ಉತ್ತರ ಪ್ರದೇಶ: ಮೊದಲ ದಿನವೇ ಕೈಕೊಟ್ಟ ಮೆಟ್ರೋ ಸೇವೆ

Update: 2017-09-06 07:40 GMT

ಉತ್ತರ ಪ್ರದೇಶ, ಸೆ.6: ಸಾರ್ವಜನಿಕರ ಸೇವೆಗಾಗಿ ಆರಂಭಗೊಂಡ ಲಕ್ನೋ ಮೆಟ್ರೋ ಮೊದಲ ದಿನವೇ ತಾಂತ್ರಿಕ ಸಮಸ್ಯೆಗೀಡಾದ ಘಟನೆ ನಡೆದಿದೆ.

ನಿನ್ನೆಯಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಈ ಮೆಟ್ರೋ ಸೇವೆಗೆ ಹಸಿರು ನಿಶಾನೆ ತೋರಿಸಿದ್ದು, ಸೇವೆಯ ಮೊದಲ ದಿನವಾದ ಇಂದು ತಾಂತ್ರಿಕ ಸಮಸ್ಯೆಯಿಂದಾಗಿ ಅಲಾಮ್ ಭಾಗ್ ಸ್ಟೇಶನ್ ನಲ್ಲಿ ಮೆಟ್ರೋ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಉಸಿರುಗಟ್ಟುವಿಕೆ, ತೀವ್ರ ತಾಪಮಾನ ಹಾಗೂ ಏರ್ ಕಂಡಿಶನಿಂಗ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಪ್ರಯಾಣಿಕರಿಂದ ದೂರುಗಳು ಬಂದ ನಂತರ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಿ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ.

"ಮೊದಲ ಪ್ರಯಾಣವೇ ಭಯಾನಕವಾಗಿತ್ತು. ಭಯದಿಂದ ನನ್ನ ರಕ್ತದೊತ್ತಡ ಹೆಚ್ಚಾಗಿತ್ತು" ಎಂದು ಪ್ರಯಾಣಿಕ ಮೋಹನ್ ಪಾಂಡೆ ಎನ್ನುವವರು ಹೇಳಿದ್ದಾರೆ. "ನನಗೆ ಪ್ರಜ್ಞೆ ತಪ್ಪುತ್ತಿದೆ ಎಂದು ಭಾಸವಾದೊಡನೆ ನಾನು ಸಹಾಯ ಯಾಚಿಸಿದೆ. ಅವರು ಇದನ್ನು ಅಭಿವೃದ್ಧಿಪಡಿಸಬೇಕು. ನಾವು ಇಷ್ಟು ದಿನ ಕಾದಿದ್ದ ಮೆಟ್ರೋ ಸೇವೆ ಇದೇನಾ?" ಎಂದು ಪ್ರಯಾಣಿಕ ಮಾಣಿಕ್ ಲಾಲ್ ಎಂಬವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News