ಮಾಜಿ ಐಎಎಸ್ ಅಧಿಕಾರಿ ಸುಬ್ಬಾರಾವ್ ಉಪರಾಷ್ಟ್ರಪತಿ ಕಾರ್ಯದರ್ಶಿಯಾಗಿ ನೇಮಕ

Update: 2017-08-16 12:43 GMT

ಹೊಸದಿಲ್ಲಿ, ಆ.16: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಕಾರ್ಯದರ್ಶಿಯಾಗಿ ಮಾಜಿ ಐಎಎಸ್ ಅಧಿಕಾರಿ ಐ.ವಿ. ಸುಬ್ಬಾರಾವ್ ಅವರನ್ನು ನೇಮಿಸಲಾಗಿದೆ.

ಎರಡು ವರ್ಷದ ಗುತ್ತಿಗೆ ಆಧಾರದ ಈ ನೇಮಕಾತಿಗೆ ಸಚಿವ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ. ಆಂಧ್ರಪ್ರದೇಶದವರಾದ ಸುಬ್ಬಾರಾವ್ 1979ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು 2015ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News