ನ್ಯಾ.ದೀಪಕ ಮಿಶ್ರಾ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆ

Update: 2017-08-08 15:46 GMT

ಹೊಸದಿಲ್ಲಿ,ಆ.8: ಈ ವರ್ಷದ ಮೇ ತಿಂಗಳಲ್ಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳ ಮರಣ ದಂಡನೆಯನ್ನು ದೃಢಪಡಿಸಿದ್ದ ಸರ್ವೋಚ್ಚ ನ್ಯಾಯಾಲಯದ ಪೀಠದ ನೇತೃತ್ವವನ್ನು ವಹಿಸಿದ್ದ ನ್ಯಾ.ದೀಪಕ ಮಿಶ್ರಾ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. 63ರ ಹರೆಯದ ಮಿಶ್ರಾ ಆ.28ರಂದು ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಸಿಂಗ್ ಅವರಿಂದ ಅಧಿಕಾರವನ್ನು ಸ್ವೀಕರಿಸಲಿದ್ದಾರೆ. ಅವರು ಮುಂದಿನ 11 ತಿಂಗಳ ಅವಧಿಗೆ ಅಧಿಕಾರದಲ್ಲಿರುತ್ತಾರೆ.

 ತನ್ನ ಸಹ ನ್ಯಾಯಾಧೀಶರಿಂದ ‘ನಾಗರಿಕರ ಪರ ನ್ಯಾಯಾಧೀಶ’ ಎಂಬ ಬಣ್ಣನೆಗೆ ಪಾತ್ರರಾಗಿರುವ ನ್ಯಾ.ಮಿಶ್ರಾ ಅವರು, ತನ್ನ ನೇಣುಶಿಕ್ಷೆಯ ವಿರುದ್ಧ ಭಯೋತ್ಪಾದಕ ಯಾಕೂಬ್ ಮೆನನ್ ಕೊನೆಯ ಕ್ಷಣದಲ್ಲಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಗಾಗಿ 2015,ಜುಲೈ 29ರಂದು ರಾತ್ರಿಯಿಡೀ ವಿಚಾರಣೆ ನಡೆಸಿ ಐತಿಹಾಸಿಕ ತೀರ್ಪು ನೀಡಿದ್ದ ಮೂವರು ನ್ಯಾಯಾಧೀಶರಲ್ಲಿ ಮಿಶ್ರಾ ಓರ್ವರಾಗಿದ್ದರು.

ನಸುಕಿನ ಐದು ಗಂಟೆಗೆ ತೀರ್ಪು ಘೋಷಿಸಿದ್ದ ನ್ಯಾ.ಮಿಶ್ರಾ, ಮರಣದಂಡನೆ ವಾರಂಟ್‌ಗೆ ತಡೆಯಾಜ್ಞೆ ನೀಡುವುದು ನ್ಯಾಯದ ಅವಹೇಳನವಾಗುತ್ತದೆ. ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದರು. ಎರಡು ಗಂಟೆಯ ಬಳಿಕ ಮೆನನ್‌ನನ್ನು ನೇಣಿಗೇರಿಸಲಾಗಿತ್ತು.                                                            

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News