ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಮಾಡಿದ ರಾಹುಲ್ ಗಾಂಧಿ

Update: 2017-08-16 06:35 GMT

ಬೆಂಗಳೂರು, ಆ.16: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಜಯನಗರದ ಕನಕಪಾಳ್ಯದಲ್ಲಿ ಇಂದಿರಾ ಕ್ಯಾಂಟೀನ್‌ನ್ನು ಲೋಕಾರ್ಪಣೆ ಮಾಡಿದರು.

ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಮೊದಲ ಹಂತದಲ್ಲಿ 101 ಸ್ಥಳಗಳಲ್ಲಿ ಕಾರ್ಯಾಚರಿಸಲಿದೆ. ಅಕ್ಟೋಬರ್‌ಗೆ ಎಲ್ಲ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ. ಎಲ್ಲ 27 ವಿಧಾನಸಭಾ ಕ್ಷೇತ್ರದಲ್ಲಿ ತಲಾ ಅಡುಗೆ ಮನೆ ನಿರ್ಮಿಸಲಾಗಿದೆ.

ಬಡವರ ಹಸಿವು ನೀಗಿಸಲು ಕ್ಯಾಂಟೀನ್‌ನಲ್ಲಿ 5 ರೂ.ಗೆ ತಿಂಡಿ, 10 ರೂ.ಗೆ ಊಟ ಲಭಿಸಲಿದೆ.

  ಕ್ಯಾಂಟೀನ್ ಉದ್ಘಾಟನೆಯ ವೇಳೆ ಸಚಿವರು, ಶಾಸಕರು ಸೇರಿ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು. ರಾಹುಲ್ ಕ್ಯಾಂಟೀನ್‌ನ್ನು ವೀಕ್ಷಿಸಿ ಮಾಹಿತಿ ಪಡೆದರು.

ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಬೆಳಗ್ಗೆ ಕೆಐಎಲ್‌ಐಗೆ ಆಗಮಿಸಿದ್ದ ರಾಹುಲ್ ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ರಾಜ್ಯ ಉಸ್ತುವಾರಿ ಕೆ.ಎಲ್. ವೇಣುಗೋಪಾಲ್ ವಿಮಾನನಿಲ್ದಾಣದಲ್ಲಿ ಬರಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News