ಇಂದಿರಾ ಕ್ಯಾಂಟಿನ್ ಸ್ಥಾಪನೆಗೆ ವಿರೋಧ ಸಲ್ಲ: ಸಿಪಿಐ

Update: 2017-08-03 12:22 GMT

ಬೆಂಗಳೂರು, ಆ. 3: ಬಡ ಕೂಲಿ ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರಿಗೆ ಅನುಕೂಲ ಆಗುವ ಇಂದಿರಾ ಕ್ಯಾಂಟಿನ್‌ಗೆ ಮೇಲ್ವರ್ಗದ ಜನ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ವಿರೋಧ ಸರಿಯಲ್ಲ ಎಂದು ಸಿಪಿಐ ಆಕ್ಷೇಪಿಸಿದ್ದು, ತ್ವರಿತವಾಗಿ ಇಂದಿರಾ ಕ್ಯಾಂಟಿನ್ ಯೋಜನೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದೆ.

ಸಾರ್ವಜನಿಕ ಸ್ಥಳಗಳನ್ನು ಇಂದಿರಾ ಕ್ಯಾಂಟೀನ್ ಬೇಡ ಎಂಬುದು ಸಲ್ಲ. ಇಂದಿತಾ ಕ್ಯಾಂಟಿನ್ ಅನ್ನು ಸಾರ್ವಜನಿಕ ಉದ್ದೇಶಕ್ಕಾಗಿಯೇ ಸ್ಥಾಪಿಸಲಾಗುತ್ತಿದೆ. ಈಗಾಗಲೇ ನಂದಿನಿ, ಹಾಪ್‌ಕಾಮ್ಸ್, ಬೆಂಗಳೂರು ಒನ್ ಸೇರಿ ಹಲವು ಸರಕಾರಿ ಸಂಸ್ಥೆ/ಅಂಗಡಿ, ದೇವಸ್ಥಾನಗಳನ್ನು ಉದ್ಯಾನವನದ ಜಾಗಗಳಲ್ಲೆ ಸ್ಥಾಪಿಸಲಾಗಿದೆ. ಈ ಬಗ್ಗೆ ಚಕಾರ ವೆತ್ತದ ವ್ಯಕ್ತಿಗಳು ಇಂದಿರಾ ಕ್ಯಾಂಟಿನ್‌ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಹರಿಗೋವಿಂದ್ ಟೀಕಿಸಿದ್ದಾರೆ.

ಬೆಂಗಳೂರು ನಗರ ಅತಿ ದುಬಾರಿ ನಗರವಾಗಿದ್ದು, ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಗ್ರಾಮೀಣ ಪ್ರದೇಶದಿಂದ ವಲಸೆ ಕಾರ್ಮಿಕರಿಗೆ ಇಂದಿರಾ ಕ್ಯಾಂಟಿನ್ ಅನುಕೂಲವಾಗಲಿದೆ. ಜನಸಾಮಾನ್ಯರಿಗೆ, ದುಡಿಯುವ ಜನರಿಗೆ ಅಗ್ಗದ ದರದ ಕ್ಯಾಂಟಿನ್ ಅತ್ಯವಶ್ಯ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರಕಾರ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಶೀಘ್ರವಾಗಿ ಆರಂಭಿಸಿ, ಅವಶ್ಯಕತೆ ಇರುವ ಕಾಮಗಾರಿ ಕೆಲಸವನ್ನು ಮುಗಿಸಿ, ಉದ್ದೇಶಿಸಿರುವಂತೆ ಸಾಮಾನ್ಯ ಜನರಿಗೆ ಕ್ಯಾಂಟೀನ್ ಸೌಲಭ್ಯಗಳನ್ನು ಒದಗಿಸಬೇಕೆಂದು ಸಿಪಿಐ ಜಿಲ್ಲಾ ಮಂಡಳಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News