  ಆರೋಪಿಸಿ ಡಿಜಿಪಿ ಸತ್ಯನಾರಾಯಣ ರಾವ್ ಗೆ ಪತ್ರ ಬರೆದಿದ್ದರು.

 ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ.ದತ್ತಾ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ, ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರ ಕುಂಟಿಯಾ ಅವರಿಗೂ ರೂಪಾ ಪತ್ರದ ಪ್ರತಿ  ಕಳುಹಿಸಿದ್ದರು. 

ಆದರೆ ಸತ್ಯನಾರಾಯಣರಾವ್ ಅವರು “ಈ ಆರೋಪಗಳೆಲ್ಲವೂ ಆಧಾರರಹಿತ, ಯಾರು ಈ ಆರೋಪ ಮಾಡಿದ್ದಾರೋ ಅವರು ಈ ಸಂಬಂಧ ಸೂಕ್ತ ಸಾಕ್ಷ್ಯಾಧಾರ ಒದಗಿಸಲಿ ಎಂದು ಹೇಳಿದ್ದರು.

ನಾಲ್ಕು ಪುಟಗಳ ವರದಿಯನ್ನು ಸಾಕ್ಷ್ಯ  ಆಧಾರದಲ್ಲಿಯೇ ವರದಿ ಸಲ್ಲಿಸಿದ್ದೇನೆ. ಕೊಟ್ಟಿರುವ  ವರದಿಯ ತನಿಖೆಯಾಗಲಿ ಎಂದು ಅವರು ಹಿರಿಯ  ಅಧಿಕಾರಿಗಳಿಗೆ ತಿರುಗೇಟು ನೀಡಿದ್ದಾರೆ.
“ ಕರೀಂಲಾಲ್ ತೆಲಗಿ, ವಿಕೆ ಶಶಿಕಲಾಗೆ ಪರಪ್ಪನ ಅಗ್ರಹಾರದಲ್ಲಿ ವಿಶೇಷ ಸೌಲಭ್ಯ ನೀಡಲಾಗಿಲ್ಲ. ಡಿಐಜಿ ರೂಪ ಆರೋಪ ಸಂಪೂರ್ಣ ನಿರಾಧಾರ . ಅವರಿಗೆ ಜೈಲಿನ ನಿಯಮಗಳ  ಬಗ್ಗೆ ಅರಿವಿಲ್ಲ. ಹಿರಿಯ  ಅಧಿಕಾರಿಗಳು ನಿರಾಧಾರ  ಆರೋಪ ಮಾಡಬಾರದು  ಕಾರಾಗೃಹದ ಅಧೀಕ್ಷಕ ಕೃಷ್ಣಕುಮಾರ್  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News