ಸಂಸದ ಡಿ.ಕೆ. ಸುರೇಶ್ ಗೆ ರವಿ ಪೂಜಾರಿಯಿಂದ ಬೆದರಿಕೆ?

Update: 2017-08-16 07:59 GMT

ಬೆಂಗಳೂರು, ಆ.16: ಸಂಸದ ಡಿ.ಕೆ. ಸುರೇಶ್ ಅವರಿಗೆ ಕರೆ ಮಾಡಿ  ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಒಂದು ವಾರದ ಬಳಿಕ ಅಂದರೆ ಜುಲೈ 5ರಂದು ಈ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.

ಲ್ಯಾಂಡ್ ಲೈನ್ ಗೆ ಕರೆ ಮಾಡಿದ ವ್ಯಕ್ತಿ ಇಂಗ್ಲೀಷ್ ಹಾಗೂ ಹಿಂದಿ ಮಿಶ್ರಿತ ಭಾಷೆಯಲ್ಲಿ ಮಾತನಾಡಿದ್ದು, ಡಿ.ಕೆ. ಸುರೇಶ್ ಜೊತೆ ಮಾತನಾಡಬೇಕು ಎಂದಿದ್ದ. ಫೋನ್ ರಿಸೀವ್ ಮಾಡಿದ್ದ ವ್ಯಕ್ತಿ ಡಿ.ಕೆ. ಸುರೇಶ್ ಡ್ರೈವರ್ ದೇವ್ ಮೊಬೈಲ್ ನಂಬರ್ ಕೊಟ್ಟಿದ್ದರು. ಬಳಿಕ ದೇವ್ ಮೊಬೈಲ್ ನಂಬರ್‍ಗೆ ಫೋನ್ ಮಾಡಿದ ರವಿ ಪೂಜಾರಿ, ಸುರೇಶ್ ಜೊತೆ ಮಾತನಾಡ್ಬೇಕು ಎಂದಿದ್ದ.

ಇಷ್ಟೇ ಅಲ್ಲದೆ, "ನಿಮ್ಮ ಬಾಸ್ ಬಳಿ ಬೇಕಾದಷ್ಟು ಬೇನಾಮಿ ಆಸ್ತಿ ಇದೆ ಎನ್ನುವುದು ನನಗೆ ಗೊತ್ತಿದೆ. ಐಟಿ ದಾಳಿ ಮುಗಿದ ಮೇಲೆ ನನಗೆ ಹಣ ಕೊಡಲು ಹೇಳು. ಇಲ್ಲದಿದ್ದಲ್ಲಿ ಪರಿಣಾಮ ನೆಟ್ಟಗಿರದು" ಎಂದಿದ್ದಾನೆ ಎನ್ನಲಾಗಿದೆ.

ಈ ವಿಚಾರ ತಿಳಿದು ಡಿ.ಕೆ. ಸುರೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ರವಿ ಪೂಜಾರಿ ಹೆಸರಿನಲ್ಲಿ ಹಣಕ್ಕಾಗಿ ಬೆದರಿಕೆ ಹಾಕಲಾಗಿದೆ ಎಂದು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರಿನಲ್ಲಿ 14 ಡಿಜಿಟ್ ನಂಬರ್ unknown ಹೆಸರಲ್ಲಿ ಕರೆಬಂದಿತ್ತು ಎಂದು ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News