ಅಲ್ಪಸಂಖ್ಯಾತರ ವಿಷಯದಲ್ಲಿ ಪೊಲೀಸರಿಂದ ನಿರ್ಲಕ್ಷ್ಯವಾದರೆ ಸರಕಾರ ಮಧ್ಯಪ್ರವೇಶಿಸಲಿದೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

Update: 2017-08-22 10:01 GMT

ತಿರುವನಂತಪುರಂ,ಆ.22: ಅಲ್ಪಸಂಖ್ಯಾತ ವಿಭಾಗಗಳಿಗೆ ಸಂಬಂಧಪಟ್ಟ ವಿಷಯದಲ್ಲಿ ಪೊಲೀಸರಿಂದ ನಿರ್ಲಕ್ಷ್ಯ ಸಂಭವಿಸಿದರೆ ಸರಕಾರ ಮಧ್ಯಪ್ರವೇಶಿಸಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭರವಸೆ ನೀಡಿದ್ದಾರೆ. ಜಮಾಅತೆ ಇಸ್ಲಾಮೀ ಕೇರಳ ಅಮೀರ್ ಎಂ.ಐ. ಅಬ್ದುಲ್ ಅಝೀಝ್ ಮುಖ್ಯಮಂತ್ರಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಪರವೂರಿನಲ್ಲಿ ವಿಸ್ಡಂ ಗ್ಲೋಬಲ್ ಇಸ್ಲಾಮಿಕ್ ಮಿಷನ್ ಕಾರ್ಯಕರ್ತರ ಬಂಧನದ ವಿಷಯದಲ್ಲಿ ಪೊಲೀಸರು ಪಕ್ಷಪಾತದಿಂದ ವರ್ತಿಸಿರುವುದನ್ನು ಜಮಾಅತ್ ಮುಖ್ಯಸ್ಥ ಎಂ.ಐ.   ಅಬ್ದುಲ್ ಅಝೀಝ್ ಮುಖ್ಯಮಂತ್ರಿಯವರ  ಗಮನಕ್ಕೆ ತಂದಿದ್ದಾರೆ.

ಹಾದಿಯಾ ಪ್ರಕರಣವನ್ನು ಎನ್‍ಐಎಗೆ ವಹಿಸಿಕೊಡಬೇಕೆನ್ನುವುದು ಸರಕಾರದ ನಿಲುವಲ್ಲ ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಸಂಘಪರಿವಾರ, ಫ್ಯಾಶಿಸ್ಟ್ ಶಕ್ತಿಗಳ ಬೆದರಿಕೆಯನ್ನು  ಎದುರಿಸಲು ಸರಕಾರ ಪ್ರತಿಜ್ಞಾಬದ್ಧವಾಗಿದೆ. ಜನರ ನಡುವೆ ಆಸ್ವಾಸ್ಥ್ಯ ಸೃಷ್ಟಿಸುವ ಪ್ರಯತ್ನಗಳಿಗೆ ಅವಕಾಶ ನೀಡುವುದಿಲ್ಲ. ಮೆಡಿಕಲ್ ಪ್ರವೇಶಕ್ಕೆ ಮುಸ್ಲಿಂಸಂಘಟನೆಯ ಸರ್ಟಿಫಿಕೆಟಿಗೆ ಸಂಬಂಧಿಸಿದ ವಿಷಯದಲ್ಲಿ ಸರಕಾರ ಕ್ರಮಕೈಗೊಂಡಿದೆ. ಕೊಲ್ಲಂನಲ್ಲಿಒಂದುಕಾಲೇಜಿನ ವಿಷಯದಲ್ಲಿ ಕೋರ್ಟಿನಿಂದ ಅನುಕೂಲಕರ ತೀರ್ಪು ಬಂದಿತ್ತು.ಇದರಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಮುಖ್ಯಮಂತ್ರಿಯನ್ನು ಅವರ  ಕಚೇರಿಯಲ್ಲಿ ಜಮಾಅತೆ ಇಸ್ಲಾಮಿ ಕೇರಳ ಅಮೀರ್ ಭೇಟಿಯಾಗಿದ್ದಾರೆ. ಅವರ  ಜೊತೆಗೆ ಜಮಾಅತೆ ಇಸ್ಲಾಮಿ ವಲಯ ಕಾರ್ಯದರ್ಶಿ ಎಂ. ಮೆಹಬೂಬ್ ಕೂಡಾ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News