ವಿಶ್ವದ ಮೂರನೇ ಅತೀ ಹೆಚ್ಚು ಬೀಫ್ ರಫ್ತು ಮಾಡುವ ದೇಶ ಭಾರತ

Update: 2017-07-29 10:48 GMT

ಹೊಸದಿಲ್ಲಿ,ಜು.29 : ಭಾರತ ಜಗತ್ತಿನ ಮೂರನೇ ಅತಿ ಹೆಚ್ಚು ಬೀಫ್ ರಫ್ತು ದೇಶವಾಗಿದೆ ಹಾಗೂ ಮುಂದಿನ ಒಂದು ದಶಕ ಇದೇ ಸ್ಥಾನವನ್ನು ಕಾಪಾಡಿಕೊಳ್ಳಲಿದೆ ಎಂದು ಫುಡ್ ಎಂಡ್ ಅಗ್ರಿಕಲ್ಚರಲ್ ಆರ್ಗನೈಝೇಶನ್ (ಎಫ್ ಎ ಒ) ಹಾಗೂ ಆರ್ಗನೈಝೇಶನ್ ಫಾರ್ ಇಕನಾಮಿಕ್ ಕೊ-ಆಪರೇಷನ್ ವರದಿಯೊಂದು ತಿಳಿಸಿದೆ.

ಒಇಸಿಡಿ-ಎಫ್‍ಎಒ ಅಗ್ರಿಕಲ್ಚರಲ್ ಔಟ್‍ಲುಕ್ 2017-2026 ವರದಿ ಈ ವಾರ ಬಿಡುಗಡೆಗೊಂಡಿದ್ದು  ಇದರ ಪ್ರಕಾರ ಭಾರತ 1.56 ಮಿಲಿಯನ್ ಟನ್ ಬೀಫ್ ಕಳೆದ ವರ್ಷ ರಫ್ತು ಮಾಡಿದೆ. ಜಗತ್ತಿನ ದೇಶಗಳ ಒಟ್ಟು ಬೀಫ್ ರಫ್ತಿನಲ್ಲಿ ಭಾರತದ ಪಾಲು ಶೇ 16ರಷ್ಟಿದೆ ಎಂದು ವರದಿ ತಿಳಿಸಿದೆ.

ಯಾವ ವಿಧದ ಬೀಫ್ ರಫ್ತಾಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲದೇ ಇದ್ದರೂ ಹೆಚ್ಚಿನದ್ದು ಎಮ್ಮೆಯ ಮಾಂಸವೆಂದು ತಿಳಿದು ಬಂದಿದೆ. ಒಇಸಿಡಿ ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ಭಾರತ 3,63,000 ಟನ್ ಬೀಫ್ ರಫ್ತು ಮಾಡಿದೆ.

ಜಗತ್ತಿನ ಎಲ್ಲಾ ರಾಷ್ಟ್ರಗಳು 2016ರಲ್ಲಿ ರಫ್ತು ಮಾಡಿದ ಬೀಫ್ ಪ್ರಮಾಣ 10.95 ಮಿಲಿಯನ್ ಟನ್ ಆಗಿದ್ದು ಇದು 2026ರ ಹೊತ್ತಿಗೆ 12.43 ಟನ್ ಗಳಷ್ಟಾಗಲಿದೆ. ಈ ವರದಿಯ ಪ್ರಕಾರ ಅತೀ ಹಚ್ಚು ಬೀಫ್ ರಫ್ತು ಮಾಡುವ ದೇಶ ಬ್ರೆಜಿಲ್ ಆಗಿದ್ದು ನಂತರದ ಸ್ಥಾನ ಆಸ್ಟ್ರೇಲಿಯಾಕ್ಕೆ ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News