23 ವರ್ಷಗಳಲ್ಲಿ 21 ಬಾರಿ ಜೈಲು ಸೇರಿದವ ಇದೀಗ ಪ್ರಸಿದ್ಧ ಕಲಾವಿದ..!

Update: 2017-08-20 09:05 GMT

ಹೊಸದಿಲ್ಲಿ, ಆ.20: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ತಿಹಾರ್ ಜೈಲಿನಲ್ಲಿ ಕೈದಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅಂದಿನ ಕಾರ್ಯಕ್ರಮದಲ್ಲಿ ಗಮನಸೆಳೆದದ್ದು ಓರ್ವ ಹಳೆಯ ಕೈದಿ. ಈತ 23 ವರ್ಷಗಳಲ್ಲಿ 21 ಬಾರಿ ಜೈಲಿಗೆ ಹೋಗಿ ಬಂದಿದ್ದ. ಆದರೆ ಇದೀಗ ಈ ಕೈದಿಯೇ ಇತರರಿಗೆ ಮಾದರಿಯಾಗಿದ್ದಾನೆ.

ಅಕ್ರಮ್ 2013ರವರೆಗ 23 ವರ್ಷಗಳಲ್ಲಿ ಬರೋಬ್ಬರಿ 21 ಬಾರಿ ಜೈಲು ಸೇರಿದ್ದ. ಈತನ ಮೇಲೆ ವಿವಿಧ ಸಣ್ಣ ಸಣ್ಣ ಪ್ರಕರಣಗಳಿತ್ತು. ಆದರೆ ನಾಟಕ ತರಬೇತಿಗೆ ಸೇರಿದ ನಂತರ ಅಕ್ರಮ್ ನ ಜೀವನ ಬದಲಾಯಿತು. ಕಳೆದ ನಾಲ್ಕು ವರ್ಷಗಳಿಂದ ಅಕ್ರಮ್ ಕಲಾವಿದನಾಗಿ ಜೈಲಿಗೆ ಭೇಟಿ ನೀಡುತ್ತಿದ್ದಾನೆಯೇ ಹೊರತು ಕೈದಿಯಾಗಿ ಅಲ್ಲ.

ಅಕ್ರಮ್ ಇದೀಗ ನಾಟಕ ತಂಡವೊಂದನ್ನು ಮುನ್ನಡೆಸುತ್ತಿದ್ದು, ಯುವಕರಿಗೆ ತರಬೇತಿ ನೀಡುತ್ತಾ ತನಗೆ ಬೇಕಾದಷ್ಟು ದುಡಿಯುತ್ತಿದ್ದಾನೆ. ಅಕ್ರಮ್ ನ ಬದುಕಿನ ಈ ಬದಲಾವಣೆಗೆ ಕಾಲಾ ಅಭಿಯಾನ್ ಎಂಬ ಕಾರ್ಯಕ್ರಮ ಕಾರಣವಂತೆ . ಈ ಅಭಿಯಾನದಿಂದ ಅಕ್ರಮ್ ನಂತೆ ಹಲವು ಕೈದಿಗಳ ಬದಲಾಗಿದ್ದಾರೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News