ಕೇರಳದಲ್ಲಿ ಕಾಂಗ್ರೆಸ್,ಸಿಪಿಎಂ ವಿಲೀನವಾಗಬೇಕು: ಬಿಜೆಪಿ

Update: 2017-08-19 07:07 GMT

ತಿರುವನಂತಪುರಂ,ಆ.19: ಕಾಂಗ್ರೆಸ್ ಮತ್ತು ಸಿಪಿಎಂ ಪಾರ್ಟಿಗಳು ವಿಲೀನಗೊಳ್ಳಬೇಕೆಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಸದಸ್ಯ ಪಿ.ಕೆ. ಕೃಷ್ಣದಾಸ್ ಆಗ್ರಹಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಎರಡು ಪಾರ್ಟಿಗಳು ಒಂದಾಗಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಅದು ಮುಂದುವರಿಯಲಿ. ಅಧಿಕಾರ ಹಂಚಿಕೊಳ್ಳಲಿಕ್ಕಾಗಿ ಮಾತ್ರ ಕೇರಳದಲ್ಲಿ ಎರಡೂ ಪಕ್ಷಗಳು ಬೇರೆಬೇರೆಯಾಗಿ ಅಸ್ತಿತ್ವದಲ್ಲಿವೆ. ಆಶಯದಲ್ಲಿ ಇವರೊಳಗೆ ಯಾವ ವ್ಯತ್ಯಾಸವಿದೆಯೆಂದು ಇವರೇ ತಿಳಿಸಬೇಕಿದೆ. ಯಾರೇ ಆಡಳಿತದಲ್ಲಿದ್ದರೂ ಎರಡು ಪಾರ್ಟಿಗಳ ನಾಯಕರ ಬಯಕೆ ಈಡೇರುತ್ತದೆ ಎಂದಿದ್ದಾರೆ.

 ಸೀತಾರಾಮ್ ಯೆಚೂರಿ ಮತ್ತು ರಾಹುಲ್ ಗಾಂಧಿ ಬಹುತೇಕ ಸಹೋದರರಂತೆ ದಿಲ್ಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮಾದರಿಯನ್ನು ಕೇರಳದಲ್ಲಿ ಕೊಡಿಯೇರಿ ಬಾಲಕೃಷ್ಣನ್ ಮತ್ತು ಎಂ.ಎಂ. ಹಸನ್ ಕೇರಳದಲ್ಲಿಯೂ ಮುಂದುವರಿಸಲಿ. ರಾಷ್ಟ್ರಮಟ್ಟದಲ್ಲಿ ಸಿಪಿಎಂ , ಕಾಂಗ್ರೆಸ್‍ನ ಬಿ.ಟೀಮ್ ಆಗಿದೆ ಎಂದು ಕೃಷ್ಣದಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News