ಮತ್ತೊಮ್ಮೆ ಅಲ್ ಅಕ್ಸ ಮಸೀದಿ ಮೇಲೆ ನಿರ್ಬಂಧ ಹೇರಿದ ಇಸ್ರೇಲ್

Update: 2017-07-28 11:43 GMT

ಫೆಲೆಸ್ತೀನ್,ಜು.28 : ಇಲ್ಲಿನ ಖ್ಯಾತ ಅಲ್-ಅಕ್ಸ ಮಸೀದಿಗೆ 50 ವರ್ಷ ಕೆಳಗಿನವರು ಪ್ರವೇಶಿಸದಂತೆ ಇಸ್ರೇಲ್ ಮತ್ತೊಮ್ಮೆ  ನಿರ್ಬಂಧ ಹೇರಿದೆ.

ಕೆಲ ದಿನಗಳ ಹಿಂದೆ ಇಸ್ರೇಲ್ ಅತಿಕ್ರಮಣದ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭ ಇಸ್ರೇಲಿ ಪಡೆಗಳು ನಡೆಸಿದ ಗುಂಡಿನ  ದಾಳಿಯಿಂದ ಗಾಯಗೊಂಡು  ಆಸ್ಪತ್ರೆಗೆ ದಾಖಲಾಗಿದ್ದ  25 ವರ್ಷದ ಮೊಹಮ್ಮದ್ ಕನನ್ ವೆಸ್ಟ್ ಬ್ಯಾಂಕ್ ನಗರವಾದ ರಮಲ್ಲಾದ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ.

ಕನನ್ ತನ್ನ ತವರೂರು ಜೆರುಸಲೆಂ ಸಮೀಪದ ಹಿಝ್ಮಾದಲ್ಲಿ ಸಾವಿರಾರು ಮಂದಿಯೊಂದಿಗೆ ಸೇರಿ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಇಸ್ರೇಲಿ ಪಡೆಗಳು ಪವಿತ್ರ ಮಸೀದಿಯಲ್ಲಿ ಲೋಹಶೋಧಕ ಮುಂತಾದ ಅತಿಕ್ರಮಣಗಳನ್ನು ನಡೆಸಿರುವುದು ಫೆಲೆಸ್ತೀನಿಯರಿಂದ ತೀವ್ರ ಪ್ರತಿರೋಧಕ್ಕೆ ಕಾರಣವಾಗಿದೆ.

ಶುಕ್ರವಾರ ಬೆಳಿಗ್ಗೆ ಅಲ್  ಅಖ್ಸಾ ಮಸೀದಿಯ ಕಂಪೌಂಡ್ ಸುತಮುತ್ತ ಭಾರೀ ನಿರ್ಬಂಧ ಹೇರಲಾಗಿದೆ.

ಮಸೀದಿಯ ಹೊರಗಿನ ಭದ್ರತಾ ಏರ್ಪಾಟುಗಳಾದ ರೈಲಿಂಗ್ಸ್, ಕ್ಯಾಮರಾ ಮತ್ತು ಲೋಹಶೋಧಕಗಳನ್ನು ಸದ್ಯ ತೆಗೆಯಲಾಗಿದೆಯಾದರೂ  ಇಂದು ಕೂಡ 50ರ ಕೆಳಗಿನ ವಯಸ್ಸಿನ ಪುರುಷರನ್ನು ಮಸೀದಿಗೆ ಪ್ರವೇಶಿಸಲು ಅನುಮತಿಸಲಾಗುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News