ಮುಸ್ಲಿಂ ಮಹಿಳೆಯ ಹಿಜಾಬ್ ಬಲವಂತವಾಗಿ ತೆಗೆಸಿದ ಪ್ರಕರಣ: ಸಂತ್ರಸ್ತೆಗೆ 85,000 ಡಾಲರ್ ಪರಿಹಾರ

Update: 2017-08-12 10:53 GMT

ಕ್ಯಾಲಿಫೋರ್ನಿಯಾ, ಆ.12: ಇಲ್ಲಿನ ಲಾಂಗ್ ಬೀಚ್ ನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಮುಸ್ಲಿಂ ಮಹಿಳೆಯೊಬ್ಬಳ ಹಿಜಾಬ್ ಅನ್ನು ಅಧಿಕಾರಿಯೊಬ್ಬರು ಬಲವಂತವಾಗಿ ತೆಗೆದ ಪ್ರಕರಣದಲ್ಲಿ ಮಹಿಳೆಗೆ 85,000 ಡಾಲರ್ ಪರಿಹಾರ ದೊರೆತಿದೆ.

2015ರಲ್ಲಿ ನಡೆದ ಘಟನೆಯಲ್ಲಿ ಕಸ್ಟಿ ಪೊವೆಲ್ ಎಂಬ ಮಹಿಳೆಯ ಗಂಡ ಲೋರೈಡರ್ ವಾಹನವೊಂದನ್ನು ಚಲಾಯಿಸುತಿದ್ದಾನೆಂಬ ನೆಪವೊಡ್ಡಿ ವಾಹನವನ್ನು ಪೊಲೀಸ್ ಅಧಿಕಾರಿಗಳು ತಡೆದಿದ್ದಾಗ ಆಕೆಯ ಹಿಜಾಬ್ ಎಳೆಯಲಾಗಿತ್ತೆನ್ನಲಾಗಿದೆ. ಈ ಸಂಬಂಧ ಆಕೆ 2016ರಲ್ಲಿ ಪೊಲೀಸ್ ಇಲಾಖೆಯ ವಿರುದ್ಧ ದೂರು ದಾಖಲಿಸಿ ತನ್ನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದಳು.

ಸ್ಥಳೀಯ ನಗರಾಡಳಿತ ಆಕೆಗೆ ಪರಿಹಾರ ಮೊತ್ತವನ್ನು ನೀಡಬೇಕಿದೆ. ಆಕೆ ದಾಖಲಿಸಿದ ದೂರಿನಲ್ಲಿ ಆಕೆಯ ಹಿಜಾಬ್ ಎಳೆದಾಗ ಆಕೆಗಾದ ಅವಮಾನದಿಂದ ಆಕೆ ಅಳುತ್ತಲೇ ಇದ್ದಳೆಂದು ಹೇಳಲಾಗಿದೆ. ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಪತ್ನಿಯನ್ನು ವಿಚಾರಿಸಬೇಕೆಂದು ಆಕೆಯ ಗಂಡ ಕೇಳಿಕೊಂಡರೂ ಪುರುಷ ಅಧಿಕಾರಿಯೊಬ್ಬ ಆಕೆಯ ಹಿಜಬ್ ಅನ್ನು ಬಲವಂತವಾಗಿ ತೆಗೆಸಿದನಲ್ಲದೆ ಆಕೆ ರಾತ್ರಿಯಿಡೀ ಜೈಲಿನಲ್ಲಿ ಹಿಜಬ್ ಇಲ್ಲದೆಯೇ ಇದ್ದಳು ಎನ್ನಲಾಗಿದೆ.

 ಈ ಘಟನೆಯಿಂದ ಪೋವೆಲ್ ಸಾಕಷ್ಟು ಜರ್ಝರಿತವಾಗಿದ್ದಳು ಎಂದೂ ಹೇಳಲಾಗಿತ್ತು. ಇಂತಹ ಮಾನಸಿಕ ವೇದನೆ ಅನುಭವಿಸಿದ ಕೊನೆಯ ಮುಸ್ಲಿಂ ಮಹಿಳೆ ತಾನಾಗಬೇಕೆಂದು ತಾನು ಬಯಸುತ್ತೇನೆ ಎಂದೂ ಆಕೆ ತಿಳಿಸಿದ್ದಳೆಂದು ಒಮ್ಮೆ ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಶನ್ಸ್ ಮುಂದೆ ಆಕೆ ಹೇಳಿಕೊಂಡಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News