ರಾಷ್ಟ್ರೀಯ ಚಾಂಪಿಯನ್‌ಶಿಪ್ ತರಬೇತುದಾರರಾಗಿ ರಘು ಆಯ್ಕೆ

Update: 2017-08-15 12:33 GMT

ಬೆಂಗಳೂರು, ಆ.15: ಖ್ಯಾತ ಅಥ್ಲೀಟ್ ಪವರ್ ಲಿಫ್ಟರ್ ಹಾಗೂ ರಾಷ್ಟ್ರಮಟ್ಟದ ಚಾಂಪಿಯನ್ ರಘು ಹೊಂಡದಕೇರಿ ಅವರನ್ನು ಜೆರೈ ಕ್ಲಾಸಿಕ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ರಾಜ್ಯದ ಅಥ್ಲೀಟ್‌ಗಳಿಗೆ ತರಬೇತಿ ನೀಡಲು ಆಯ್ಕೆಯಾಗಿದ್ದಾರೆ.

ಕರ್ನಾಟಕದ ಅಥ್ಲೀಟ್‌ಗಳಲ್ಲಿ ಜೆರೈ ಕ್ಲಾಸಿಕ್ ಚಾಂಪಿಯನ್‌ಶಿಪ್ ಉತ್ತೇಜಿಸಲು ಜೆರೈ ಫಿಟ್ನೆಸ್‌ನ ರಾಯಭಾರಿಯಾಗಿ ರಘು ಅವರನ್ನು ನೇಮಕ ಮಾಡಲಾಗಿದೆ. ಜೆರೈ ಫಿಟ್ನೆಸ್ ಹಾಗೂ ರಘು ರಾಜ್ಯದ ಜಿಮ್ನಾಷಿಯಂ ಪ್ರದೇದಲ್ಲಿ ರೋಡ್ ಶೋ ನಡೆಸಲಿದ್ದಾರೆ.

ಕರ್ನಾಟಕದ ಅಥ್ಲೀಟ್‌ಗಳು ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ಮುಂದಿದ್ದಾರೆ. ಈ ಸಂಪ್ರದಾಯ ಮುಂದುವರೆಯುವುದನ್ನು ನಾವು ಬಯಸುತ್ತೇವೆ. ರಾಜ್ಯಕ್ಕೆ ಹಾಗೂ ತಮಗೆ ತಾವೇ ಹೆಮ್ಮೆ ಪಡುವ ಸಾಧನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಜೆರೈ ಫಿಟ್ನೆಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ರೈ ತಿಳಿಸಿದ್ದಾರೆ.

ನನ್ನನ್ನು ಸಂಸ್ಥೆಯ ರಾಯಭಾರಿಯನ್ನಾಗಿ ನೇಮಿಸುವ ಮೂಲಕ ಜೆರೈ ಕ್ಲಾಸಿಕ್ ರಾಜ್ಯದಲ್ಲಿ ಅಥ್ಲೆಟಿಕ್ ಕ್ರೀಡೆ ಕುರಿತು ತನ್ನ ಬದ್ಧತೆ ಪ್ರತಿಪಾದಿಸಿದೆ. ಮುಂದಿನ ಕೆಲ ತಿಂಗಳಲ್ಲಿ ನಾನು ಸಂಸ್ಥೆಯ ರೋಡ್ ಶೋ ನೇತೃತ್ವ ವಹಿಸುತ್ತೇನೆ. ಮುಂಬೈಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವವರ ರೂವಾರಿ ಆಗಲಿದ್ದೇನೆ. ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆ ತೋರಲು ಹಾಗೂ 50 ಲಕ್ಷ ರೂ ಮೌಲ್ಯದ ಬಹುಮಾನ ಗೆಲ್ಲಲು ಇದು ನೆರವಾಗಲಿದೆ ಎಂದು ರಘು ಹೊಂಡದಕೇರಿ ಹೇಳಿದ್ದಾರೆ.

2017ರ ಚಾಂಪಿಯನ್‌ಶಿಪ್‌ನಲ್ಲಿ 1300ಕ್ಕೂ ಹೆಚ್ಚು ಪುರುಷರು ಹಾಗೂ 200 ಮಹಿಳಾ ಅಥ್ಲೀಟ್ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News