ಅಸಹಿಷ್ಣುತೆಯಿಂದ ಮುಸ್ಲಿಮರಲ್ಲಿ ಅಭದ್ರತೆಯ ಭಾವನೆ : ನಿರ್ಗಮನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ

Update: 2017-08-10 08:18 GMT

ಹೊಸದಿಲ್ಲಿ,ಆ.10 : ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಮತ್ತು ನೈತಿಕ ಪೊಲೀಸ್ ಗಿರಿಯ ಘಟನೆಗಳಿಂದಾಗಿ ದೇಶದ ಮುಸ್ಲಿಮರಿಗೆ ಅಸುರಕ್ಷತೆಯ ಭಾವನೆ ಕಾಡಲಾರಂಭಿಸಿದೆ ಎಂದು ನಿರ್ಗಮನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿದ್ದಾರೆ.

ಎರಡು ಅವಧಿಗಳಿಗೆ  ಉಪರಾಷ್ಟ್ರಪತಿಗಳಾದ ನಂತರ ಇಂದು ಹುದ್ದೆ ತ್ಯಜಿಸಲಿರುವ ಅನ್ಸಾರಿ, ಉಪರಾಷ್ಟ್ರಪತಿಯಾಗಿ ತಮ್ಮ ಕೊನೆಯ ಸಂದರ್ಶನದಲ್ಲಿ  ಮಾತನಾಡುತ್ತಾ, ಅಭದ್ರತೆ ಕಾಡಲಾರಂಭಿಸಿದೆ ಎಲ್ಲರನ್ನೂ ಸ್ವೀಕರಿಸುವಂತಹ ವಾತಾವರಣ ಮರೆಯಾಗುತ್ತಿದೆ ಎಂದರು.

``ಭಾರತೀಯ ಮೌಲ್ಯಗಳ ಕುಸಿತ, ಭಾರತೀಯತೆಯನ್ನೇ ಪ್ರಶ್ನಿಸುವ ಬೆಳವಣಿಗೆಗಳು ಆತಂಕಕಾರಿ'' ಎಂದು ಇನ್ನಷ್ಟೇ ಪ್ರಸಾರವಾಗಬೇಕಿರುವ ಸಂದರ್ಶನವೊಂದರಲ್ಲಿ ಅನ್ಸಾರಿ ಹೇಳಿದ್ದಾರೆ. ಖ್ಯಾತ ಪತ್ರಕರ್ತ ಕರಣ್ ಥಾಪರ್ ಅವರು ರಾಜ್ಯಸಭಾ ಟಿವಿಗಾಗಿ ಈ ಸಂದರ್ಶನ ನಡೆಸಿದ್ದರು.

ಪ್ರತಿ ಬಾರಿ ನಮ್ಮ ರಾಷ್ಟ್ರೀಯತೆಯನ್ನು ಒತ್ತಿ ಹೇಳುವುದು  ಅನಗತ್ಯ ಎಂದು ಹೇಳಿದ ಅವರು ``ನಾನೊಬ್ಬ ಭಾರತೀಯ ಅಷ್ಟೇ,'' ಎಂದರು.

``ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಸಂಸ್ಕೃತಿಯನ್ನು ಒಬ್ಬ ಉಪರಾಷ್ಟ್ರಪತಿಯಾಗಿ ತಾನು ಪ್ರಧಾನಿ ನರೇಂದ್ರ ಮೋದಿ ಮುಂದೆ ಎತ್ತಿದ್ದೇನೆ, ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News