15 ವರ್ಷಗಳ ಬಳಿಕ ಪೊಲೀಸ್ ಬಲೆಗೆ ಬಿದ್ದ ಅತ್ಯಾಚಾರಿ

Update: 2017-08-10 04:58 GMT

ಥಾಣೆ, ಆ.10: ಗುಜರಾತ್‌ನಲ್ಲಿ 2002ರಲ್ಲಿ ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಿ, 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವೀರೇಂದ್ರ ಅಲಿಯಾಸ್ ಉರುಮಿಯಾ ಬಹದ್ದೂರ್ ಶೋತ್‌ವಾಲಿ ಬಂಧಿತ ಆರೋಪಿ. ಈತ ಮೂಲತಃ ನೇಪಾಳದವನು.
ಪೋರಬಂದರ್ ಪೊಲೀಸರು ಆರೋಪಿಯ ವಿರುದ್ಧ ಅತ್ಯಾಚಾರ ಸೇರಿದಂತೆ ಐಪಿಸಿ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಿದ್ದರು ಎಂದು ಹಿರಿಯ ಅಧೀಕ್ಷಕ ನಿತಿನ್ ಠಾಕ್ರೆ ಹೇಳಿದ್ದಾರೆ. ಶೋತ್‌ವಾಲಿ ಮೇಲಿಂದ ಮೇಲೆ ಜಾಗವನ್ನು ಬದಲಿಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ಇಲ್ಲಿನ ಪವಾರ್‌ನಗರದ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಆರೋಪಿ ವಾಸವಿದ್ದಾನೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಬಳಿಕ ಆರೋಪಿಯನ್ನು ಗುಜರಾತ್ ಪೊಲೀಸರಿಗೆ ಹಸ್ತಾಂತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News