‘ವಾರ್ತಾಭಾರತಿ’ ವರದಿಗಾರನ ಬಂಧನ: ರಾಜ್ಯಾದ್ಯಂತ ವಿವಿಧ ಸಂಘಟನೆಗಳಿಂದ ಖಂಡನೆ

Update: 2017-09-08 19:00 GMT

► ವರದಿಗಾರನ ಬಂಧನ ಅಕ್ಷಮ್ಯ

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೊಲೀಸರಿರಲಿ, ನಾಗರಿಕರೇ ಇರಲಿ ಕಾನೂನು ಎಲ್ಲರಿಗೂ ಒಂದೇ. ಯಾವುದೇ ಆಪಾದನೆಗಳಿದ್ದರೂ ಅದರ ಬಗ್ಗೆ ಕೂಲಂಕಷ ಪರಿಶೀಲನೆ ಇಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸುವುದು ಅಕ್ಷಮ್ಯ’

-ಲಕ್ಷ್ಮಿನಾರಾಯಣ ನಾಗವಾರ, ರಾಜ್ಯ ಪ್ರಧಾನ ಸಂಚಾಲಕ ದಸಂಸ

 ► ಅಭಿವ್ಯಕ್ತಿ ಸ್ವಾತಂತ್ರಹರಣ

‘ಪತ್ರಿಕೆಯೊಂದರಲ್ಲಿ ಪ್ರಕಟವಾಗುವ ಪ್ರತಿ ಸುದ್ದಿ, ಪ್ರತಿ ಅಕ್ಷರಕ್ಕೂ ಆ ಪತ್ರಿಕೆಯೇ ಉತ್ತರದಾಯಿ, ಸಂಪಾದಕರೇ ಹೊಣೆಗಾರರು. ಯಾವುದೇ ಸುದ್ದಿಯ ಸತ್ಯಾಸತ್ಯತೆಯನ್ನು ವಿವಿಧ ಮೂಲಗಳಿಂದ ಪರಾಮರ್ಶಿಸಿ, ಪ್ರಕಟಿಸಲಾಗುತ್ತದೆ. ಆರೋಪಿಸಿದವರ ಪ್ರತಿಕ್ರಿಯೆ ಜೊತೆ ಆರೋಪಕ್ಕೊಳಗಾದವರ ಸ್ಪಷ್ಟನೆಗೂ ಅವಕಾಶ ನೀಡಲಾಗುತ್ತದೆ.

‘ವಾರ್ತಾಭಾರತಿ’ ಇದೇ ಧಾಟಿಯ ಏಕಮುಖವಲ್ಲದ ವರದಿಯನ್ನೆ ಪ್ರಕಟಿಸಿದೆ. ಇದರ ಬಗ್ಗೆ ಪೊಲೀಸರಿಗೆ ಏನೇ ಆಕ್ಷೇಪಣೆಗಳಿದ್ದರೂ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಪತ್ರಕರ್ತನನ್ನು ಏಕಾಏಕಿ ಬಂಧಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಹರಣ ಮಾಡಿದ್ದಾರೆ. ರಕ್ಷಿಸಬೇಕಾದವರೆ ಕಾನೂನು ಉಲ್ಲಂಘಿಸಿ, ನೈತಿಕತೆ ಪಾಠ ಹೇಳುವ ಅರ್ಹತೆ ಅವರಿಗಿಲ್ಲ. ಒಂದು ನೋಟೀಸ್ ನೀಡದೆ, ಸ್ಪಷ್ಟನೆ ಕೋರದೆ ವರದಿಗಾರನ ಬಂಧಿಸಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಧ್ಯಮ ಹತ್ತಿಕ್ಕುವ ಯತ್ನ.

ಇತ್ತೀಚೆಗೆ ರಾಜ್ಯದಲ್ಲಿ ಮಾಧ್ಯಮಗಳಿಗೆ, ನಿರ್ಭೀತ ಪತ್ರಿಕೋದ್ಯಮಕ್ಕೆ ಕಡಿವಾಣ ಹಾಕಲು ಆಳುವವರು ನಡೆಸಿದ ಪ್ರಯತ್ನಗಳೇ ಪೊಲೀಸರು ಕಾನೂನುಬಾಹಿರ ಬಂಧನದಂತಹ ಉಗ್ರ ಕ್ರಮ ಕೈಗೊಳ್ಳಲು ಪ್ರೇರಣೆಯಾಗಿರಬಹುದು ಎನಿಸುತ್ತದೆ. ಪತ್ರಕರ್ತನ ಮೇಲಿನ ದೌರ್ಜನ್ಯವನ್ನು ಸರಕಾರ, ಗೃಹ ಸಚಿವರು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಲಿ’

