ಇಂದು ಸಂಜೆ 4 ಗಂಟೆಗೆ ಗುರ್ಮಿತ್ ಸಿಂಗ್ ಗೆ ಶಿಕ್ಷೆ ಪ್ರಕಟ

Update: 2017-08-28 08:47 GMT

ರೋಹ್ಟಕ್, ಆ.28: ಅತ್ಯಾಚಾರ ಪ್ರಕರಣದಲ್ಲಿ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿತ್ ಸಿಂಗ್ ಗೆ ಸೋಮವಾರ ಸಂಜೆ 4 ಗಂಟೆಗೆ  ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಲಿದೆ.

ರೋಹ್ಟಕ್ ನ ಸುನಾರಿಯಾದಲ್ಲಿರುವ ಜೈಲಿನ ಆವರಣದಲ್ಲಿ ವಿಶೇಷ ನ್ಯಾಯಾಲಯದ ವ್ಯವಸ್ಥೆ ಮಾಡಲಾಗಿದೆ. ಜೈಲಿನ ಪಕ್ಕದ ಗೃಂಥಾಲಯವನ್ನು ತಾತ್ಕಾಲಿಕವಾಗಿ ಸಿಬಿಐನ ವಿಶೇಷ ನ್ಯಾಯಾಲಯವನ್ನಾಗಿ ಮಾಡಲಾಗಿದೆ. 

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ  ನ್ಯಾ. ಜಗದೀಪ್ ಸಿಂಗ್ ಅವರು ಪಂಚಕುಲದಿಂದ ಹೆಲಿಕಾಪ್ಟರ್ ಮೂಲಕ ರೋಹ್ಟಕ್ ಗೆ  ಬಂದು ತಲುಪಿರುವ  ನ್ಯಾಯಮೂರ್ತಿ ಜಗದೀಪ್ ಸಿಂಗ್  ಗುರ್ಮಿತ್ ಸಿಂಗ್ ಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಿರುವರು. ಸಿಬಿಐ ಪರ ವಕೀಲರು ಮತ್ತು ಗುರ್ಮಿತ್ ಪರ ವಾದ ಮಂಡಿಸಲಿರುವ ವಕೀಲರು ನ್ಯಾಯಾಲಯಕ್ಕೆ ಆಗಮಿಸಿದ್ದಾರೆ.

ಮಧ್ಯಾಹ್ನ 2:30ಕ್ಕೆ ನ್ಯಾಯಾಲಯದ ಕಲಾಪ  ಆರಂಭವಾಗಲಿದೆ. ಎರಡೂ ಕಡೆಯ ವಕೀಲರ ವಾದ ಆಲಿಸಿದ ಬಳಿಕ ನ್ಯಾಯಾಧೀಶರು ಸಂಜೆ 4 ಗಂಟೆಗೆ ಗುರ್ಮಿತ್ ಸಿಂಗ್ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದಾರೆ.  

ಅತ್ಯಾಚಾರ ಪ್ರಕರಣದಲ್ಲಿ. ಗುರ್ಮಿತ್ ಸಿಂಗ್ ಕಳೆದ ಶುಕ್ರವಾರ ಜೈಲು ಸೇರಿದ್ದನು. ಜೈಲು ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಪಂಜಾಬ್, ಹರಿಯಾಣ, ದಿಲ್ಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News