ಮಗಳ ನಗ್ನ ವೀಡಿಯೊಗೆ ಒತ್ತಾಯಿಸಿದ್ದ ತಂದೆ ಜೈಲಿಗೆ

Update: 2017-07-31 04:14 GMT

ಜಲಂಧರ್: ತನ್ನದೇ ಮಗಳ ನಗ್ನ ವೀಡಿಯೊ ತೋರಿಸುವಂತೆ ಆಕೆಯನ್ನು ಒತ್ತಾಯಿಸಿದ ವಿಕೃತ ಕಾಮಿಯೊಬ್ಬ ಇದೀಗ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.

ಹದಿನಾರು ವಯಸ್ಸಿನ ತನ್ನ ಪುತ್ರಿಗೆ ನಗ್ನ ವೀಡಿಯೊ ಚಿತ್ರೀಕರಿಸಿ ತನಗೆ ಪ್ರದರ್ಶಿಸಬೇಕು ಎಂದು ತಂದೆ ಪದೇಪದೇ ಒತ್ತಾಯ ಮಾಡಿದ್ದ. ತಂದೆಯ ವಿಚಿತ್ರ ಖಯಾಲಿ ತೀರಿಸಲು ಯುವತಿ ನಿರಾಕರಿಸಿದಾಗ ಆಕೆಗೆ ಬೆದರಿಕೆ ಹಾಕಿದ್ದ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಯುವತಿಯ ಮಾವ ನೀಡಿದ ದೂರಿನ ಮೇರೆಗೆ ಪೋಕ್ಸೊ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News