-ಎಂ.ಎನ್.ಮಹದೇವಗೌಡ, ಸಂಪಾದಕರು ಸಾಕ್ಷಾತ್ ಸುದ್ದಿ ದಿನಪತ್ರಿಕೆ

 ► ಕೋಮುವಾದಿಗಳ ಪರವಾದ ‘ಪೊಲೀಸ್ ರಾಜ್ಯ’

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ವಾಸ್ತವದಲ್ಲಿ ಪೊಲೀಸರು ರಾಜ್ಯ ಆಗುತ್ತಿದ್ದು, ಅವರೆಲ್ಲ ಕೋಮುವಾದಿಗಳ ಪರ ಕೆಲಸ ಮಾಡುತ್ತಿದ್ದಾರೆಂಬ ಸಂಶಯ ಸೃಷ್ಟಿಯಾಗಿದೆ. ಸಾಮಾಜಿಕ ನ್ಯಾಯ, ಜಾತ್ಯತೀತ ತತ್ವದ ಪರವಾಗಿ ಕೆಲಸ ಮಾಡುವ ‘ವಾರ್ತಾ ಭಾರತಿ’ ಪತ್ರಿಕೆ ವರದಿಗಾರನ ಬಂಧನ ನಿಜಕ್ಕೂ ಆತಂಕಕಾರಿ. ಕೂಡಲೇ ವರದಿಗಾರನ ಬಿಡುಗಡೆ ಮಾಡಬೇಕು. ಆತನ ವಿರುದ್ಧದ ಸುಳ್ಳು ಮೊಕದ್ದಮೆ ಕೈಬಿಡಬೇಕು ಎಂದು ತಾನು ಗೃಹ ಸಚಿವ ರಾಮಲಿಂಗಾರೆಡ್ಡಿಗೆ ಮನವಿ ಸಲ್ಲಿಸುವೆ’

-ಎಚ್.ವಿ.ಅನಂತ ಸುಬ್ಬರಾವ್, ಹಿರಿಯ ಕಾರ್ಮಿಕ ಮುಖಂಡ

  ► ಅತಿರೇಕ, ಸರ್ವಾಧಿಕಾರಿ ಧೋರಣೆ

‘ಆಡಳಿತದ ಲೋಪವನ್ನು ಎತ್ತಿತೋರಿಸಿದ ವರದಿಗಾರನ ಬಂಧನ ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಮ. ಕೂಡಲೇ ಗೃಹ ಸಚಿವರು ಮಧ್ಯಪ್ರವೇಶ ಮಾಡಬೇಕು. ಅಲ್ಲದೆ, ಪೊಲೀಸ್ ಮಹಾ ನಿರ್ದೇಶಕ ಆರ್.ಕೆ.ದತ್ತಾ ಅವರು ದಕ್ಷಿಣ ಕನ್ನಡ ಎಸ್ಪಿಗೆ ನಿರ್ದೇಶನ ನೀಡಿ ಆಗಿರುವ ತಪ್ಪನ್ನು ತಿದ್ದಿಕೊಳ್ಳಬೇಕು. ಕರಾವಳಿ ಜಿಲ್ಲೆಗಳಲ್ಲಿ ಪ್ರತಿನಿತ್ಯ ಸಂಘರ್ಷ ನಡೆಯುತ್ತಿದ್ದು, ಅದನ್ನು ವರದಿ ಮಾಡಬಾರದು ಎಂದರೆ ಸಿಎಂ ಸಿದ್ದರಾಮಯ್ಯರ ಸರಕಾರ ತಪ್ಪು ದಾರಿಯಲ್ಲಿ ನಡೆಯುತ್ತಿದೆ ಎಂಬುದರ ಸೂಚಕ. ಮಾಧ್ಯಮ ಪ್ರತಿನಿಧಿಯ ಬಂಧನ ಅತೀರೇಕ ಮತ್ತು ಸರ್ವಾಧಿಕಾರಿ ಧೋರಣೆ ಸಲ್ಲ. ಕೂಡಲೇ ವರದಿಗಾರನ ಬಿಡುಗಡೆ ಮಾಡಬೇಕು’

-ಮಾರುತಿ ಮಾನ್ಪಡೆ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News