ಮುಂದಿನ ವಿಚಾರಣೆ ತನಕ ಯಡಿಯೂರಪ್ಪ ಬಂಧನವಿಲ್ಲ: ಹೈಕೋರ್ಟಿಗೆ ಎಸಿಬಿ ಭರವಸೆ

Update: 2017-08-23 08:16 GMT

  ಬೆಂಗಳೂರು, ಆ.23: ಮುಂದಿನ ವಿಚಾರಣೆಯ ತನಕ ಬಿಎಸ್ ಯಡಿಯೂರಪ್ಪರನ್ನು ಬಂಧಿಸುವುದಿಲ್ಲ. ಅವರಿಗೆ ಜಾರಿ ಮಾಡಿರುವ ನೊಟೀಸ್‌ನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಹೈಕೋರ್ಟ್‌ಗೆ ಎಸಿಬಿ ಪರ ವಕೀಲರು ಭರವಸೆ ನೀಡಿದ್ದಾರೆ.

 ಎಸಿಬಿ ಪರ ವಕೀಲರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಾತ್ಕಾಲಿಕ ನಿಟ್ಟುಸಿರುಬಿಟ್ಟಿದ್ದಾರೆ.

 ಶಿವರಾಮ ಕಾರಂತ ಬಡಾವಣೆಯ ಜಮೀನು ಅಕ್ರಮ ನೋಟಿಫೈಗೆ ಸಂಬಂಧಿಸಿ ತಮ್ಮ ವಿರುದ್ಧ ಸಲ್ಲಿಕೆಯಾಗಿರುವ ಎಫ್‌ಐಆರ್ ರದ್ದು ಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ)ನೋಟಿಸ್ ಜಾರಿ ಮಾಡಲು ಮಂಗಳವಾರ ಆದೇಶಿಸಿತ್ತು.

ಎಸಿಬಿ ಪರ ವಿಶೇಷ ವಕೀಲರಾದ ಪ್ರೊ.ರವಿವರ್ಮ ಕುಮಾರ್ ಹಾಗೂ ಯಡಿಯೂರಪ್ಪ ಪರ ವಕೀಲ ಸಿ.ವಿ. ನಾಗೇಶ್ ಅವರ ವಾದ-ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಆ.28ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News