ಎಸ್ ಬಿಐ ಉಳಿತಾಯ ಖಾತೆ ಬಡ್ಡಿ ದರ ಇಳಿಕೆ

Update: 2017-07-31 09:02 GMT

ಮುಂಬೈ, ಜು. 31: ದೇಶದ ಅತೀ ದೊಡ್ಡ ಬ್ಯಾಂಕ್  ಸ್ಟೇಟ್ ಬ್ಯಾಂಕ್  ಆಫ್ ಇಂಡಿಯಾ (ಎಸ್ ಬಿಐ)  ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ.
ಎಸ್ ಬಿಐ ಉಳಿತಾಯ ಖಾತೆ ಮೇಲಿನ ಬಡ್ಡಿದರವನ್ನು ಶೇಕಡಾ 4ರಿಂದ ಶೇಕಡಾ 3.5ಕ್ಕೆ ಇಳಿಕೆ ಮಾಡಿದ್ದು, ಬ್ಯಾಂಕ್ ನಲ್ಲಿ  1 ಕೋಟಿ ರೂಪಾಯಿಗಿಂತ ಕಡಿಮೆ ಠೇವಣಿ ಇಟ್ಟ ಗ್ರಾಹಕರು ಜು.31ರಿಂದ  ವಾರ್ಷಿಕ ಶೇಕಡಾ 3.5ರಷ್ಟು ಬಡ್ಡಿ ಪಡೆಯಲಿದ್ದಾರೆ.  ಆದರೆ 1 ಕೋಟಿ ರೂ.ಗೂ ಅಧಿಕ ಠೇವಣಿ ಇಟ್ಟಿರುವ ಉಳಿತಾಯಖಾತೆ ಗ್ರಾಹಕರ ಬಡ್ಡಿದರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಅವರು ಶೇಕಡಾ 4.0ರಷ್ಟು ಬಡ್ಡಿದರ ಪಡೆಯಲಿದ್ದಾರೆ ಎಂದು ಬ್ಯಾಂಕ್  ಮೂಲಗಳು ತಿಳಿಸಿವೆ.
ಬ್ಯಾಂಕ್ ನಲ್ಲಿರುವ  ಶೇ 90ರಷ್ಟು  ಉಳಿತಾಯ ಖಾತೆಗಳು  1 ಕೋಟಿ ರೂ.ಗಿಂತ ಕಡಿಮೆ ಠೇವಣಿ ಹೊಂದಿವೆ.  ಇದರಿಂದಾಗಿ ಬ್ಯಾಂಕ್ ನಲ್ಲಿ   ಉಳಿತಾಯ ಖಾತೆ  ಹೊಂದಿರುವವರಿಗೆ ಆಘಾತ  ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News